ಆಕ್ಸಿಸ್ ಬ್ಯಾಂಕ್: ಉಳಿತಾಯ ಖಾತೆ ಬಡ್ಡಿದರ ಇಳಿಕೆ
ಹೊಸದಿಲ್ಲಿ, ಆ.8: ಉಳಿತಾಯ ಖಾತೆಯ ಬಡ್ಡಿದರವನ್ನು 50 ಮೂಲ ಅಂಶದಷ್ಟು ಕಡಿತಗೊಳಿಸಲಾಗಿದೆ ಎಂದು ಖಾಸಗಿ ಕ್ಷೇತ್ರದ ಆಕ್ಸಿಸ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಉಳಿತಾಯ ಖಾತೆಯಲ್ಲಿರುವ 50 ಲಕ್ಷ ರೂ.ವರೆಗಿನ ಮೊತ್ತಕ್ಕೆ ಶೇ.3.5 ಬಡ್ಡಿದರ, ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ.4ರಷ್ಟು ಬಡ್ಡಿದರ ಇರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಜುಲೈ 31ರಂದು ಎಸ್ಬಿಐ ತನ್ನ ಬಹುತೇಕ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿತ್ತು. ಉಳಿತಾಯ ಖಾತೆಯಲ್ಲಿ 1 ಕೋಟಿ ರೂ.ಗಿಂತ ಕಡಿಮೆಯ ಠೇವಣಿಗೆ ಶೇ.3.5 ಬಡ್ಡಿದರ, ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ.4 ಬಡ್ಡಿದರ ನಿಗದಿಗೊಳಿಸಿತ್ತು. ಇತರ ಬ್ಯಾಂಕ್ಗಳೂ ಉಳಿತಾಯ ಖಾತೆಯ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಯಿದೆ.
Next Story