Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸಮಗ್ರ ಕೃಷಿಯ ಪ್ರಯೋಗ ಶಾಲೆ

ಸಮಗ್ರ ಕೃಷಿಯ ಪ್ರಯೋಗ ಶಾಲೆ

ಸೌಮ್ಯಾ ಎಸ್., ಬೆಂಗಳೂರುಸೌಮ್ಯಾ ಎಸ್., ಬೆಂಗಳೂರು19 May 2018 9:01 PM IST
share
ಸಮಗ್ರ ಕೃಷಿಯ ಪ್ರಯೋಗ ಶಾಲೆ

ರೈತ ಎಂದರೆ ಭಾರತದ ಎಲ್ಲರಲ್ಲೂ ಮೊದಲು ಮೂಡುವ ಆಕೃತಿಯೆಂದರೆ ತಲೆಗೊಂದು ಟವೆಲ್ ಕಟ್ಟಿಕೊಂಡು, ಒಣಕಲು ದೇಹ ಇಟ್ಟುಕೊಂಡು ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ಮನುಷ್ಯ. ಆದರೆ, ಈಗಿನ ತಲೆಮಾರಿನ ಮಕ್ಕಳು ‘ಅಂಕಲ್ ನೀವು ರೈತರಿದ್ದಂಗೆ ಇಲ್ವೇ ಇಲ್ಲಾ, ನಮಗೆ ಆ ರೀತಿ ಕಾಣೋದೆ ಇಲ್ಲ’ ಎಂದು ಹೇಳಿದಾಗ ಕೃಷಿಯನ್ನು ಬದಲಾವಣೆಗೊಡ್ಡಿದ ಸಮಾಧಾನ ಕಾಣುತ್ತದೆ ಎನ್ನುತ್ತಾರೆ ಕೆ.ಎಸ್. ಅಶೋಕ್ ಕುಮಾರ್.

ಸಾಲ, ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳನ್ನು ನೋಡಿ ಕೃಷಿ ಬೇಡ ಎನ್ನುವವರ ಮಧ್ಯೆ ಸುಮಾರು 3 ದಶಕಗಳಿಂದ ಕೃಷಿ ಒಡನಾಟದಲ್ಲಿ ತೊಡಗಿ ಸಮಗ್ರ ಕೃಷಿಯೊಂದಿಗೆ ಗುರುತಿಸಿಕೊಂಡು ಕೃಷಿಯನ್ನೇ ಬದುಕಾಗಿಸಿಕೊಂಡವರು ಮಾ ಇಂಟಿಗ್ರೇಟರ್ಸ್ ಮಾಲಕ ಕೆ.ಎಸ್ .ಅಶೋಕ್ ಕುಮಾರ್.

ಎಂಎಸ್ಸಿ ಅಗ್ರಿಕಲ್ಚರ್ ಓದಿದ ಅಶೋಕ್ ಕುಮಾರ್ ಮಾ ಇಂಟಿಗ್ರೇಟರ್ಸ್ ಎಂಬ ಕೌಟುಂಬಿಕ ಸಂಸ್ಥೆ ಪ್ರಾರಂಭಿಸಿ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಮೂಲತಃ ದಕ್ಷಿಣ ಕನ್ನಡದ ಸುಳ್ಯದಲ್ಲಿ ಹುಟ್ಟಿ ಬೆಳೆದಿರುವ ಇವರು ನೀರಿಗೆ ಪರದಾಡಬೇಕಾದಂತಹ ರಾಜಧಾನಿ ಬೆಂಗಳೂರಿನಿಂದ ಅನತಿ ದೂರದಲ್ಲಿರುವ ದೊಡ್ಡ ಬಳ್ಳಾಪುರ ಸಮೀಪದಲ್ಲಿ ಮತ್ತೊಂದು ಮಲೆನಾಡು ಸೃಷ್ಟಿಗಾಗಿ ಶ್ರಮಿಸುತ್ತಿದ್ದಾರೆ. 90ರ ದಶಕದಲ್ಲಿ ಕೃಷಿ ಕ್ಷೇತ್ರಕ್ಕೆ ಧುಮುಕಿದ ಇವರು ತಮ್ಮ ಸುಮಾರು 3 ದಶಕಗಳ ಕೃಷಿ ಓಡನಾಟದಲ್ಲಿ ಕಳೆದುಕೊಂಡಿದ್ದಕ್ಕಿಂತ ಪಡೆದದ್ದೆ ಹೆಚ್ಚು.

