ನಿವೃತ್ತ ಐಎಎಸ್ ಅಧಿಕಾರಿ ಜೆ. ಸತ್ಯನಾರಾಯಣ`ಆಧಾರ್'ನ ನೂತನ ಅಧ್ಯಕ್ಷ
ಹೊಸದಿಲ್ಲಿ, ಸೆ.6: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಪ್ರಾಧಿಕಾರ'(ಯುಐಡಿಎಐ) ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಜೆ. ಸತ್ಯನಾರಾಯಣ ಅವರು ನೇಮಕಗೊಂಡಿದ್ದಾರೆ.
ಆಂಧ್ರಪ್ರದೇಶ ಕೇಡರ್ ನ 1977 ತಂಡದ ಐಎಎಸ್ ಅಧಿಕಾರಿ ಸತ್ಯನಾರಾಯಣ ಅವರ ಹುದ್ದೆ ಅರೆಕಾಲಿಕವಾಗಿದೆ. ಇವರೊಂದಿಗೆ ಇಬ್ಬರು ಅರೆಕಾಲಿಕ ಸದಸ್ಯರನ್ನು ಕೇಂದ್ರ ಸಚಿವ ಸಂಪುಟ ನೇಮಕ ಮಾಡಿದೆ. ಅವರೆಂದರೆ ರಾಜೇಶ್ ಜೈನ್ ಮತ್ತು ಆನಂದ್ ದೇಶಪಾಂಡೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಪ್ರಾಧಿಕಾರ'(ಯುಐಡಿಎಐ) ಮೊದಲ ಅಧ್ಯಕ್ಷ ನಂದನ್ ನಿಲೇಕಣಿ 2014ರಲ್ಲಿ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಹುದ್ದೆ ತೆರವಾಗಿತ್ತು
Next Story