ನಕ್ಸಲರ ವೇಷ ಹಾಕಿ ವೃದ್ಧ ದಂಪತಿಯ ದರೋಡೆ !
ತಾಮರಶ್ಶೇರಿ, ಡಿಸೆಂಬರ್ 3: ಕೋವಿಹಿಡಿದು ಬಂದ ಇಬ್ಬರು ನಾವು ನಕ್ಸಲರೆಂದು ಹೇಳಿ ವೃದ್ಧ ದಂಪತಿಯನ್ನು ಬೆದರಿಸಿ ಎಂಟೂವರೆ ಪವನ್ ಚಿನ್ನಾಭರಣವನ್ನು ದರೋಡೆಗೈದ ಘಟನೆ ಕೊಡಂಚೇರಿ ಪಂಚಾಯತ್ನ ಮುರಂಬಾತ್ತ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗುರುವಾರ ರಾತ್ರಿ ಒಂಬತ್ತು ಗಂಟೆಗೆ ಪಯ್ಯೆನಿಕುಯಿಪ್ಪಿಲ್ ಆಗಸ್ಟಿನ್, ಪತ್ನಿ ಗ್ರೇಸಿ ಎಂಬವರಿಗೆ ಕೋವಿ ತೋರಿಸಿ ಇವರು ಆಭರಣಗಳನ್ನು ಕಿತ್ತು ಪರಾರಿಯಾಗಿದ್ದಾರೆ.
ಮಾವೋವಾದಿಗಳೆಂದು ನಮಗೆ ಅಕ್ಕಿ ಬೇಕಿದೆ ಎಂದು ಹೇಳಿ ಇವರು ಮನೆಯೊಳಕ್ಕೆ ಪ್ರವೇಶಿಸಿದ್ದರು. ಆಭರಣಗಳನ್ನು ಕಿತ್ತುಕೊಂಡ ಬಳಿಕ ವೃದ್ಧ ದಂಪತಿಗಳನ್ನು ಕಟ್ಟಿಹಾಕಿ ದರೋಡೆಕಾರರು ಹೊರಟು ಹೋಗಿದ್ದಾರೆ. ಪತಿಪತ್ನಿ ಇಬ್ಬರೇ ಮನೆಯಲ್ಲಿ ವಾಸವಿದ್ದರು. ನಂತರ ಇವರ ಕೂಗಾಟ ಕೇಳಿ ಊರಿನವರು ಬಂದು ನೋಡಿದಾಗ ದಂಪತಿ ದರೋಡೆಗೊಳಗಾದ ವಿಷಯಗೊತ್ತಾಗಿತ್ತು. ಕೊಡಂಚೇರಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.
Next Story