ಊಟಿ ಎಂಬ ತಲ್ಲಣ..!
ಒಂದೆರಡು ತಿಂಗಳ ಹಿಂದೆ ಊಟಿ ಸಿನೆಮಾ ಹಾಡುಗಳ ಸಿಡಿ ಬಿಡುಗಡೆ ಮಾಡಲು ಹೋಗಿದ್ದೆ. ಸಿನೆಮಾ ಬಗ್ಗೆ ಓನಾಮಗಳನ್ನೂ ಅರಿಯದ ನಾನು ಮನಸ್ಸಿಗೆ ಬಂದದ್ದನ್ನು ಮಾತಾಡಿ ಬಂದಿದ್ದೆ..
ಬಹುಜನ ಚಳವಳಿಯಲ್ಲಿ ಸಕ್ರಿಯರಾಗಿರುವ ಗೆಳೆಯರಾದ ವಕೀಲ ಮೋಹನ್ ಕುಮಾರ್ ಹಾಗೂ ಸಾಹಿತಿ ಕೃಷ್ಣಮೂರ್ತಿ ಚಮರಂ ತಮ್ಮ ಇತರೆ ಗೆಳೆಯರೊಂದಿಗೆ ಊಟಿ ಸಿನೆಮಾ ಮಾಡುವ ಈ ಸಾಹಸಕ್ಕಿಳಿದಿದ್ದರು! ಸಿನೆಮಾ ಮಾಡುವ ‘ಜಾತಿ’ಗೇ ಸೇರದ ಇವರಿಗೆ ಈ ಧೈರ್ಯ ಹೇಗೆ ಬಂತೋ ನನಗಿನ್ನೂ ಅರ್ಥವಾಗಿಲ್ಲ!?
ಯಾವುದೋ ಕಾರಣಕ್ಕೆ ಮಾನಸಿಕವಾಗಿ ಜರ್ಜರಿತನಾಗಿದ್ದ ನನಗೆ ಒಂದುdiversionಗಾಗಿ ‘ಊಟಿ’ಗೆ ಕರೆದೊಯ್ದರು.. ನಿಜ ಹೇಳಬೇಕೆಂದರೆ ಮನಸಿಲ್ಲದ ಮನಸಿನಿಂದ ಹೋಗಿದ್ದೆ..
‘ಊಟಿ’ ನನ್ನನ್ನು ನಿಧಾನಕ್ಕೆ ಸೆಳೆಯತೊಡಗಿತು. ಸುಮಾರು ವರ್ಷಗಳ ಹಿಂದೆ ಬಾಲು ಮಹೇಂದ್ರುರವರ ‘ಮೂನ್ರಂ ಪಿರೈ’ ಚಿತ್ರದಲ್ಲಿ ಊಟಿಯನ್ನು ಅತೀ ಮನಮೋಹಕವಾಗಿ ತೋರಿಸಿದ್ದನ್ನು ಬಿಟ್ಟರೆ ಊಟಿಯ ಸೌಂದರ್ಯವನ್ನು ಇಷ್ಟೊಂದು ಸುಂದರವಾಗಿ ತೋರಿಸಿದ ಚಿತ್ರ ‘ಊಟಿ’ಯೇ ಎನಿಸುತ್ತದೆ.
ಖುಷ್ವಂತ್ ಸಿಂಗ್ ರವರ train to Pakistanನಂತಹ ಪುಸ್ತಕಗಳನ್ನು ಆಧರಿಸಿ ಇಂಡಿಯ-ಪಾಕಿಸ್ತಾನ್ ಸಂಘರ್ಷದ ನಡುವೆ ಬೆಂಕಿಯಲ್ಲಿ ಅರಳಿದ ಪ್ರೇಮ ಕತೆಗಳು, ಮಣಿರತ್ನಂ ಮಾಡಿದ ಬಾಂಬೆ. ಬಾಲಚಂದರ್ರವರ ಮರೋಚರಿತ್ರ ರಂತವುಗಳು ಪ್ರಾದೇಶಿಕ ಗಡಿಗಳೊಂದಿಗೆ ಜಾತಿ,ಮತ ಗಳ ಸಂಘರ್ಷಗಳನ್ನಿಟ್ಟು ಕೊಂಡು ಮಾಡಿದ ಯಶಸ್ವಿ ಪ್ರಯತ್ನಗಳು. ಇಲ್ಲಿ ಕೋಟ್ಯನುಗಟ್ಟಳೆ ಹಣ ಸುರಿಯ ಲಾಗಿದೆ.. ಹೆಸರಾಂತ ನಿರ್ದೇಶಕರಿದ್ದಾರೆ, ದೊಡ್ಡ ಸ್ಟಾರ್ ಕ್ಯಾಸ್ಟ್ಗಳ ವಿಜೃಂಭಣೆಯ ಮೆರವಣಿಗೆಯೇ ಇದೆ!!
