ರಾಯಿಸ್ ನಿಂದ ಮಹೀರಾ ನಿರ್ಗಮನ
ಶಾರುಕ್ಖಾನ್ ಅಭಿನಯದ ರಾಯೀಸ್ ಚಿತ್ರೀಕರಣಕ್ಕೆ ಮೊದಲೇ ಭಾರೀ ಸುದ್ದಿ ಮಾಡುತ್ತಿದೆ. ಈ ಬಿಗ್ ಬಜೆಟ್ ಚಿತ್ರದ ಹಿರೋಯಿನ್ ಆಗಿ ಪಾಕ್ ನಟಿ ಮಹೀರಾ ಖಾನ್ ನಟಿಸಲಿರುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ರಾಯಿಸ್ನಲ್ಲಿ ಮಹೀರಾಖಾನ್ ನಟಿಸುತ್ತಿಲ್ಲವೆಂಬ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ. ಜಮ್ಮುಕಾಶ್ಮೀರದ ಉರಿಯಲ್ಲಿ ಸೇನಾನೆಲೆಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕ್ ನಡುವಿನ ಬಾಂಧವ್ಯ ಬಿಗಡಾಯಿಸಿರುವುದೇ, ರಾಯಿಸ್ನಿಂದ ಮಹೀರಾಳ ನಿರ್ಗಮನಕ್ಕೆ ಕಾರಣವಾಗಿದೆ.
ಬಾಲಿವುಡ್ನ ಒಂದು ಗುಂಪು ಪಾಕ್ ತಾರೆಯರನ್ನು ಬಹಿಷ್ಕರಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಯಾವುದೇ ವಿವಾದ ಬೇಡವೆಂಬ ಕಾರಣದಿಂದ ಮಹೀರಾಳನ್ನು ಕೈಬಿಡಲು ನಿರ್ಮಾಪಕ ರಿತೋ ಸಿದ್ವಾನಿ ನಿರ್ಧರಿಸಿದ್ದಾರೆನ್ನಲಾಗಿದೆ.
ಇದೀಗ ರಾಯಿಸ್ ಚಿತ್ರಕ್ಕೆ ಹೊಸ ಹಿರೋಯಿನ್ನ ತಲಾಷ್ನಲ್ಲಿ ನಿರ್ದೇಶಕ ರಾಹುಲ್ ಧೊಲಕಿಯಾ ನಿರತರಾಗಿದ್ದಾರೆ.
Next Story