ಹೈನುಗಾರಿಕೆ, ಕೋಳಿ ಸಾಕಣೆಯೊಂದಿಗೆ ದ್ರಾಕ್ಷಿ, ರಬ್ಬರ್, ತೆಂಗು, ಮಾವು ಮತ್ತಿತರ ಬೆಳೆ ಬೆಳೆಯುವ ಕ್ರಮದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸ್ಪರ್ಶ ನೀಡಿದ್ದು, ಸಮಗ್ರ ಕೃಷಿಯಲ್ಲಿ ಲಾಭ ಗಳಿಸುತ್ತಿದ್ದಾರೆ.

ನೆರ್ಮಲ್ಯದಲ್ಲಿ ಗುಣಮಟ್ಟ

ಕೋಳಿ ಮಾಂಸ, ಮೊಟ್ಟೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸ್ವಚ್ಛ ಮಾಂಸವನ್ನು ತನ್ನ ಗ್ರಾಹಕರಿಗೆ ನೀಡಬೇಕು ಎನ್ನುವ ಗುರಿಯೊಂದಿಗೆ ಹಲವು ವೈಜ್ಞಾನಿಕ ಹಂತ ಗಳನ್ನು ಅನುಸರಿಸುತ್ತಿದೆ. ಕೋಳಿ ಸಾಕಣೆ ಕೇಂದ್ರದೊಳಗೆ ಪ್ರವೇಶಿಸ ಬೇಕೆಂದರೆ ಸ್ನಾನ ಮಾಡಲೇಬೇಕಿರುವುದು ನಿಯಮ. ಇನ್ನು ಆವರಣ ದೊಳಗೆ ವಾಹನಗಳು ಪ್ರವೇಶಿಸಬೇಕೆಂದರೂ ರಾಸಾಯನಿಕ ಮಿಶ್ರಣ ನೀರಿನಿಂದ ವಾಹನಗಳನ್ನು ತೊಳೆಯುವುದು ಅವಶ್ಯ. ಇದಲ್ಲದೇ ಕೋಳಿ ಸಾಕಣೆ ಸ್ಥಳದಲ್ಲಿ ನೈರ್ಮಲ್ಯ ಕಾಪಾಡುವುದಕ್ಕಾಗಿ ಸುತ್ತಲೂ ಉದ್ಯಾನದ ಆಕರ್ಷಣೆ. ಇದು ವೈರಸ್‌ಗಳಿಂದ ಕೋಳಿಗಳನ್ನು ರಕ್ಷಿಸಲು ಅನುಕೂಲ.

ಹೈನುಗಾರಿಕೆಯಲ್ಲಿ ಗುರುತಿಸಿಕೊಂಡಿದ್ದ ಅಶೋಕ್

2007ಕ್ಕಿಂತ ಮುಂಚೆ ಮಾ ಇಂಟಿಗ್ರೇಟರ್ಸ್ ಕಂಪೆನಿಯಾಗಿ ಸ್ಥಾಪನೆಯಾಗಿರದಿದ್ದರೂ, ಅಶೋಕ್ ಕುಮಾರ್ ಕೃಷಿಯೊಂದಿಗಿನ ಒಡನಾಟದಲ್ಲಿದ್ದರು. 2001 ರಲ್ಲಿ 25 ಹಸುಗಳೊಂದಿಗೆ ಹೈನುಗಾರಿಕೆ ಪ್ರಾರಂಭಿಸಿ 5 ವರ್ಷದಲ್ಲಿ 100 ಹಸುಗಳಿಗೆ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು. ಅತ್ಯಾಧುನಿಕ ತಂತ್ರಗಳನ್ನು ಹೈನುಗಾರಿಕೆಯಲ್ಲಿ ಬಳಸಿದ್ದರು. ಹಸುಗಳ ಸೆಗಣಿ ಮತ್ತು ಮೂತ್ರದಿಂದ ಮೀಥೆನ್ ಗ್ಯಾಸ್ ಉತ್ಪಾದಿಸಿ ಅದನ್ನು ಡೀಸೆಲ್ ಜನರೇಟರ್‌ಗೆ ಇಂಧನ ವಾಗಿ ಪರಿವರ್ತಿಸಿ 20 ಕೆವಿ ವಿದ್ಯುತ್ ಉತ್ಪಾದಿಸಿ ಫಾರಂನ ದೈನಂದಿನ ಚಟುವಟಿಕೆಗಳಿಗೆ 6 ಗಂಟೆ ವಿದ್ಯುತ್ ಹರಿಸಲಾ ಗುತ್ತಿತ್ತು. 2003 ರಲ್ಲಿ 400 ಕುರಿಗಳಿಂದ ಕುರಿ ಸಾಕಣೆ ಆರಂಭಿಸಿದರು. ನಂತರ ಮೇಕೆ ಸಾಕಣೆಯನ್ನು ಪ್ರಾರಂಭಿಸಿ ಯಶಕಂಡರು.

