ಫ್ಲ್ಯಾಟ್ನ 4ನೆ ಮಹಡಿಯಿಂದ ಬಿದ್ದು ಗಗನಸಖಿ ಮೃತ್ಯು
ಕೊಲ್ಕತಾ,ಆ.17: ಇಂಡಿಗೊ ಏರ್ಲೈನ್ಸ್ನ ಉದ್ಯೋಗಿ ಯೊಬ್ಬರು ಫ್ಲ್ಯಾಟ್ನ ನಾಲ್ಕನೆ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಅಪಾರ್ಟ್ಮೆಂಟ್ನ ಕಿಟಕಿಯ ಮೂಲಕ ಇವರು ಬಿದ್ದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೃತಪಟ್ಟ ಕ್ಲಾರಾ ಶಿಲ್ಲಾಂಗ್ ನಿವಾಸಿಯಾಗಿದ್ದು, ಇಂಡಿಗೋ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿ ದುಡಿಯುತ್ತಿದ್ದರು.
ಬುಧವಾರ ಬೆಳಗ್ಗೆ ಕ್ಲಾರಾರ ಮೃತದೇಹ ಪತ್ತೆಯಾಗಿದೆ. ಆದರೆ ಇದು ಆತ್ಮಹತ್ಯೆಯೇ, ಅಥವಾ ಆಕಸ್ಮಿಕವಾಗಿ ಬಿದ್ದಿದ್ದಾರೆಯೇ ಎಂದು ದೃಢಪಡಿಸಲಿಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ದಿವಸ ಕ್ಲಾರಾರ ಕೋಣೆಯಲ್ಲಿ ಗೆಳೆಯನ ಜನ್ಮದಿನಾಚರಣೆ ನಡೆದಿತ್ತು. ಇಬ್ಬರು ಗೆಳೆಯರು ಈಕೆಯೊಂದಿಗೆ ಫ್ಲ್ಯಾಟ್ನಲ್ಲಿದ್ದರು. ತನಿಖೆಗೆ ಸಂಬಂಧಿಸಿ ಕ್ಲಾರಾರ ಗೆಳೆಯರನ್ನು ಪ್ರಶ್ನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಂಡಿಗೊ ಅಧಿಕಾರಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Next Story