ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಮುನವ್ವಾರ್ ಸಲೀಮ್ ಪಿಎ ಅರೆಸ್ಟ್
ಹೊಸದಿಲ್ಲಿ, ಅ.30: ಪಾಕ್ ನ ಗೂಢಚಾರನಿಗೆ ಸಹಾಯ ಮಾಡಿದ ಆರೋಪದಲ್ಲಿ ಸಮಾಜವಾದಿ ರಾಜ್ಯ ಸಭಾ ಸದಸ್ಯ ಮುನವ್ವಾರ್ ಸಲೀಮ್ ಅವರ ಆಪ್ತ ಕಾರ್ಯದರ್ಶಿ ಪರ್ಹತ್ ಅಖ್ತರ್ ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಭಾರತದ ರಕ್ಷಣಾ ಇಲಾಖೆಯ ಮಾಹಿತಿ ಹಾಗೂ ದಾಖಲೆಗಳನ್ನು ಮತ್ತು ಗಡಿಯಲ್ಲಿ ಬಿಎಸ್ಎಫ್ ಯೋಧರ ನೇಮಕ ಕುರಿತ ಗೌಪ್ಯ ಮಾಹಿತಿಯನ್ನು ರವಾನೆ ಮಾಡಲು ಪಾಕ್ನ ಹೈ ಕಮಿಷನರ್ ಕಚೇರಿ ಅಧಿಕಾರಿಗಳಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ . ಈ ಸಂಬಂಧ ಶುಕ್ರವಾರ ಜೋಧಪುರ್ ಮೂಲದ ಪಾಸ್ಪೋರ್ಟ್ ಹಾಗೂ ವಿಸಾ ಏಜೆಂಟ್ ಮೆಹಮೂದ್ ಅಕ್ತರ್ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು.
Next Story