ದೇಶದಲ್ಲಿ 2 ಲಕ್ಷ ನಕಲಿ ಕಂಪೆನಿಗಳ ಪತ್ತೆ
ಹೊಸದಿಲ್ಲಿ, ಅ.6: ಐನೂರು ಹಾಗೂ ಸಾವಿರ ಮುಖಬೆಲೆಯ ನೋಟು ನಿಷೇಧದ ಬಳಿಕ ಕೇಂದ್ರ ಸರಕಾರ 2 ಲಕ್ಷಕ್ಕೂ ಅಧಿಕ ಕಂಪೆನಿಗಳು ಅಕ್ರಮವಾಗಿ ಬ್ಯಾಂಕ್ ಗಳಲ್ಲಿ 4,500 ಕೋಟಿ ರೂ. ಹಣ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.
ಕಪ್ಪು ಹಣ ತಡೆಯಲು ಹೆಜ್ಞೆ ಇರಿಸಿರುವ ಕೇಂದ್ರ ಸರಕಾರಕ್ಕೆ ಇದರೊಂದಿಗೆ ಯಶಸ್ಸು ಲಭವಿಸಿದೆ.
ನಕಲಿ ಕಂಪೆನಿಗಳ ಬಗ್ಗೆ 13 ಬ್ಯಾಂಕ್ ಗಳಲ್ಲಿ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಗಳಲ್ಲಿ 10ಕ್ಕೂ ಅಧಿಕ ಹೊಸ ಖಾತೆ ತೆರೆದು ವಹಿವಾಟು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Next Story