Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಲೆಯಾಳಿ ಸಾಹಿತ್ಯದ ಮಹಾನ್ ಕಾದಂಬರಿಕಾರ...

ಮಲೆಯಾಳಿ ಸಾಹಿತ್ಯದ ಮಹಾನ್ ಕಾದಂಬರಿಕಾರ ಚಂದು ಮೇಮೋನ್

ರೂಪದರ್ಶಿಗಳು

ಡಾ.ಕೆ. ಅಯ್ಯಪ್ಪ ಪಣಿಕ್ಕರ್ಡಾ.ಕೆ. ಅಯ್ಯಪ್ಪ ಪಣಿಕ್ಕರ್13 Jan 2019 8:20 AM IST
share
ಮಲೆಯಾಳಿ ಸಾಹಿತ್ಯದ ಮಹಾನ್ ಕಾದಂಬರಿಕಾರ ಚಂದು ಮೇಮೋನ್

19ನೇ ಶತಮಾನದ ಕೊನೆಯ ದಶಕಗಳಲ್ಲಿ ಮಲಯಾಳಂ ಸಾಹಿತ್ಯದಲ್ಲಿ ಸಂಚಲನ ಮೂಡಿಸಿದ ಲೇಖಕ ಚಂದು ಮೇಮೋನ್‌ರನ್ನು ಪರಿಚಯಿಸುವ ಒಂದು ಲೇಖನವಿದು. ಅವರ ಇಂದುಲೇಖಾ ಕಾದಂಬರಿಯು ಇಂಗ್ಲಿಷ್ ಮತ್ತು ಕನ್ನಡವೂ ಸೇರಿದಂತೆ ಜಗತ್ತಿನ ಅನೇಕ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ.

ಚಂದು ಮೇಮೋನ್‌ರ ಮಲಯಾಳಂನ ‘ಇಂದುಲೇಖಾ’ ಕಾದಂಬರಿಯ ಇಂಗ್ಲಿಷ್ ಅನುವಾದಕಾರ ಜಾನ್ ವಿಲ್ಲಬಿ ಫ್ರಾನ್ಸಿಸ್ ಡ್ಯೂಮೆರ್ಗ್ 1890 ಡಿಸೆಂಬರ್ 10ರಂದು ಬರೆದ ಮುನ್ನುಡಿಯಲ್ಲಿ ಹಿಂದಿನ ವರ್ಷ ಮಲಯಾಳದಲ್ಲಿ ಪ್ರಕಟಿಸಲಾದ ಈ ಕೃತಿಯ ಸಾಂಗತ್ಯದ ಬಗ್ಗೆ ಈ ರೀತಿ ಪರಾಮರ್ಶಿಸುತ್ತಾರೆ. ‘‘ಸಾಕಷ್ಟು ಸಮರ್ಥನೀಯ ಕಾರಣಗಳಿಲ್ಲದೆ ಯಾವೊಂದು ಪುಸ್ತಕವನ್ನೂ ಬರೆಯಬಾರದೆಂಬ ಹೇಳಿಕೆ ನಿಜವೇ ಆದಲ್ಲಿ ಮಲಯಾಳದ ಇಂದುಲೇಖಾ ಕಾದಂಬರಿಗಿಂತಲೂ ನ್ಯಾಯಸಮರ್ಥನೆ ಇರುವ ಯಾವೊಂದು ಪುಸ್ತಕವೂ ಬರೆಯಲಾಗಲಿಲ್ಲ ಎಂಬುದು ಪೂರ್ತಿ ನಿಜ’’. (ಇಂದುಲೇಖಾ ಕಾದಂಬರಿಯ ಇಂಗ್ಲಿಷ್ ಅನುವಾದ, 1890. ಮರು ಮುದ್ರಣ, ಮಾತೃಭೂಮಿ, ಕ್ಯಾಲಿಕಟ್, 1965 ಪು. ). ಇಂದುಲೇಖಾ ಕಾದಂಬರಿಯ ಒಂದು ಪ್ರತಿಯನ್ನು ಡ್ಯೂಮೆರ್ಗ್‌ಗೆ ಸಮರ್ಪಿಸುತ್ತಾ ಬರೆದ ಪತ್ರದಲ್ಲಿ ಚಂದು ಮೇನೋನ್ ಈ ಕಾದಂಬರಿಯನ್ನು ಬರೆಯುವಂತೆ ಒತ್ತಾಯಿಸಿದ ಪರಿಸ್ಥಿತಿಯ ಕುರಿತು ಈ ರೀತಿ ನಿರೂಪಿಸಿದ್ದಾರೆ:

