ಖಾಸಗಿ ವೈಧ್ಯಕೀಯ ಮಹಾವಿದ್ಯಾಲಯದ ಇಬ್ಬರು ನೌಕರರಿಂದ ಆತ್ಮಹತ್ಯೆ ಯತ್ನ!
ಪಾಲಕ್ಕಾಡ್-ಒಟ್ಟಪಾಲಂ,ಫೆ.4: ನೆಹರೂ ಗ್ರೂಪ್ನ ವಾಣಿಯಂಕುಳಂ ಪಿ.ಕೆ.ದಾಸ್ ವೈಧ್ಯಕೀಯ ಮಹಾವಿದ್ಯಾಲಯದ ಇಬ್ಬರು ನೌಕರರು ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶನಿವಾರ ಬೆಳಗ್ಗಿನ ಜಾವ ಮೂರುವರೆಗಂಟೆಗೆ ಘಟನೆ ನಡೆದಿದೆಇಬ್ಬರಿಗೂ ತೀವ್ರನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೆಡಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುವ ಇಬ್ಬರು ಹೈಡ್ರಿಕ್ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.
ಇದೇ ಆಸ್ಪತ್ರೆಯಲ್ಲಿ ಕಲಿತಿದ್ದ ಇವರಿಬ್ಬರಿಗೂ ಕೆಲಸ ಮಾಡಲು ಇಷ್ಟವಿರಲಿಲ್ಲ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಒಪ್ಪಂದ ಪ್ರಕಾರ ಈ ಆಸ್ಪತ್ರೆಯಲ್ಲಿ ಕೆಲಸಮಾಡುವ ಗಡುವಿನ ಕೊನೆಯ ದಿನ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.
Next Story