ಕೊಳ್ಳೇಗಾಲ: ಇಲ್ಲಿನ ಹಳೇ ಕುರುಬರ ಬಡಾವಣೆಯ ನಿವಾಸಿ ಅವಿನಾಶ್(29) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ ತಾಯಿ, ಓರ್ವ ತಮ್ಮ ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ನಗರದ ಮಡಿವಾಳ ಜನಾಂಗದ ರುದ್ರಭೂಮಿಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.