ನಮ್ಮ ನಾಡಿನ ಕೃಷಿ ಆರ್ಥಿಕತೆಯು ಇಂದು ಬಿಕ್ಕಟ್ಟಿನಲ್ಲಿರುವುದು ನಿಜ. ಸರಕಾರಗಳಿಂದ ಹೇಳಿಕೊಳ್ಳುವಂತಹ ಬೆಂಬಲವಿರದ ಸ್ಥಿತಿ, ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆ. ಯಾವುದೇ ಕೃಷಿ ಬೆಳೆಗೂ ಕೂಡಬೇಕಾದ ಬಂಡವಾಳದ ಅಗಾಧ ಮೊತ್ತ, ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಇವೆಲ್ಲವೂ ನಮ್ಮ ರೈತಾಪಿಯನ್ನು ಸದಾ ಕಾಡುತ್ತಾ ಹೈರಾಣಾಗಿಸುತ್ತಿದೆ. ಆದರೆ, ಇಂತಹ ಬಿಕ್ಕಟ್ಟಿನ ಕಾಲದಲ್ಲೂ ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ರೈತರೇ ಮುಂದೊಡಗಿ ಸಾಧ್ಯವಿರುವ ಪರಿಹಾರಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಹತಾಶೆಯಿಂದ ಕೈಚೆಲ್ಲಿ ಸುಮ್ಮನಾಗುವ ಬದಲಿಗೆ ಯೋಜಿತ ಕೃಷಿ ಪದ್ಧತಿ ಹಲವು ಆಯಾಮಗಳಲ್ಲಿ ಕೃಷಿ ಕಾರ್ಯ ನಿರ್ವಹಿಸುತ್ತಾ ಆದಾಯದ ಮೂಲಗಳನ್ನು ಹೆಚ್ಚು ಮಾಡಿಕೊಳ್ಳುವುದು, ಪಶುಸಂಗೋಪನೆಯ ಸಾಧ್ಯತೆಗಳನ್ನು ಜಾಣತನದಿಂದ ನಿರ್ವಹಿಸುವುದು, ಮಾರುಕಟ್ಟೆಯ ಅನಿಶ್ಚಿತತೆಯನ್ನು ತೊಡಕಾಗದಂತೆ ನಿರ್ವಹಿಸುವ ವ್ಯಾವಹಾರಿಕ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಇವೇ ಮುಂತಾದ ವಿಧಾನಗಳಿಂದ ಕೃಷಿಯನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿದೆ.

ಅಶೋಕ್ ಕುಮಾರ್ ರವರ ಕೃಷಿಯ ಪ್ರಯೋಗವು ಇದಕ್ಕೆ ಒಂದು ಯಶೋಗಾಥೆಯ ಸಾಕ್ಷಿಯೆಂಬಂತೆ ನಮ್ಮ ಕಣ್ಣೆದುರಿಗಿದೆ. ಹಾಗೂ ಅನುಕರಣಾ ಯೋಗ್ಯವೂ ಆಗಿದೆ.

