ಮಂಗಳೂರು, ಆ.23: ಶ್ರೀ ಕಾಳಿಕಾಂಬಾ ನಾಯಕ ದೇವಸ್ಥಾನದ ಮಾಜಿ ಮೊಕ್ತೇಸರ ಮುನಿಯಾಲ್ ದಾಮೋದರ ಆಚಾರ್ಯರ ಪತ್ನಿ, ನಗರದ ಕೊಡಿಯಾಲ್ ಗುತ್ತು ನಿವಾಸಿ ಪ್ರೇಮಾ ಆಚಾರ್ಯ (69) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.