Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಣದ ಮದವೇರಿದ ನಿಝಾಮ್ ಎಂಬ ಈ ಕೊಲೆಗಾರ...

ಹಣದ ಮದವೇರಿದ ನಿಝಾಮ್ ಎಂಬ ಈ ಕೊಲೆಗಾರ ಹೇಗಿದ್ದ ?

ಎ. ಎಂಎ. ಎಂ21 Jan 2016 2:56 PM IST
share
ಹಣದ ಮದವೇರಿದ ನಿಝಾಮ್ ಎಂಬ ಈ ಕೊಲೆಗಾರ ಹೇಗಿದ್ದ ?

ಗೇಟು ತೆಗೆಯಲು ತಡಮಾಡಿದ ಎಂದು ಬಡಪಾಯಿ ವಾಚ್ ಮ್ಯಾನ್ ನನ್ನೇ ಕಾರಿನಡಿಗೆ ಹಾಕಿ ಜಜ್ಜಿಕೊಂದ ದುಷ್ಟನ ಪರಿಚಯ 

  ತೃಶೂರ್; ಹಣದ ಅಮಲಿನಲ್ಲಿ ತೇಲಾಡಿ ಆಡಂಬರದಲ್ಲಿ ಜೀವಿಸುತ್ತಿದ್ದ ತೃಶೂರ್‌ನ ಮುಹಮ್ಮದ್ ನಿಝಾಮ್ ಇನ್ನು ಜೈಲಿನ ಕಂಬಿಯನ್ನು ಎಣಿಸಬೇಕಾಗಿದೆ. ಚಂದ್ರ ಬೋಸ್ ಎಂಬ ಸಾಮಾನ್ಯ ವ್ಯಕ್ತಿಯ ಮೇಲೆ ದುಬಾರಿಕಾರನ್ನು ಗುದ್ದಿ ಕೊಂದು ಹಾಕಿದ ಕೇಸು ಕೇರಳೀಯರ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣ ದೇಶಾದಂತ್ಯ ಸುದ್ದಿಯಾಗುವುದರೊಂದಿಗೆ ಕೋರ್ಟನ್ನು ದಾರಿ ತಪ್ಪಿಸಬಹುದು ಅಥವಾ ನ್ಯಾಯವನ್ನು ಖರೀದಿಸಬಹುದೆಂಬ ಪ್ರಯತ್ನ ಸೋಲುಂಡಿದೆ. ಕೋರ್ಟು 24 ವರ್ಷಗಳ ಜೀವಪರ್ಯಂತ ಶಿಕ್ಷೆ ಮತ್ತು 80 ಲಕ್ಷ ದಂಡ ಮತ್ತು ಇದರಲ್ಲಿ 50 ಲಕ್ಷ ರೂಪಾಯಿಯನ್ನು ಚಂದ್ರ ಬೋಸ್ ನ ಕುಟುಂಬಕ್ಕೆ ನೀಡಲು ತೀರ್ಪಿತ್ತಿದೆ. ಮಾತ್ರವಲ್ಲ ಕೊಲೆಗಾರನ ಪತ್ನಿಗೂ ಸುಳ್ಳು ಸಾಕ್ಷಿ ಹೇಳಿದುದಕ್ಕಾಗಿ ಕೇಸು ಹಾಕಲು ಕೋರ್ಟು ಆದೇಶಿಸಿದೆ.

