“ಬ್ಲೂವೇಲ್ ಚಾಲೆಂಜ್”: ಮನೆಬಿಟ್ಟು ಹೊರಟ ಶಾಲಾ ಬಾಲಕನ ರಕ್ಷಣೆ
ಪುಣೆ, ಆ.11: ಆನ್ಲೈನ್ ಗೇಮ್ ಬ್ಲೂವೇಲ್ ಚಾಲೆಂಜ್ ನೀಡಿದ ಗುರಿ ಪೂರ್ಣಗೊಳಿಸಲು ಮನೆ ತ್ಯಜಿಸಿದ ಸೋಲಾಪುರದ 14 ವರ್ಷದ ಬಾಲಕನ್ನು ಪುಣೆಯಲ್ಲಿ ಪೊಲೀಸರು ರಕ್ಷಿಸಿದ್ದಾರೆ.
ಇತ್ತೀಚೆಗೆ ಮುಂಬೈಯಲ್ಲಿ ಬಾಲಕನೋರ್ವ ಬ್ಲೂವೇಲ್ ಚಾಲೆಂಜ್ ಗೇಮ್ನ ಗೀಳು ಅಂಟಿಸಿಕೊಂಡು ಕಟ್ಟಡದಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಂಡಿದ್ದ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಪುಣೆಯತ್ತ ಸಂಚರಿಸುತ್ತಿದ್ದ ರಾಜ್ಯ ಸರಕಾರದ ಬಸ್ನ್ನು ಭಿಗ್ವಾನ್ ಸಮೀಪ ನಿಲ್ಲಿಸಿ ಬಾಲಕನನ್ನು ರಕ್ಷಿಸಿದರು. ಸೋಲಾಪುರದ ನಮ್ಮ ಸಹೋದ್ಯೋಗಿಗಳು ನಮಗೆ ಕೂಡಲೇ ಮಾಹಿತಿ ನೀಡಿದ ಕಾರಣಕ್ಕಾಗಿ ನಾವು ಬಸ್ ನಿಲ್ಲಿಸಿ ಬಾಲಕನನ್ನು ರಕ್ಷಿಸಿದೆವು. ಆತ ಬ್ಲೂವೇಲ್ ಚಾಲೆಂಜ್ ಗೇಮ್ ನೀಡಿದ ಗುರಿ ಪೂರೈಸುವ ದಿಶೆಯಲ್ಲಿದ್ದ ಎಂದು ಭಿಗ್ವಾನ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
Next Story