ಕಾರ್ಯ ನಿರ್ವಹಣೆ

2007ರಲ್ಲಿ ಪ್ರಾರಂಭವಾದ ಮಾ ಇಂಟಿಗ್ರೇಟರ್ಸ್ ದಶಕದ ಕಾರ್ಯ ನಿರ್ವಹಣೆಯಲ್ಲಿ ಮಂಗಳೂರು, ಬಂಟ್ವಾಳ, ಆನವಟ್ಟಿ, ಕುಣಿಗಲ್, ಸುಳ್ಯದಲ್ಲಿ ಶಾಖೆಗಳನ್ನು ಹೊಂದಿದೆ. ಪ್ರಸಿದ್ಧ ಚಿಕನ್ ಬ್ರಾಂಡ್ ವೆಂಕಾಬ್‌ಗೆ ಬಹುಪಾಲು ಮಾಂಸ ಸರಬರಾಜು ಮಾಡುತ್ತಿರುದು. 200ಕ್ಕೂ ಹೆಚ್ಚು ಜನರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ರೈತರು ಮಾ ಇಂಟಿಗ್ರೇಟರ್ಸ್‌ನಲ್ಲಿ ಪಾಲುದಾರರಾಗಿದ್ದಾರೆ. ಮೊಟ್ಟೆ, ಕೋಳಿ ಮರಿ ಹಾಗೂ ಮಾಂಸ ಸೇರಿ ಕೋಳಿಗೆ ಬೇಕಾಗುವ ಸಮತೋಲಿತ ಆಹಾರವನ್ನು ಒಪ್ಪಂದದಡಿಯಲ್ಲಿ ಮಾರುತ್ತಿದ್ದಾರೆ.

ಕೋಳಿ ಫಾರಂ ಸುತ್ತಲೂ ಮಲೆನಾಡು

1200 ಅಡಿ ಭೂಮಿ ಕೊರೆದರೂ ಅಂತರ್ಜಲ ಕಾಣದ ಜಾಗದಲ್ಲಿ ನೀರಿನ ಮಿತ ಬಳಕೆಯೊಂದಿಗೆ ಮಲೆನಾಡನ್ನು ಸೃಷ್ಟಿಸಲು ಬಯಸಿದ್ದಾರೆ. ರಬ್ಬರ್, ಹಲಸು, ಬೇವು, ಹುಣಸೆ ಸೇರಿ ವಿವಿಧ ಸಸ್ಯಗಳನ್ನು ಬೆಳೆಸಿದ್ದು, ಇವುಗಳೇ ಕೋಳಿ ಫಾರಂಗೆ ಭದ್ರತಾ ಸಲಕರಣೆ. ಅದಲ್ಲದೇ ಹಾದರಿಪುರದಲ್ಲಿನ ಕೋಳಿ ಫಾರಂ ಸುತ್ತಲಿನ ಪ್ರದೇಶದ ಗುಡ್ಡದಲ್ಲಿ ವ್ಯೆ ಪಾಯಿಂಟ್ ನಿರ್ಮಿಸಿರುವುದು ವಿಶೇಷ. ಇದರಿಂದ ಸುತ್ತಲಿನ 30 ಕ್ಕೂ ಹೆಚ್ಚು ಕಿ.ಮೀ ಪ್ರದೇಶದ ವೀಕ್ಷಣೆ ಮತ್ತು ನಂದಿ ಬೆಟ್ಟ, ಶಿವಗಂಗೆ ಬೆಟ್ಟಗಳನ್ನು ಕಣ್ತುಂಬಿಕೊಳ್ಳಬಹುದು.

ಕೋಳಿ ಸಾಕಣೆಯಲ್ಲಿ ಯಶಸ್ಸಿನ ಬುತ್ತಿ

ಕೋಳಿ ಸಾಕಣೆಯಲ್ಲಿ ಕಾಡುವ ಅನೈರ್ಮಲ್ಯ, ಹಕ್ಕಿಜ್ವರ ಮುಂತಾದ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಂಡು, ಕೋಳಿ ಸಾಕಣೆೆ ಉದ್ಯಮದಲ್ಲಿ ಯಶ ಕಂಡು ಸುಮಾರು 300ಕ್ಕೂ ಅಧಿಕ ಜನರಿಗೆ ದೊಡ್ಡಬಳ್ಳಾಪುರ ತಾಲೂಕಿನ ಹಾದರಿಪುರದಲ್ಲಿ ರೂಪುಗೊಂಡಿರುವ ಮಾ ಇಂಟಿಗ್ರೇಟರ್ಸ್ ಮೂಲಕ ಉದ್ಯೋಗದ ಭರವಸೆ ನೀಡಿದ್ದಾರೆ.

share
ಸೌಮ್ಯಾ ಎಸ್., ಬೆಂಗಳೂರು
ಸೌಮ್ಯಾ ಎಸ್., ಬೆಂಗಳೂರು
Next Story
X