Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳು...

ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳು : ಉಚಿತ ತಂತ್ರಾಂಶಗಳ ರೀ-ಇಂಜಿನಿಯರಿಂಗ್

ಡಿಜಿಟಲ್ ಕನ್ನಡ

ಡಾ. ಎ. ಸತ್ಯನಾರಾಯಣಡಾ. ಎ. ಸತ್ಯನಾರಾಯಣ1 July 2018 12:15 AM IST
share
ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳು : ಉಚಿತ ತಂತ್ರಾಂಶಗಳ ರೀ-ಇಂಜಿನಿಯರಿಂಗ್

ಕನ್ನಡದ ಉಚಿತ ತಂತ್ರಾಂಶಗಳು ‘ರೀ-ಇಂಜಿನಿಯರಿಂಗ್’ ಮಾಡಲಾದವು ಎಂಬುದು ಬಹುತೇಕ ಕನ್ನಡ ತಂತ್ರಾಂಶ ತಯಾರಕರ ಆರೋಪವಾಗಿದೆ. ಇದರಲ್ಲಿ ಹುರುಳಿಲ್ಲ ಎನ್ನುವಂತಿಲ್ಲ. ಯಾವುದೇ ಫಾಂಟುಗಳ ಗ್ಲಿಫ್‌ಗಳನ್ನು (ಅಕ್ಷರ ಭಾಗ ಗಳು) ಎರಡು ರೀತಿಯಲ್ಲಿ ಮಾರ್ಪಡಿಸಬಹುದು. ಒಂದು, ಅದರ ಸಂಕೇತ ಸಂಖ್ಯೆಯನ್ನು ಬದಲಿಸುವುದು ಮತ್ತು ಅದರ ರೂಪವನ್ನು ತಿದ್ದಿ ಬೇರೊಂದು ರೂಪವನ್ನು ನೀಡಿ ತಮ್ಮದೇ ಸ್ವಂತ ಫಾಂಟು ಎಂದು ಇತರರ ಬಳಕೆಗೆ ಉಚಿತವಾಗಿ ಯೂ ನೀಡಬಹುದು ಅಥವಾ ಮಾರಾಟವನ್ನೂ ಮಾಡಬಹುದು. ಇವೇ ಅಕ್ಷರಭಾಗಗಳು ಪೂರ್ಣಾಕ್ಷರವನ್ನಾಗಿ ರೂಪುಗೊಳ್ಳುವಂತೆ ತಮ್ಮದೇ ಒಂದು ಕೀ-ಬೋರ್ಡ್ ಡ್ರೈವರ್ ಅನ್ನು ಸಿದ್ಧ ಪಡಿಸುವುದು. ಮೊದಲೇ ಸಿದ್ಧಗೊಂಡ ತಂತ್ರಾಂಶಗಳ ಬಿಡಿಭಾಗಗಳನ್ನು ತಮ್ಮಿಚ್ಛೆಯಂತೆ ಬದಲಾಯಿಸಿಕೊಂಡು ಬಳಸುವುದನ್ನೇ ತಾಂತ್ರಿಕ ಪರಿಭಾಷೆಯಲ್ಲಿ ರೀ-ಇಂಜಿನಿಯ ರಿಂಗ್ ಎನ್ನಲಾಗಿದೆ. ಹೀಗೆ ಮಾಡುವುದು ಕಾನೂನುಬಾಹಿರವಾದರೂ. ಇಂತಹ ರೀ- ಇಂಜಿನಿಯರಿಂಗ್ ಸಾಬೀತುಪಡಿಸಲೂ ಸಾಧ್ಯವಿಲ್ಲ. ಹೀಗಾಗಿ, ಇಂಥದ್ದನ್ನು ತಡೆಗಟ್ಟಲೂ ಆಗುವುದಿಲ್ಲ.

