ಟ್ರಾನ್ಸ್ಫಾರ್ಮರ್ಗಳ ಕೆಳಗಿನ ಅಪಾಯ...
ಮಾನ್ಯರೆ,
ಮೆಸ್ಕಾಂನವರು ವಿದ್ಯುತ್ ತಂತಿ ಹಾದು ಹೋಗುವ ದಾರಿಯಲ್ಲಿ ತಂತಿಗೆ ತಾಗುವ ಮರಗಳ ಗೆಲ್ಲುಗಳನ್ನು ತೆರವುಗೊಳಿಸುತ್ತಾರೆ. ಆದರೆ ಹೆಚ್ಚಿನ ಟ್ರಾನ್ಸ್ಫಾರ್ಮರ್ಗಳಿಂದ ಉಂಟಾಗುವ ಬೆಂಕಿ ಕಿಡಿಯ ಅಪಾಯವನ್ನು ತಪ್ಪಿಸಲು, ಅವುಗಳ ಸುತ್ತಲೂ ತಡೆಬೇಲಿಯಾಗಲಿ ಅಥವಾ ನೆಲದ ಮೇಲೆ ಜಲ್ಲಿಕಲ್ಲುಗಳನ್ನಾಗಲಿ ಹರಡುತ್ತಿಲ್ಲ. ಹೀಗಾಗಿ ಟ್ರಾನ್ಸ್ಫಾರ್ಮರ್ಗಳ ಕೆಳಗಡೆ ಹುಲ್ಲು, ಕಳೆಗಿಡಗಳು ಬೆಳೆದಿರುತ್ತವೆ.
ಬಿಸಿಲಿನ ಬಿಸಿಗೆ ಒಣಗುವ ತರಗೆಲೆ, ಹುಲ್ಲಿನ ಮೇಲೆ ಬೆಂಕಿಯ ಸಣ್ಣ ಕಿಡಿಯೊಂದು ಬಿದ್ದರೂ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಈ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರು ಕೂಡಲೇ ಗಮನಹರಿಸಿ ಮುಂದಿನ ದಿನಗಳಲ್ಲಾದರೂ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ ಸಂಭವನೀಯ ದೊಡ್ಡ ಅಪಾಯಗಳನ್ನು ತಪ್ಪಿಸುತ್ತಾರೆಯೇ...?
Next Story