ಚಂದ್ರ ಎಂ. ಪಳ್ಳಿ
ಉಡುಪಿ, ಎ. 13: ಗದಗ ಜಿಲ್ಲೆ ನರಗುಂದದ ಪ್ರಸಿದ್ಧ ಹೊಟೇಲ್ ಉದ್ಯಮಿ ಚಂದ್ರ ಎಂ.ಪಳ್ಳಿ ಯಾನೆ ಸಿ.ಎಂ.ಪಳ್ಳಿ (88) ಹೃದಯಾಘಾತದಿಂದ ಬುಧವಾರ ಉಡುಪಿ ಕೊರಂಗ್ರಪಾಡಿಯ ತಮ್ಮ ಪುತ್ರಿ ಮನೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನರಗುಂದದಲ್ಲಿ ಹಲವು ದಶಕಗಳ ಕಾಲ ಹೊಟೇಲ್ ಉದ್ಯಮ ನಡೆಸಿದ್ದ ಪಳ್ಳಿ ಅವರು, ನಾಲ್ಕೈದು ವರ್ಷಗಳ ಹಿಂದೆ ಉದ್ಯಮವನ್ನು ಮಕ್ಕಳಿಗೆ ಬಿಟ್ಟುಕೊಟ್ಟು ವಿಶ್ರಾಂತ ಜೀವನ ನಡೆಸುತ್ತಿದ್ದರು.
Next Story