2004ರ ಆಗಸ್ಟ್ ತಿಂಗಳಲ್ಲಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳ ಕುರಿತು ಹಲವು ಲೇಖನಗಳು, ಅವುಗಳಿಗೆ ಪ್ರತಿಕ್ರಿಯೆಗಳ ಸರಣಿ ವಾದವಿವಾದಗಳು ಪ್ರಕಟ ಗೊಂಡವು. ಕನ್ನಡ ತಂತ್ರಾಂಶ ಅಭಿವೃದ್ಧಿಯು ದಿಕ್ಕುತಪ್ಪಿದೆ, ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಖ್ಯಾತ ಬರಹಗಾರ, ಲೇಖಕ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ಚರ್ಚೆಯನ್ನು ಆರಂಭಿಸಿದರು. ಈ ಸರಣಿ ಚರ್ಚೆಯಲ್ಲಿ ಅವರ ಅಭಿಪ್ರಾಯಗಳಿಗೆ ಪರ ಮತ್ತು ವಿರೋಧಗಳು ವ್ಯಕ್ತವಾಗಿ, ಕೆಲವು ಅಂಶಗಳು ಕನ್ನಡಿಗರಿಗೆ ಸ್ಪಷ್ಟಗೊಂಡವು. ಅವುಗಳೆಂದರೆ : ‘ನುಡಿ’ ಕನ್ನಡ ತಂತ್ರಾಂಶ ತಯಾರಿಕೆಯು ತಳಮಟ್ಟದಿಂದ ಆದದ್ದಲ್ಲ, ‘ಬರಹ’ ಹೆಸರಿನ ಕನ್ನಡ ಉಚಿತ ಲಿಪಿ ತಂತ್ರಾಂಶದ ಫಾಂಟ್‌ನ್ನು ನುಡಿಯಲ್ಲಿ ಬಳಸಿಕೊಳ್ಳಲಾಗಿದೆ. ಬರಹದವರು ಆಕೃತಿಯ ಫಾಂಟನ್ನು ಅವರ ಅನುಮತಿ ಪಡೆಯದೆ ಬಳಸಿಕೊಂಡಿದ್ದಾರೆ ಎಂಬ ಅಂಶಗಳು ಹೊರಬಂದವು. ಇದರಿಂದಾಗಿ, ತಂತ್ರಾಂಶ ಕದ್ದ ಆರೋಪ ಕನ್ನಡ ಗಣಕ ಪರಿಷತ್ತಿನ (ಕಗಪ) ಮೇಲೆ ಬಂದಿತು. ತಮ್ಮ ತಂತ್ರಾಂಶಗಳ ಮಾರಾಟ ಕುಸಿದ ಪರಿಣಾಮವಾಗಿ, ಫಾಂಟ್ ಬಳಸಿರುವ ಆರೋಪವನ್ನು ತಂತ್ರಾಂಶ ತಯಾರಕರು ದೊಡ್ಡದು ಮಾಡಿದರು.

