ಗೂರ್ಖಾ ಜನಮುಕ್ತಿ ಮೋರ್ಚಾ ಮುಖ್ಯಸ್ಥನ ಬೆಂಬಲಿಗರ ಮನೆಗಳಿಗೆ ಬೆಂಕಿ
ಡಾರ್ಜಿಲಿಂಗ್, ಅ. 15: ಡಾರ್ಜಿಲಿಂಗ್ನಲ್ಲಿ ಗೂರ್ಖಾ ಜನಮುಕ್ತಿ ಮೋರ್ಚಾ ವರಿಷ್ಠ ಬಿಮಲ್ ಗುರುಂಗ್ ಅವರ ನಿವಾಸದ ಸಮೀಪ ರವಿವಾರ ನಾಲ್ಕು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಂಗು ಮನೆ ಹಾಗೂ ಪಕ್ಷದ ಕಚೇರಿಗೆ ಬೆಂಕಿ ಬಿದ್ದಿಲ್ಲ. ಗುರುಂಗು ಅವರ ಮನೆಯ ಎದುರಿನಲ್ಲಿರುವ ಮನೆಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಡಾರ್ಜಿಲಿಂಗ್ ವಲಯದ ಐಜಿ ಮನೋಜ್ ವರ್ಮಾ ತಿಳಿಸಿದ್ದಾರೆ.
ಬೆಂಕಿ ಬಿದ್ದ ಮನೆಗಳು ಗುರುಂಗ ಅವರ ಬೆಂಬಲಿಗರಾದ ದಿನೇಶ್ ತಿಂಗ್, ರಾಜೇಶ್ ತಿಂಗ್ , ತಪ್ರಭಿನ್ ತಿಂಗ್ ಹಾಗೂ ಅಮಿತ್ ಚಂದ್ ಅವರಿಗೆ ಸೇರಿದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯರಾತ್ರಿ ಹತ್ತಿಕೊಂಡ ಬೆಂಕಿ ರವಿವಾರ ಮುಂಜಾನೆ 3 ಗಂಟೆಗೆ ಹತೋಟಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.
Next Story