ಅಡ್ವೋಕೇಟ್ ಅಲಾವುದ್ದೀನ್ ಅನ್ಸಾರಿ ನಿಧನ
ಹೈದರಾಬಾದ್, ಅಕ್ಟೋಬರ್ 19: ಐಎನ್ಎಲ್ ಸ್ಥಾಪಕ ನಾಯಕರಲ್ಲೊಬ್ಬರು ಮತ್ತು ಅದರ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾದ ಅಡ್ವೋಕೇಟ್ ಅಲಾವುದ್ದೀನ್ ಅನ್ಸಾರಿ(64) ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ. ಇಬ್ರಾಹೀಂ ಸುಲೇಮಾನ್ ಸೇಟ್ರೊಂದಿಗೆ ಇಂಡಿಯನ್ ನ್ಯಾಶನಲ್ ಲೀಗ್ನ್ನು ಸ್ಥಾಪಿಸಲು ಮುಂಚೂಣಿಯಲ್ಲಿ ನಿಂತು ಅವರು ಕೆಲಸ ಮಾಡಿದ್ದರು. ಆಂಧ್ರ ಐಎನ್ಎಲ್ನ ಪ್ರಥಮ ರಾಜ್ಯಾಧ್ಯಕ್ಷರು ಕೂಡಾ ಆಗಿದ್ದರು.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಪರ್ಸನಲ್ ಲಾ ಬೋರ್ಡ್, ತೆಲಂಗಾಣ ಲಿಬರೇಷನ್ ಕೌನ್ಸಿಲ್, ಆಲ್ ಇಂಡಿಯಾ ಮಜ್ಲಿಸೆ ಮುಶಾವರ ಇವುಗಳ ಸದಸ್ಯರು ಮುಂತಾದ ಅನೇಕ ಹೊಣೆಗಾರಿಕೆಗಳನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದರು. ವಕೀಲರಾಗಿಯೂ ಪ್ರಸಿದ್ಧರಾಗಿದ್ದರು. ಅವರ ನಿಧನಕ್ಕೆ ಐಎನ್ಎಲ್ ಅಖಿಲಭಾರತ ಅಧ್ಯಕ್ಷ ಪ್ರೊ. ಮುಹಮ್ಮದ್ ಸುಲೇಮಾನ್, ಪ್ರಧಾನಕಾರ್ಯದರ್ಶಿ ಅಹ್ಮದ್ ದೆವರ್ಕೋವಿಲ್ ಹಾಗೂ ಐಎನ್ಎಲ್ ಕೇರಳ ರಾಜ್ಯ ಘಟಕ ಶೋಕ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.
Next Story