ಮಾಧವ ಉಳ್ಳಾಲಬೈಲ್
ಉಳ್ಳಾಲ ಜೂ.18: ಉಳ್ಳಾಲಬೈಲು ನಿವಾಸಿ ಮಾಧವ ಉಳ್ಳಾಲಬೈಲ್ ಅವರು ರವಿವಾರ ಸಂಜೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಅಲ್ಪಕಾಲದ ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.
ವಕೀಲರ ಕಚೇರಿಗಳಲ್ಲಿ ಗುಮಾಸ್ತರಾಗಿ ಸುಮಾರು 54 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಾಧವ ಉಳ್ಳಾಲಬೈಲು ಅವರು ಪ್ರಸ್ತುತ ಮಂಗಳೂರಿನ ವಕೀಲ ಬಿ.ಎ.ಮುಹಮ್ಮದ್ ಹನೀಫ್ ಅವರ ಬಳಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರ ಅಂತ್ಯಸಂಸ್ಕಾರವು ಇಂದು ಬೆಳಗ್ಗೆ ತೊಕ್ಕೊಟ್ಟು ಚೊಂಬುಗುಡ್ಡೆಯ ಸ್ಮಶಾನದಲ್ಲಿ ನೆರವೇರಿತು.
Next Story