xvi‘‘ಒಂದನೆಯದಾಗಿ ಇಂಗ್ಲಿಷ್ ಮಾದರಿಯ ಒಂದು ಕಾದಂಬರಿಯನ್ನು ತನ್ನ ಭಾಷೆಯಲ್ಲಿ ಓದಬೇಕೆಂದು ನನ್ನ ಮಡದಿ ಹಲವು ಬಾರಿ ಪ್ರಕಟಪಡಿಸಿದ ಅಪೇಕ್ಷೆ. ಎರಡನೆಯದಾಗಿ ಇಂಗ್ಲಿಷ್‌ನಲ್ಲಿ ಕಾದಂಬರಿ ಪ್ರತಿನಿಧಿಸುವ ಸಾಹಿತ್ಯ ಪ್ರಕಾರದ ಕುರಿತು ಮಲಯಾಳದ ಓದುಗರಿಗೆ ಆಸಕ್ತಿ ಹುಟ್ಟಿಸಬೇಕೆಂಬ ನನ್ನ ಬಯಕೆ. ಸಹಜ ಸ್ವಭಾವಕ್ಕೆ ಪರಕೀಯವಾದ, ಹಲವೊಮ್ಮೆ ಅಸಂಬಂಧವೂ ಅಸಂಭಾವ್ಯವೂ ಆದ ಘಟನೆಗಳು ತುಂಬಿರುವ ಮಲಯಾಳ ಕಥೆಗಳನ್ನು ಓದಿ ಅಭ್ಯಾಸವಾಗಿಬಿಟ್ಟ ಓದುಗರಿಗೆ ಇಂತಹ ಕೃತಿಗಳ ಕುರಿತು ಹೆಚ್ಚಿನ ಅರಿವೇನೂ ಇಲ್ಲ. ಯಾವುದೋ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಅವರವರ ಮನೆಗಳಲ್ಲಿಯೇ ನಡೆಯಬಹುದಾದ ಘಟನೆಗಳೂ ಸತ್ಯಾಂಶಗಳೂ ಮಾತ್ರವೇ ಇರುವ ಒಂದು ಕತೆಯನ್ನು ಅವರಿಗೆ ಸವಿಯಲು ಸಾಧ್ಯವೇ ಎಂದರಿಯಬೇಕೆಂಬ ಅಪೇಕ್ಷೆ. ಜನ್ಮಸಿದ್ಧವಾದ ಬುದ್ಧಿ ಸಾಮರ್ಥ್ಯ, ಮೈಮಾಟಗಳಿಗೆ ಹೆಸರು ವಾಸಿಯಾದ ನಮ್ಮ ನಾಯರ್ ಹೆಂಗಸರಿಗೆ ಉತ್ತಮ ಇಂಗ್ಲಿಷ್ ಶಿಕ್ಷಣ ಲಭಿಸಿದ್ದೇ ಆದರೆ ಅವರಿಗೆ ಸಮಾಜದಲ್ಲಿ ಗಳಿಸಬಹುದಾದ ಸ್ಥಾನಮಾನ ಪ್ರಭಾವಗಳನ್ನು ನನ್ನ ಮಲಯಾಳ ಸಹೋದರರಿಗೆ ಮನವರಿಕೆ ಮಾಡಿಕೊಡಬೇಕೆಂಬ ಬಯಕೆ. ಕೊನೆಯದಾಗಿ ನಿರುಪಯೋಗದಿಂದ ಹಾಗೂ ದುರುಪಯೋಗದಿಂದ ರಭಸವಾಗಿ ನಾಶ ಹೊಂದುತ್ತಿರುವ ಮಲಯಾಳ ಸಾಹಿತ್ಯದ ಬೆಳವಣಿಗೆಗೆ ಅತ್ಯಲ್ಪವಾದರೂ ನನ್ನ ಸ್ವಂತವೆನಿಸಲಾಗುವ ಕೊಡುಗೆ ನೀಡಬೇಕೆಂಬ ಹೆಬ್ಬಯಕೆ’’. (ಇಂದುಲೇಖಾ ಇಂಗ್ಲಿಷ್ ಅನುವಾದ 1965. ಪ. ).