   ಈ ತೀರ್ಪಿನಿಂದ ಅತ್ಯಾಂಡಬರದಲ್ಲಿ ಸ್ವಂತ ನೆಲೆಯನ್ನು ಮರೆಯಬಾರದೆಂಬ ಪಾಠ ಲಭಿಸಿತು. ನಿಝಾಮ್‌ಗೆ ಎಪ್ಪತ್ತು ಕೋಟಿಯ ಇಪ್ಪತ್ತಕ್ಕೂ ಅಧಿಕ ಆಡಂಬರ ಕಾರುಗಳಿದ್ದವು. ಮಗನನ್ನು ಶಾಲೆಗೆ ಕಳಿಸಲು ಒಂದು ಫೆರಾರಿ ಕಾರು, ಆರು ಕೋಟಿಗೂ ಅಧಿಕ ಬೆಲೆಯ ರೋಲ್ಸ್‌ರಾಯ್ ಫ್ಯಾಂಟಂ ಎರಡು ಕಾರುಗಳು, ಮೂರು ಕೋಟಿ ಬೆಲೆಬಾಳುವ ಬಂಟ್ಲಿ, ಕೋಟ್ಯಂತರ ಬೆಲೆಬಾಳುವ ಬೈಕುಗಳು ಅವನಲ್ಲಿದ್ದುವು. ಲಾಂಬರ್‌ಗ್ನಿಮ ಜಾಗ್ವಾರ್, ಆಸ್ಟನ್ ಮಾರ್ಟಿನ್, ರೋಡ್ ರೇಂಜರ್, ಹಮ್ಮರ್‌ಮ ಫೋರ್ಸೆ, ಫೆರಾರಿ, ಬಿಎಂಡಬ್ಲ್ಯು, ಇಂತಹ ವಿವಿಧ ಮಾಡೆಲ್‌ಗಳು ನಿಝಾಮ್ ಬಳಿಯಿದ್ದುವು. ಮುಹಮ್ಮದ್ ನಿಝಾಂ ಬೈಕುಗಳ ಅಲಂಕಾರಕ್ಕೆ ಅಸ್ಥಿಪಂಜರಗಳನ್ನು ಬಳಸುತ್ತಿದ್ದ. ತಲೆಬುರುಡೆ ಎದೆಗೂಡು ಕಾಲುಗಳು ಸಹಿತ ಬೈಕುಗಳಷ್ಟು ಉದ್ದದ ಅಸ್ಥಿಪಂಜರ ರೂಪಗಳನ್ನು ಅವನ ಬೈಕುಗಳು ಹೊಂದಿದ್ದವು. ಸೈಲನ್ಷರ್‌ನ್ನು ಕಳಚಿ ಕಬ್ಬಿಣಗಳ ಸಂಕಲೆಗಳಿಂದ ಇದನ್ನು ಬಲವಾಗಿ ಇರಿಸಲಾಗಿತ್ತು. ಹಲೆತಲೆಮಾರಿನ ಬೈಕ್ ರಾಜ್‌ದೂತ್‌ಗೆ ಅಸ್ತಿಪಂಜರ ರೂಪ ಮಾಡಿ ತೃಶೂರಿನಂತಹ ಗ್ರಾಮ ಪ್ರದೇಶಗಳಲ್ಲಿ ಅತಿವೇಗದಿಂದ ಅವನು ಓಡಾಡುತ್ತಿದ್ದ.

    ಬೈಕ್‌ಗಳ ಶೋಕಿ ನಂತರ ಬೆಲೆಬಾಳುವ ಕಾರುಗಳ ಮೇಲೆ ಬಿದ್ದಿತ್ತು. ತಾನು ಇಷ್ಟಪಡುತ್ತಿದ್ದ ನಂಬರ್ ಪ್ಲೇಟ್‌ಗೆ 777ನಂಬ್ರ ಸಿಗಲಿಕ್ಕೂ ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಆದರೆ, ತನ್ನ ಮನೆಯ ಕೆಲಸಗಾರರೊಂದಿಗೆ ಉತ್ತಮವಾಗಿ ವರ್ತಿಸುತ್ತಿರಲಿಲ್ಲ. ಕರುಣೆಯಿಲ್ಲದವನಂತೆ ವ್ಯವಹರಿಸುತ್ತಿದ್ದ. ನೀರು ಕೂಡ ಅನುಮತಿಯಿಲ್ಲದೆ ಕುಡಿಯುವುದಕ್ಕೆ ಅವನು ಬಿಡುತ್ತಿರಲಿಲ್ಲ. ಹೊಡೆಯಬೇಡಿ ಎಂದು ಬೇಡಿಕೊಂಡ ವ್ಯಕ್ತಿ ಮೇಲೆಯೇ ಕಾರು ಓಡಿಸಿದ ಈ ಮನುಷ್ಯನ ಮನಸಿನ ನ್ಯೂನತೆಗಳೇ ಈ ಆಡಂಬರ ಜೀವನದಲ್ಲಿ ಬೆಳಕಿಗೆ ಬಂದಿವೆ.

  