ಲೋಕಾಯುಕ್ತಕ್ಕೆ ದೂರು ನೀಡುವ ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಿದರು. ಈ ವಾದವಿವಾದಗಳಿಂದಾಗಿ, ಕಗಪ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ರೀತಿಯಲ್ಲಿ ಕಂಪ್ಯೂಟರ್ ಮತ್ತು ಕನ್ನಡ ಕ್ಷೇತ್ರದ ಕನ್ನಡಿಗರ ಪ್ರಾತಿನಿಧಿಕ ಪರಿಷತ್ತು ಅಲ್ಲ, ಅದು ಕೆಲವೇ ಜನ ಸದಸ್ಯರಿರುವ ಒಂದು ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದ ಆಸಕ್ತರ ಒಂದು ಗುಂಪು ಎಂಬ ವಾಸ್ತವವು ಹೊರಜಗತ್ತಿಗೆ ತಿಳಿದುಬಂತು. ಈ ವಿವಾದಗಳ ಹಿಂದೆ ಹಲವು ವಾಸ್ತವಾಂಶಗಳಿವೆ. ಕನ್ನಡ ಲಿಪಿ ತಂತ್ರಾಂಶದ ಮಾರುಕಟ್ಟೆಯಲ್ಲಿ ರಾಜ್ಯ ಸರಕಾರವೇ ಅತಿದೊಡ್ಡ ಗ್ರಾಹಕ. ತಂತ್ರಾಂಶ ತಯಾರಕರ ದೃಷ್ಟಿಯಲ್ಲಿ ಏನೇನೂ ತಾಂತ್ರಿಕ ಪರಿಣಿತಿಯಿಲ್ಲದ ಕಗಪ ತಮ್ಮ ತಂತ್ರಾಂಶಗಳನ್ನು ಪ್ರಮಾಣೀಕ ರಿಸುವ ಸಂಸ್ಥೆ ಎಂದು ಸರಕಾರದಿಂದ ಘೋಷಿಸಲ್ಪಟ್ಟಾಗ, ತಂತ್ರಾಂಶ ತಯಾರಕರೂ ಆಗಿದ್ದ ಕ.ಗ.ಪರಿಷತ್ತಿನ ಕಾರ್ಯಕಾರಿ ಸದಸ್ಯರಾದವರಲ್ಲಿ ಆಂತರಿಕವಾಗಿ ಆರಂಭವಾದ ಅಸಮಾಧಾನವು ಕ್ರಮೇಣ ಬಹಿರಂಗಗೊಂಡಿತು. ‘ನುಡಿ’ ಕನ್ನಡ ಲಿಪಿ ತಂತ್ರಾಂಶವು ಉಚಿತವಾಗಿ ದೊರೆತ ಪರಿಣಾಮ ತಯಾರಕರ ಮಾರುಕಟ್ಟೆ ಗಣನೀಯವಾಗಿ ಘಾಸಿಗೊಂಡು, ಅವರ ಆದಾಯ ಕುಸಿದದ್ದೇ ಅಸಮಾಧಾನಕ್ಕೆ ಪ್ರಮುಖ ಕಾರಣ.

ಲಿಪಿತಂತ್ರಾಂಶದ ಮಾರಾಟವನ್ನು ಕೈಬಿಟ್ಟು ಆನ್ವಯಿಕ ತಂತ್ರಾಂಶದ ಕಡೆಗೆ ಗಮನ ಹರಿಸುವಂತೆ ಸರಕಾರದ ಮಟ್ಟದಲ್ಲಿ ನಡೆದ ವಿವಿಧ ಸಭೆಗಳಲ್ಲಿ ತಂತ್ರಾಂಶ ತಯಾರಕರಿಗೆ ಕಿವಿಮಾತನ್ನು ಹೇಳಲಾಗಿತ್ತು. ಅದರಲ್ಲಿ ಕನ್ನಡ ಗಣಕ ಪರಿಷತ್ತು ಸಹ ಪ್ರಮುಖ ಪಾತ್ರವೂ ವಹಿಸಿತ್ತು. ಆದರೆ, ಯಾವುದೇ ತಂತ್ರಾಂಶ ತಯಾರಕರಿಗೂ ಅವರ ನಿರೀಕ್ಷೆಯ ಮಟ್ಟದಲ್ಲಿ ಸರಕಾರದ ಬೆಂಬಲ ದೊರೆಯಲಿಲ್ಲ ಎಂದು ಖಾಸಗಿ ಸಂಸ್ಥೆಗಳು ಎಲ್ಲರಲ್ಲಿಯೂ ತಮ್ಮ ಅಸಮಾಧಾನವನ್ನು ತೋಡಿಕೊಳ್ಳತೊಡಗಿದರು. ಹಲವಾರು ವರ್ಷಗಳಿಂದ ವೃತ್ತಿಪರ ಪ್ರಾವೀಣ್ಯತೆ ಇದ್ದು ತಂತ್ರಾಂಶಗಳನ್ನು ತಯಾರಿಸಿರುವ ಸಂಸ್ಥೆಗಳ ತಂತ್ರಾಂಶಗಳನ್ನು ಪ್ರಮಾಣೀಕರಿಸುವ ಕೆಲಸವು ಅಗಾಧವಾದ ತಾಂತ್ರಿಕ ಪರಿಣತಿಯನ್ನು ನಿರೀಕ್ಷಿಸುತ್ತದೆ. ಗಣಕ ಪರಿಷತ್‌ಗೆ ಅಂತಹ ಪರಿಣತರ ಪೂರ್ಣ ಪ್ರಮಾಣದ ನೆರವು ಇಲ್ಲ ಮತ್ತು ಪರಿಷತ್‌ಗೆ ಅಂತಹ ಸಾಮರ್ಥ್ಯವಿರಲಿಲ್ಲ. ಪರಿಷತ್ತು ಪ್ರಮಾಣೀಕರಣ ಹೊಣೆಗಾರಿಕೆಯನ್ನು ವಹಿಸಿಕೊಂಡು, ತಂತ್ರಾಂಶ ತಯಾರಕರಿಂದ ಅನೇಕ ಆರೋಪಗಳನ್ನು ಹೊತ್ತುಕೊಳ್ಳುವಂತಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯೊಂದರಲ್ಲಿ ಕಗಪದ ತಂತ್ರಾಂಶ ಪ್ರಮಾಣೀಕರಣ ಹೊಣೆಗಾರಿಕೆಯನ್ನು ಉದ್ದೇಶಿಸಿ ಪ್ರಾಜ್ಞರೊಬ್ಬರು ‘ಪರಿಷತ್ತು ಸುಮ್ಮನೆ ಸೀಲ್ ಒತ್ತಿಕೊಂಡು ಕೂತರೆ ಪ್ರಯೋಜನವಿಲ್ಲ ಸಂಶೋಧನಾತ್ಮಕ ಕೆಲಸ ಮಾಡಬೇಕು’ ಎಂದು ಮಾರ್ಮಿಕವಾಗಿ ನುಡಿದಿದ್ದರು.

ಮುಂದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಣಯದ ಅನುಸಾರ ಕಗಪಕ್ಕೆ ನೀಡಲಾಗಿದ್ದ ತಂತ್ರಾಂಶ ಪ್ರಮಾಣೀಕರಣದ ಹೊಣೆಗಾರಿಕೆಯನ್ನು ಸರಕಾರವು ಹಿಂಪಡೆಯಿತು. ಕಗಪ ಪರ್ಯಾಯ ತಂತ್ರಾಂಶ ತಯಾರಕಾ ಕಂಪೆನಿಯಾಗಿ ಮಾರ್ಪಡುವುದು ಬೇಡ, ಕನ್ನಡಕ್ಕಾಗಿ ಇಂದು ತುರ್ತಾಗಿ ಅಗತ್ಯವಾಗಿರುವ ತಾಂತ್ರಿಕ ಸಂಶೋಧನಾ ಕೆಲಸಗಳನ್ನು ಅದು ನಿರ್ವಹಿಸಿದರೆ ಸಾಕು. ಆ ಕೆಲಸವೇ ಅಗಾಧವಾಗಿದೆ. ಎಂಬುದು ಹಲವಾರು ಕಾರ್ಯಕಾರಿ ಸಮಿತಿ ಸದಸ್ಯರ ಅಭಿಪ್ರಾಯವಾಗಿತ್ತು. ‘ನುಡಿ’ ಕದ್ದದ್ದು ಎಂಬ ವಿಚಾರವಾಗಿ ಮತ್ತು ಕಗಪದ ಕುರಿತು ಅಂತರ್ಜಾಲದಲ್ಲಿ ಬಹಳಷ್ಟು ಚರ್ಚೆಗಳು, ವಾಗ್ಯುದ್ಧಗಳು ನಡೆದ ಪರಿಣಾಮವಾಗಿ ‘ಬರಹ’ದ ಶ್ರೀ ಶೇಷಾದ್ರಿವಾಸುರವರು ವಾಸ್ತವವನ್ನು (ಅಂದರೆ, ಬರಹದಲ್ಲಿ ಆಕೃತಿ ಫಾಂಟನ್ನು ಬಳಸಿಕೊಂಡಿ ರುವುದು) ಒಪ್ಪಿಕೊಂಡು ಆಕೃತಿಯ ಶ್ರೀ ಆನಂದ್‌ರವರಿಗೆ ಇ-ಮೇಲ್ ಮಾಡಿದ್ದಾರೆ ಮತ್ತು ಇದನ್ನು ತಡವಾಗಿ ಒಪ್ಪಿಕೊಳ್ಳುತ್ತಿ ರುವುದಕ್ಕೆ ಕ್ಷಮೆಯನ್ನೂ ಸಹ ಕೋರಿದ್ದಾರೆ. ನುಡಿಯಲ್ಲಿ ಬರಹದ ಫಾಂಟನ್ನೇ ಆರಂಭದಲ್ಲಿ ಬಳಸಿಕೊಂಡಿದ್ದು ನಿಜ ಎಂದು ಒಪ್ಪಿಕೊಳ್ಳುವ ಮೂಲಕ ಕಗಪ ಎಲ್ಲ ವಿವಾದಕ್ಕೆ ಮತ್ತು ಚರ್ಚೆಗಳಿಗೆ ಮಂಗಳ ಹಾಡಬಹುದಿತ್ತು.