ಫ್ರಾನ್ಸಿಸ್ ಡ್ಯೂಮೆರ್ಗ್

ಈ ಉದ್ದೇಶಗಳನ್ನು ಈಡೇರಿಸಲು ನೆರವಾಗುವಂತಹ ಒಂದು ಕತೆ ಹಾಗೂ ಅದಕ್ಕೆ ತಕ್ಕ ನಿರೂಪಣಾ ಶೈಲಿಗಳನ್ನು ಸಿದ್ಧಗೊಳಿಸಲು ಚಂದು ಮೇನೋನರಿಗೆ ಸಾಧ್ಯವಾಯಿತು ಎಂಬುದು ನಿರ್ವಿವಾದ. ಇಂದುಲೇಖಾ ಕಾದಂಬರಿ ಚಂದು ಮೇನೋನರ ಮಡದಿಗೆ ಮಾತ್ರವಲ್ಲ, ಅಂತಹ ಅನೇಕ ಓದುಗರಿಗೆ ಓದಿ ಆನಂದಿಸಲು ಯೋಗ್ಯವಾದೊಂದು ಕೃತಿಯಾಗಿದೆ. ಅದರ ಜನಪ್ರಿಯತೆ ಇಂದಿಗೂ ಮುಂದುವರಿಯುತ್ತಿದೆ. ಇಂಗ್ಲಿಷ್ ತಿಳಿಯದವರಿಗೆ ಮಾತ್ರವಲ್ಲ, ವಿಶ್ವಸಾಹಿತ್ಯದ ಗಾಢ ಪರಿಚಯವಿರುವವರಿಗೂ ಕೂಡ ಇಂದುಲೇಖಾ ಮೆಚ್ಚುಗೆಯ ಕೃತಿಯಾಗಿದೆ. ನಿತ್ಯಜೀವನದ ಮಿತಿಯೊಳಗಿನ ಘಟನೆಗಳಿಂದಲೇ ರೋಚಕವಾದೊಂದು ಕತೆ ಹೇಳಲು ಸಾಧ್ಯವೆಂದು ಇಂದುಲೇಖಾ ಕಾದಂಬರಿ ರುಜುವಾತುಪಡಿಸುವುದು. ಸ್ತ್ರೀಯರಿಗೆ ಆಧುನಿಕ ಶಿಕ್ಷಣ ನೀಡಿದರೆ ಬರಬಹುದಾದ ಪ್ರಯೋಜನಗಳನ್ನು ಪುನರಪಿ ಎತ್ತಿ ತೋರಿಸಿದೆ. ಮಲಯಾಳ ಸಾಹಿತ್ಯವನ್ನು 1889ರ ಅವಸ್ಥೆಯಿಂದ ಮೇಲೆತ್ತಲು ಇಂದುಲೇಖಾ ಕಾದಂಬರಿ ಮತ್ತು ಆ ಮಾದರಿಯ ಇನ್ನಿತರ ಕೃತಿಗಳಿಗೆ ಸಾಧ್ಯವಾಯಿತು. ಸಾಹಿತ್ಯದ ಸಾಮಾಜಿಕ ಪ್ರಯೋಜನವನ್ನು ಸಾರುವ ಇನ್ನೂ ಅನೇಕ ಕೃತಿಗಳು ಇದರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಹುಟ್ಟಿಕೊಂಡವು. ಆದರೂ ಇಂದುಲೇಖಾದ ಸ್ಥಾನಕ್ಕೆ ಇನ್ನೂ ಭ್ರಂಶ ಬರಲಿಲ್ಲ.