 ತೃಶೂರ್, ಮುಂಬೈ, ಬೆಂಗಳೂರುಗಳಲ್ಲಿ ಅವನು ಹೊಂದಿರುವ ಮನೆಗಳಲ್ಲಿ ಈ ಎಲ್ಲ ವಾಹನಗಳಿವೆ. ಇವನ್ನೆಲ್ಲ ಸಂಪಾದಿಸಲು ಅವನಿಗೆ ಹೇಗೆ ಸಾಧ್ಯವಾಯಿತು ಎಂಬ ತನಿಖೆಯೂ ಈಗ ಆರಂಭವಾಗಿದೆ. ಚಂದ್ರಬೋಸ್ ಕೊಲೆ ಪ್ರಕರಣದಲ್ಲಿ ಬಂಧಿತನಾಗುವುದರೊಂದಿಗೆ ಈ ಎಲ್ಲ ವಿಷಯಗಳು ಬೆಳಕಿಗೆ ಬಂದವು. ಇಪ್ಪತ್ತಕ್ಕೂ ಹೆಚ್ಚು ಆಡಂಬರದ ಕಾರುಗಳನ್ನು ಹೊಂದಿರುವ ಏಕೈಕ ಉದ್ಯಮಿ ನಿಝಾಮ್ ಆಗಿದ್ದಾನೆ ಎನ್ನಲಾಗುತ್ತಿದೆ. ಈತನು 5000ಕೋಟಿ ರೂ.ಗೂ ಮಿಕ್ಕಿದ ಆಸ್ತಿಯ ಒಡೆಯನಾಗಿದ್ದಾನೆ. ಕೈಯಲ್ಲಿ ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಅಹಂಕಾರದಲ್ಲಿ ಸೆಕ್ಯುರಿಟಿ ಕೆಲಸಗಾರ ಚಂದ್ರಬೋಸ್‌ರನ್ನು ಕಾರು ಡಿಕ್ಕಿ ಹೊಡೆಸಿ ಕೊಂದಿರುವುದಾಗಿ ಅವನ ಅಪರಾಧ ಸಾಬೀತಾಗಿದೆ. ಈ ಉದ್ಯಮಿಯ ಆಸ್ತಿಪಾಸ್ತಿ ಎಲ್ಲೆಲ್ಲಿ ಎಷ್ಟೆಷ್ಟು ಇವೆ ಎಂದು ಇನ್ನೂ ಖಚಿತವಾಗಿಲ್ಲ. ಪ್ರತಿ ವರ್ಷ ನೂರು ಕೋಟಿ ರೂ. ಆದಾಯ ಗಳಿಸುತ್ತಿದ್ದನೆನ್ನಲಾಗುತ್ತಿದೆ. ಭಾರತದಲ್ಲಿಯೂ ವಿದೇಶ, ರಾಷ್ಟ್ರದಲ್ಲಿಯೂ ಹೊಟೇಲ್ ಇವೆ ಮತ್ತು ತಿರುನ್ವೇಲಿಯಲ್ಲಿ ಕಿಂಗ್ ಬೀಡಿ ಕಂಪನಿಯಿದೆ ಎಂದು ವರದಿಯಾಗಿವೆ. ಹಣವಿರುವಾಗ ನಿಝಾಮ್‌ನ ನೆರವಿಗೆ ಎಲ್ಲ ರಾಜಕೀಯದವರು ಬರುತ್ತಿದ್ದರು. ಆದರೆ ಕೊಲೆಕೇಸಲ್ಲಿ ಸಿಲುಕಿ ಜನರಾಕ್ರೋಶ ಹೆಚ್ಚಿದ್ದರಿಂದ ಇವರಲ್ಲಿ ಹೆಚ್ಚಿನವರು ದೂರವಾಗಿದ್ದಾರೆ. ಆನಂತರ ಕೆಲವರು ನಿಝಾಮ್‌ನ ಬೆಂಬಲಕ್ಕೆ ಬಂದರು ಕೊಚ್ಚಿಯ ಪ್ರಬಲ ಕಾಂಗ್ರೆಸ್ ನಾಯಕನೊಬ್ಬನಿಗೆ ನಿಝಾಮ್ ಸಂಬಂಧಿಕ ಎಂದು ಹೇಳಲಾಗುತ್ತಿದೆ. ಈ ರಾಜಕಾರಣಿಯ ಶಿಷ್ಯರ ಒಂದು ಗುಂಪು ನಿಝಾಮ್ ರಕ್ಷಣೆಗೆ ಪ್ರಯತ್ನಿಸಿತ್ತೆನ್ನಲಾಗಿದೆ. ಕಾರು ಢಿಕ್ಕಿ ಆಕಸ್ಮಿಕ ಘಟನೆ ಮತ್ತು ಆತ ಮಾನಸಿಕ ವೈಕಲ್ಯವಿರುವ ವ್ಯಕ್ತಿ ಎಂದು ವಾದಿಸಲಾಗಿತ್ತು, ಆದರೆ ಈ ಯಾವ ವಾದಗಳೂ ಕೋರ್ಟ್ ಪರಿಗಣನೆಗೆ ಬಂದಿಲ್ಲ.

ಗಲ್ಫ್‌ನಲ್ಲಿ ನಿಝಾಮ್‌ಗೆ ಅನೇಕ ಬಿಸಿನೆಸ್ ಕೇಂದ್ರಗಳಿವೆ. ಪೊಲೀಸರಲ್ಲಿ ಜಗಳ ತೆಗೆದುದು ಇತ್ಯಾದಿ ಪ್ರಕರಣಗಳು ನಿಝಾಮ್‌ನ ಮೇಲಿದೆ. ಹೀಗೆ ಹಲವು ಸ್ಥಳಗಳಲ್ಲಿ ಹದಿನಾಲ್ಕು ಕೇಸುಗಳಿವೆ. ಒಂಬತ್ತು ವರ್ಷದ ಪುತ್ರನಿಂದ ಫೆರಾರಿ ಕಾರು ಓಡಿಸಿ ಅದರ ವೀಡಿಯೋ ಯುಟ್ಯೂಬ್‌ಗೆ ಪೋಸ್ಟ್ ಮಾಡಿದ ಕೇಸು ಇದರಲ್ಲಿ ಒಳಗೊಂಡಿದೆ

ಕೃಪೆ ಮರುನಾಡನ್ ಮಳೆಯಾಳಿ

share
ಎ. ಎಂ
ಎ. ಎಂ
Next Story
X