ರಾಷ್ಟ್ರಪತಿ, ಪ್ರಧಾನಿಯಿಂದ ಬಕ್ರೀದ್ ಶುಭಾಶಯ
ಹೊಸದಿಲ್ಲಿ,ಸೆ.2 : ದೇಶದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮುಸ್ಲಿಮರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈದ್-ಉಲ್-ಅಝ್ ಹಾದ ಶುಭಾಶಯ ಸಲ್ಲಿಸಿದ್ದಾರೆ.
``ಈದ್-ಉಲ್-ಅಝ್ ಹಾ ಶುಭ ದಿನದಲ್ಲಿ ನನ್ನ ಎಲ್ಲಾ ಸಹ ನಾಗರಿಕರಿಗೆ, ಮುಖ್ಯವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ಶುಭಾಶಯಗಳು,'' ಎಂದು ರಾಷ್ಟ್ರಪತಿ ಕೋವಿಂದ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಹಬ್ಬದ ಶುಭಾಶಯ ಕೋರಿದ್ದು ದೇಶದಲ್ಲಿ ಸಾಮರಸ್ಯ, ಸಹೋದರತೆಯಿರಲಿ ಎಂದು ಹಾರೈಸಿದ್ದಾರೆ.
Greetings to all my fellow citizens, especially to my Muslim brothers & sisters in India & abroad, on Idu’l Zuha #PresidentKovind
— President of India (@rashtrapatibhvn) September 2, 2017
Best wishes on Id-ul-Zuha. May the spirit of harmony, brotherhood and togetherness be furthered in our society.
— Narendra Modi (@narendramodi) September 2, 2017
Next Story