ಕಗಪದ ಅಂದಿನ ಪ್ರಧಾನ ಕಾರ್ಯದರ್ಶಿ ‘ನುಡಿ’ ಸಿದ್ಧಗೊಂಡಿರುವ ಹಿನ್ನೆಲೆಯನ್ನು ಪತ್ರಿಕಾ ಸಂದರ್ಶನದಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ. ತಂತ್ರಾಂಶ ಕದ್ದದ್ದು ಎಂಬ ಆರೋಪ ಏಕೆ ಬಂತು ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿರುವ ಅವರು ಹಿಂದೆ ಹೆಣ್ಣು ಮಕ್ಕಳು ಉರುವಲು ಒಲೆಗಳ ಮೇಲೆ ಅಡುಗೆ ಮಾಡಲು ಬಹಳ ವೇಳೆ ಹಿಡಿಯುತ್ತಿತ್ತು. ಈಗ ಕುಕ್ಕರ್ ಕಾಲ. ಹಾಗೆಂದು ಕುಕ್ಕರ್ ಅನ್ನು ದೂರಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ ಮತ್ತು ನಮ್ಮ ಅದೃಷ್ಟಕ್ಕೆ ಈ ಕಾಲದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಬೆಳವಣಿಗೆಯೇ ನಮ್ಮ ನೆರವಿಗೆ ಬಂತು ಎಂದು ಮಾತ್ರ ಹೇಳಬಹುದು ಎಂದಿದ್ದಾರೆ. ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಅವರು ಲಿಪಿ ರೂಪಿಸುವ ಸಂಕೇತ ಜನರಿಗೆ ಗೊತ್ತಾದರೆ ಯಾರು ಬೇಕಾದರೂ ಅದನ್ನು (ಲಭ್ಯವಿರುವ ಲಿಪಿ) ‘ಸುಧಾರಿಸಬಹುದು’ ತಮಗೆ ಬೇಕಾದ ರೀತಿಯಲ್ಲಿ ಸುಂದರ ಕನ್ನಡ ಲಿಪಿಯನ್ನು ರೂಪಿಸಿಕೊಳ್ಳಲು ಜನರು ಸ್ವತಂತ್ರರು ನಾವೂ ಈ ದಿಸೆಯಲ್ಲಿ ಕಾರ್ಯನಿರತರಾಗಿದ್ದೇವೆ ಎಂದಿದ್ದಾರೆ. ಇದೆಲ್ಲಾ ‘ಕನ್ನಡದ ಉದ್ಧಾರಕ್ಕಾಗಿ’ ಎಂಬುದು ಕಗಪದ ಉದಾತ್ತ ಧ್ಯೇಯವಾದರೂ, ಇತರರು ತಯಾರಿಸಿರುವ ಮತ್ತು ಬಳಕೆಗೆ ಲಭ್ಯವಿರುವ ಲಿಪಿಯನ್ನು ಸುಂದರವಾಗಿಸಲು ಜನರು ಸ್ವತಂತ್ರರು ಎಂಬ ಅವರ ಆಭಿಪ್ರಾಯವನ್ನು ಮಾತ್ರ ಯಾರೂ ಒಪ್ಪಲಾರರು. ಯಾವುದೇ ಲಿಪಿಯನ್ನು ತಯಾರಿಸಿರುವವರು ಅವರ ಬೌದ್ಧಿಕ ಆಸ್ತಿ ಹಕ್ಕನ್ನು ಪ್ರತಿಪಾದಿಸಿಯೇ ತೀರುತ್ತಾರೆ. ಅವರ ಅನುಮತಿ ಪಡೆಯದೆ, ಅವರ ಲಿಪಿಯನ್ನು ಅಲ್ಪಸ್ವಲ್ಪ ಬದಲಿಸಿ ಅದನ್ನೇ ಕನ್ನಡ ಭಾಷಾ ಉದ್ಧಾರದ ಹೆಸರಿನಲ್ಲಿ ಎಲ್ಲರಿಗೂ ಉಚಿತ ವಾಗಿ ಹಂಚುವುದು ನ್ಯಾಯಸಮ್ಮತವಲ್ಲ.