‘ಇಂದುಲೇಖಾ’ ಮಲಯಾಳಂ ಕಾದಂಬರಿ

1930ರಲ್ಲಿ ಮೊದಲ ಮುದ್ರಣವನ್ನು ಕಂಡ ಎಂ.ಪಿ. ಪೌಲರ ‘‘ನೋವಲ್ ಸಾಹಿತ್ಯಂ’’ ಎಂಬ ಪುಸ್ತಕದಲ್ಲಿ ಇಂದುಲೇಖಾ ಕಾದಂಬರಿಯ ಲಕ್ಷ ಸಿದ್ಧಿಯನ್ನು ಈ ರೀತಿ ವಿಶದಗೊಳಿಸಿದೆ: ‘‘ಪಾತ್ರ ಸೃಷ್ಟಿಯಲ್ಲಿ, ವಸ್ತು ರಚನೆಯಲ್ಲಿ ಗ್ರಂಥ ಕರ್ತೃವಿನ ಉದ್ದೇಶವೆಂದರೆ ತನ್ನ ಸಮಾಜದ ನಿಜವಾದ ಅವಸ್ಥೆಯನ್ನು ಅರಸುವುದು; ಹೀನವಾದ ಕಂದಾಚಾರಗಳನ್ನು ಹಾಸ್ಯದ ಮೂಲಕ ಸಮೂಲಚ್ಛೇದ ಮಾಡುವುದು; ಅಲ್ಲದೆ ಸಂಸ್ಕೃತಿಯ ಪಥಗಳನ್ನು ಸೂಚಿಸುವುದು. ಅದಕ್ಕೆ ಇಂಗ್ಲಿಷ್ ಶಿಕ್ಷಣವೇ ಉತ್ತಮ ಮಾರ್ಗವೆಂದು ಪಾತ್ರಗಳ ಮೂಲಕವೂ ಮುಖಾಮುಖಿಯಾಗಿಯೂ ಓದುಗರನ್ನು ಬೋಧಿಸಲಾಗುವುದು. ದೋಷರಹಿತವಾದ ಪಾಶ್ಚಿಮಾತ್ಯ ಶಿಕ್ಷಣದ ಪರಮ ದೃಷ್ಟಾಂತವೇ ಇಂದುಲೇಖಾ. ಒಂದು ಬೆಕ್ಕಿನ ಮರಿಯನ್ನು ನಂಬೂದಿರಿಪಾಡರಿಗೆ ಹಿಡಿದು ಕೊಡಲಾದ ಕಲ್ಯಾಣಿಕ್ಕುಟ್ಟಿ; ಅದೇ ನಂಬೂದಿರಿಪಾಡರನ್ನು ಸಾಂದ್ರವಾದ ಸ್ವಮರ್ಯಾದೆಯ ಪ್ರಕಾಶನದ ಮೂಲಕ ಅಸ್ತಪೌರುಷನನ್ನಾಗಿ ಮಾಡಿದ ಇಂದುಲೇಖಾ - ಇವರೊಳಗಿನ ಅಂತರ ನವೀನ ಶಿಕ್ಷಣದ ಪರಿಣಾಮವೆಂದು ಒಪ್ಪದೆ ಉಪಾಯವಿಲ್ಲ. ಪರಂಪರಾಗತ ‘ಬಾಂಧವ’ ಸಂಪ್ರದಾಯ ತಿರಸ್ಕೃತವಾಗುವುದಕ್ಕೆ; ಸ್ವಾತಂತ್ರ ಪ್ರಜ್ಞೆ ಹಾಗೂ ಸಾಮಾಜಿಕ ಗೌರವಗಳನ್ನು ಚಿತ್ರಿಸುವುದಕ್ಕೆ; ನಂಬೂದಿರಿಗಳ ಜಳಪ್ರಭುತ್ವ ಹೋಗಲಾಡಿಸುವುದಕ್ಕೆ; ಮೂಢನಂಬಿಕೆ ದೂರವಾಗಿ ತಾರ್ಕಿಕ ಚಿಂತನೆಗೆ ಹುಟ್ಟು