ಹಿರಿಯ ಬಾಲಿವುಡ್ ನಟಿ ಶಕೀಲಾ ನಿಧನ
ಮುಂಬೈ,ಸೆ.21: ಗುರುದತ್ ಅವರ ‘ಆರ್ ಪಾರ್’ ಮತ್ತು ‘ಸಿಐಡಿ’ಗಳಂತಹ ಚಿತ್ರಗಳಲ್ಲಿನ ತನ್ನ ಅಭಿನಯದ ಮೂಲಕ 1950-60ರ ದಶಕಗಳಲ್ಲಿ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ಹಿರಿಯ ನಟಿ ಶಕೀಲಾ(82) ಅವರು ಬುಧವಾರ ರಾತ್ರಿ ಇಲ್ಲಿಯ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಕೀಲಾ ಹಲವು ಕಾಯಿಲೆಗಳಿಂದ ನರಳುತ್ತಿದ್ದರು. ಗುರುವಾರ ಬೆಳಿಗ್ಗೆ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಯಿತು ಎಂದು ಅವರ ಸಂಬಂಧಿ ನಾಸಿರ್ ಖಾನ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
Next Story