ಸರಕಾರದಿಂದ ಅನುದಾನವನ್ನು ಪಡೆದೂ ಸಹ, ತಮ್ಮದೇ ಪ್ರತ್ಯೇಕ ಫಾಂಟುಗಳನ್ನು ಸಿದ್ಧಪಡಿಸದೆ, ಉಚಿತ ತಂತ್ರಾಂಶ ದಲ್ಲಿನ ಫಾಂಟ್‌ಗಳ ಗ್ಲಿಫ್‌ಗಳನ್ನು ತಗೆದುಕೊಂಡು ಸರಕಾರಕ್ಕೇ ನೀಡಿರುವುದು ಅಕ್ಷಮ್ಯ ಎಂಬುದು ತಂತ್ರಾಂಶ ತಯಾರಕರ ಆರೋಪ. ಇಲ್ಲಿ ಉದ್ದೇಶ ಒಳ್ಳೆಯದೇ ಆದರೂ ಮಾರ್ಗ ಒಳ್ಳೆಯ ದಾಗಿಲ್ಲ, ಉದ್ದೇಶ ಮತ್ತು ಅದನ್ನು ಸಾಧಿಸಲು ಹೊರಟ ಮಾರ್ಗ ಎರಡೂ ಒಳ್ಳೆಯದಾಗಿರಬೇಕು. ಸರಕಾರದ ಅನುದಾನದಿಂದ ಸಿದ್ಧ ಗೊಂಡಿರುವ ‘ನುಡಿ ತಂತ್ರಾಂಶದ ಸೋರ್ಸ್ ಕೋಡ್ ಮುಕ್ತವಾಗಿರಿಸಬೇಕು’ ಎಂಬ ದಶಕಗಳ ಬೇಡಿಕೆಗೆ ಇನ್ನೂ ಬೆಂಬಲ ದೊರೆತಿಲ್ಲ. ನುಡಿ ತಂತ್ರಾಂಶದ 64ಬಿಟ್ ಆವೃತ್ತಿ ಸಿದ್ಧಗೊಂಡಿದೆ ಎಂಬ ಸುದ್ದಿಗಳು ವರ್ಷದ ಹಿಂದೆಯೇ ಪ್ರಕಟವಾಗಿದೆ. ಆದರೆ, ಇನ್ನೂ ಬಿಡುಗಡೆಗೆ ಆಗಿಲ್ಲ. ‘ಇದು ಸದ್ಯದಲ್ಲೇ ಬಿಡುಗಡೆ ಆಗಲಿದೆ’ ಎಂದು ಕಗಪದ ಜಾಲತಾಣವು ವರ್ಷಗಳಿಂದ ಭರವಸೆ ನೀಡುತ್ತಲೇ ಇದೆ.

share
ಡಾ. ಎ. ಸತ್ಯನಾರಾಯಣ
ಡಾ. ಎ. ಸತ್ಯನಾರಾಯಣ
Next Story
X