ಹಾಕುವುದಕ್ಕೆ - ಇವಕ್ಕೆಲ್ಲ ಆ ಗೋಮಾಂಸಭಕ್ಷಕರ ಭಾಷೆ, ಆಶಯಗಳು ಮಾತ್ರವೇ ವರ್ತಮಾನ ಕಾಲದಲ್ಲಿ ಪ್ರಯೋಜನಕ್ಕೆ ಬರುವವೆಂದು ಕಾದಂಬರಿಯ ಹಲವು ಭಾಗಗಳು ಸಾರುತ್ತವೆ’’. ಇಂಗ್ಲಿಷ್ ಶಿಕ್ಷಣದ ಪ್ರಚಾರ ಕಾರ್ಯಕ್ಕೆಂದು ಬರೆದ ಕೈಹೊತ್ತಿಗೆ ಮಾತ್ರವೆಂದು ಇಂದುಲೇಖಾ ಕಾದಂಬರಿಯನ್ನು ಪರಿಗಣಿಸದಿರಲು ಬೇಕಾದಷ್ಟು ವಿಷಯಗಳನ್ನು ಚಂದು ಮೇನೋನ್ ತನ್ನ ಕಾದಂಬರಿಯಲ್ಲಿ ಜೋಪಾನವಾಗಿರಿಸಿದ್ದಾರೆ. ಇಂದುಲೇಖಾ ಕಲಿತದ್ದು ಇಂಗ್ಲಿಷ್ ಮಾತ್ರವಲ್ಲ; ಆಕೆಗೆ ಇಂಗ್ಲಿಷ್‌ಗಿಂತಲೂ ಚೆನ್ನಾಗಿ ಮಲಯಾಳಂ ಮತ್ತು ಸಂಸ್ಕೃತ ಗೊತ್ತು. ಇಂಗ್ಲಿಷ್ ಎಂದರೆ ವಸಾಹತುಶಾಹಿಯ ಒಂದು ಶಸ್ತ್ರವೆಂದು ಚಂದು ಮೇನೋನ್ ಭಾವಿಸಲಿಲ್ಲ. ಇಂಗ್ಲಿಷ್ ಕಲಿಯದ ಚೆರುಶ್ಶೇರಿಗೆ ವ್ಯವಹಾರಜ್ಞಾನ ಸಾಕಷ್ಟಿರಲಿಲ್ಲವೆ? ಅಲ್ಲದೆ ಇಂಗ್ಲಿಷ್ ಬಹಳ ಚೆನ್ನಾಗಿ ಕಲಿತ ಮಾಧವನಿಗೆ ಇಂದುಲೇಖಾಳಷ್ಟು ಮಾನಸಿಕ ಪಕ್ವತೆ ಸಿದ್ಧಿಸಿದಂತೆ ತೋರುವುದಿಲ್ಲ. ಯಾವುದೋ ಗಾಳಿ ಸುದ್ದಿ ಕೇಳಿ ಗಾಬರಿಯಾಗಿ ಊರುಬಿಟ್ಟು ಓಡಿ ಹೋಗುವಷ್ಟು ಮೂರ್ಖತನ ಆತನಿಗಿದೆ. ಕಲ್ಯಾಣಿಕುಟ್ಟಿ ಸೂರಿ ನಂಬೂದಿರಿಪಾಡರೊಂದಿಗೆ ಹೋಗುವುದು ಇಂಗ್ಲಿಷ್ ಕಲಿಯದ ಕಾರಣ ಮಾತ್ರವಲ್ಲ. ನೈಸರ್ಗಿಕವಾದ ಬುದ್ಧಿ ಸಾಮರ್ಥ್ಯ, ತರ್ಕಪ್ರಜ್ಞೆ, ದಿಟ್ಟತನ ಇವು ಇಂದುಲೇಖಾಳ ಸ್ವಭಾವ ವೈಶಿಷ್ಟಗಳು. ಆಕೆ ಇಂಗ್ಲಿಷ್ ಶಿಕ್ಷಣಕ್ಕೆ ಮುಂದಾದದ್ದೇ ಈ ಸ್ವಭಾವ ವೈಶಿಷ್ಟದಿಂದಾಗಿ.

