ರಸ್ತೆ ಮಧ್ಯೆ ಪೊಲೀಸನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ: ವೀಡಿಯೊ ನೋಡಿ
ರಾಂಚಿ, ಡಿ. 3: ಝಾರ್ಕಂಡ್ನ ರಾಜಧಾನಿ ರಾಂಚಿಯಲ್ಲಿ ಮಹಿಳೆಯೊಬ್ಬರು ರಸ್ತೆಯ ಮಧ್ಯೆಯೇ ಪೊಲೀಸನಿಗೆ ಚಪ್ಪಲಿ ತೆಗೆದು ಹೊಡೆದ ಘಟನೆ ವರದಿಯಾಗಿದೆ. ಬಹಿರಂಗಗೊಂಡ ವೀಡಿಯೊದಲ್ಲಿ ಮಹಿಳೆಯೊಬ್ಬರು ಚಪ್ಪಲಿ ಎತ್ತಿಹಿಡಿದು ಪೊಲೀಸನಿಗೆಹೊಡೆಯುವ ದೃಶ್ಯ ಕಾಣಿಸುತ್ತಿದ. ಕೆಲವು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ ಮಹಿಳೆ ಶಾಂತಗೊಳ್ಳದೆ ಎಎಸ್ಸೈ ಮೇಲೇರಿ ಹೋಗಿದ್ದಾಳೆ ಮಹಿಳೆಯ ಜೊತೆಗಿಂದ ಗಂಡಸು ಕೂಡಾ ಪೊಲೀಸರೊಂದಿಗೆ ಹೊಕೈ ನಡೆಸಿದ್ದಾನೆ. ನಂತರ ಮಹಿಳೆ ಪೊಲೀಸನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಮಹಿಳೆಯ ಜೊತೆಯೇ ಹೋಗುತ್ತಿದ್ದ ಜನರ ಗುಂಪು ಪೊಲೀಸನಿಗೆ ಹೊಡೆಯಲು ಮಹಿಳೆಗೆ ಹೇಳುತ್ತಿದೆ.
ವರದಿಯಾಗಿರುವ ಪ್ರಕಾರ ಪೊಲೀಸನು ಮಹಿಳೆಯ ಪತಿ ಪಾರ್ಕಿಂಗ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಹೆಚ್ಚು ದಂಡ ವಿಧಿಸಿದ್ದಾನೆ. ನಂತರ ವಾಗ್ವಾದ ನಡೆದಿದ್ದು ಕುಪಿತಳಾದ ಮಹಿಳೆ ಹೀಗೆ ವರ್ತಿಸಿದ್ದಾಳೆ. ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ವಾಹನ ತಪಾಸಣೆವೇಳೆ ಮಹಿಳೆಯೊಂದಿಗೆ ಕಟ್ಟದಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದರಿಂದ ಮಹಿಳೆ ಹೆಚ್ಚು ಕೋಪಗೊಂಡು ಚಂಡಿಚಾಮುಂಡಿಯಾದಳೆಂದು ವರದಿ ತಿಳಿಸಿದೆ.
ನಂತರ ಪೊಲೀಸರು ಮಹಿಳೆ ಮತ್ತುಅವಳ ಹೋಮ್ಗಾರ್ಡ್ ಪತಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಉತ್ತರಪ್ರದೇಶದ ಇಬ್ಬರು ಪೊಲೀಸರು ಪರಸ್ಪರ ಕಾದಾಡುತ್ತಿದ್ದ ವೀಡಿಯೊ ಬಹಿರಂಗವಾಗಿತ್ತು. ಲಂಚದ ಹಣ ಪರಸ್ಪರ ಹಂಚಿಕೊಳ್ಳುವ ವಿಚಾರದಲ್ಲಿ ಅವರ ನಡುವೆ ಜಗಳ ನಡೆದಿತ್ತು ಎಂದು ವರದಿ ತಿಳಿಸಿದೆ.