ಇಂದುಲೇಖಾ ಕಾದಂಬರಿಯ ಇಂಗ್ಲಿಷ್ ಅನುವಾದ

ತಾನು ಬಾಳಿ ಬದುಕುವ ಕಾಲ ಘಟ್ಟವನ್ನೂ ಸಮಾಜದ ಸ್ಥಿತಿಯನ್ನೂ ಕುರಿತು ಚಂದು ಮೇನೋನ್ ಏನೆಲ್ಲ ತಿಳಿದಿದ್ದರೋ ಅವೆಲ್ಲವನ್ನೂ ಸ್ಪಷ್ಟಗೊಳಿಸುವ ಕೃತಿ ಇಂದುಲೇಖಾ; ಮಲಯಾಳದ ಸಾಮಾಜಿಕ ಕಾದಂಬರಿ ವಿಭಾಗದ ಅನನ್ಯ ಕೃತಿ. ಸಾಮಾಜಿಕ ಪರಿಸ್ಥಿತಿಯನ್ನು ಹಾಸ್ಯ ಪ್ರಜ್ಞೆಯೊಂದಿಗೆ ವಿಮರ್ಶಿಸುವುದಲ್ಲದೆ ಪಾತ್ರ ಸ್ವಭಾವಗಳ ವೈಚಿತ್ರವನ್ನೂ ವೈವಿಧ್ಯವನ್ನೂ ಚಿತ್ರಿಸಿ ರೋಚಕವಾದೊಂದು ಕತೆ ಹೇಳಲು ಚಂದು ಮೇನೋನ್ ಗಮನ ವಹಿಸಿದ್ದಾರೆ. 1847 ಜನವರಿ 9 ರಂದು ಜನ್ಮವೆತ್ತಿದ ಮೇನೋನ್ ತಲಶ್ಶೇರಿಯ ಬಿ.ಇ.ಎಂ.ಪಿ. ಶಾಲೆಯಲ್ಲಿ ಶಿಕ್ಷಣ ಮುಗಿಸಿ 1864ರಲ್ಲಿ ನ್ಯಾಯಾಲಯದ ಕಾರಕೂನನಾಗಿ ಉದ್ಯೋಗವನ್ನು ಆರಂಭಿಸಿದರು. 1867ರಲ್ಲಿ ಮಲಬಾರ್ ಮ್ಯಾನುವಲ್‌ನ ಕರ್ತೃವಾದ ಲೋಗನ್ ಸಾಹೇಬರ ಕೈಕೆಳಗೆ ಕಾರಕೂನನಾಗಿ ದುಡಿದ ಮೇನೋನ್ 1871ರಲ್ಲಿ ಕಲೆಕ್ಟರೇಟಿನ ಮುಖ್ಯ ಕಾರಕೂನರಾದರು; 1874ರಲ್ಲಿ ಮುನ್ಸಿಫ್; 1892ರಲ್ಲಿ ಸಬ್ ಜಡ್ಜ್ ಆಗಿ ಭಡ್ತಿ ಹೊಂದಿದರು. 1889ರಲ್ಲಿ ಎರಡೇ ತಿಂಗಳಲ್ಲಿ ಇಂದುಲೇಖಾ ಕಾದಂಬರಿಯನ್ನು ಬರೆದು ಅದೇ ವರ್ಷ ಡಿಸೆಂಬರ್‌ನಲ್ಲಿ ಪ್ರಕಾಶನಗೊಳಿಸಿದರು. 1890 ಮೇ ತಿಂಗಳಲ್ಲಿ ಎರಡನೆಯ ಆವೃತ್ತಿಯನ್ನು ಪ್ರಕಾಶನಗೊಳಿಸಿದ ಚಂದು ಮೇನೋನ್ ಮುಂದಿನ ಕಾದಂಬರಿ ಶಾರದವನ್ನು ಪೂರ್ತಿಗೊಳಿಸುವ ಮೊದಲು 1899 ಸೆಪ್ಟಂಬರ್ 7 ರಂದು ನಿಧನರಾದರು. ರಚಿಸಿದ ಕೃತಿಗಳ ಸಂಖ್ಯೆಯಿಂದ ಅಥವಾ ಗಾತ್ರದಿಂದಲ್ಲ; ಅವುಗಳ ಮಹತ್ವದಿಂದ ಹಾಗೂ ಸಾಹಿತ್ಯದ ಗುಣದಿಂದ, ಸಾಮಾಜಿಕ ಕಳಕಳಿಯಿಂದ ಚಂದು ಮೇನೋನ್ ಯಾವ ಕಾಲಕ್ಕೂ ಮಲಯಾಳದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಾರೆ.

               ‘ಇಂದುಲೇಖಾ’ ಕನ್ನಡ ಕಾದಂಬರಿ

share
ಡಾ.ಕೆ. ಅಯ್ಯಪ್ಪ ಪಣಿಕ್ಕರ್
ಡಾ.ಕೆ. ಅಯ್ಯಪ್ಪ ಪಣಿಕ್ಕರ್
Next Story
X