‘ಊಟಿ’ ಮಾಡಿದವರಿಗೆ ಈ ಯಾವ ಹಿನ್ನೆಲೆಯೂ ಇಲ್ಲ..! ಹಣವಿಲ್ಲ, ಹೆಸರಿಲ್ಲ, ಹೆಸರಾಂತ ನಟನಟಿಯರಿಲ್ಲ. ಅವರಿಗಿರುವುದು ಸಿನೆಮಾ ಮಾಡುವ passion
ಒಂದೇ.. ಅದಕ್ಕೆ ಬೇಕಾದ ಮೊಂಡುತನ, ಧೈರ್ಯ, ಬದ್ಧತೆ ಮತ್ತು talent ಇದೆ.. ಇದನ್ನು ಇಲ್ಲಿನ ಪ್ರತಿದೃಶ್ಯದಲ್ಲೂ ಸಾಬೀತುಪಡಿಸಿದ್ದಾರೆ..even an ordinary people also can make good cinema ಎಂಬುದನ್ನು ತಣ್ಣಗೆ ನಿರೂಪಿ ಸಿದ್ದಾರೆ. ಇವರು ಈ ಸಿನೆಮಾದಲ್ಲಿ ಬೆಸೆಯ ಹೊರಟಿರುವುದು ಭಾಷೆ, ಪ್ರೇಮ ಮತ್ತು ವಿಶೇಷವಾಗಿ ಜೀವಜಲ ನೀರನ್ನು. ಬಹುಶಃ ಈ ವಿಷಯಗಳನ್ನಿಟ್ಟುಕೊಂಡು ಸಿನೆಮಾ ಮಾಡುವುದು ಒಂದು ರೀತಿಯ ಚಾಲೆಂಜ್.. ಕೈಯಲ್ಲಿ ಕಾಸಿಲ್ಲದ ಹುಡುಗರು ಇದನ್ನು ತಮ್ಮ ಮಿತಿಗಳಲ್ಲಿ ನಿಭಾಯಿಸಿರುವುದು ಅದ್ಭುತ!! ನಮ್ಮಂತಹವರಿಗೆ ತಲುಪಿಸಿರುವುದಂತೂ ಇನ್ನೂ ಅದ್ಬುತ..
ಮೊದಲಧರ್ದಲ್ಲಿ ಊಟಿಯ ಸುಂದರ ಪರಿಸರದಲ್ಲಿ ಎರಡು ಪುಟಾಣಿ ಹೃದಯ ಗಳಲ್ಲಿ ಅರಳುವ ಪ್ರೇಮ.. ಇದು ಒಂದಷ್ಟು ಎಳೆಯುತ್ತದೆ ಆದರೆ ಎಲ್ಲೂ ಬೋರಾ ಗುವುದಿಲ್ಲ.. ಸಂಭಾಷಣೆ ಮತ್ತು ಹಾಡುಗಳು ಇದನ್ನು ನಿಭಾಯಿಸುತ್ತವೆ. ಇಂಟ ರ್ವಲ್ ನಂತರ ಕತೆ ಅನೇಕ ತಿರುವುಗಳನ್ನು ಪಡೆದು ಕುತೂಹಲ ಕೆರಳಿಸುತ್ತದೆ.. ಮಿಕ್ಕ ಪ್ಲಸ್ ಮತ್ತು ಮೈನಸ್ ಪಾಯಿಂಟುಗಳನ್ನು ಸಿನೆಮಾ ‘ಪಂಡಿತರು’ ಹೇಳಬೇಕು... ನಮ್ಮಂತಹ ಹುಲುಮಾನವರಿಗೆ ತೋಚಲ್ಲ. ನಮಗಂತೂ ಒಟ್ಟಾರೆಯಾಗಿ ಒಂದು ಒಳ್ಳೆಯ ಸಿನೆಮಾ ನೋಡಿದ ಅನುಭವ, ಆಹ್ಲಾದಕರ ಮನಸ್ಸಿನಿಂದ ಹೊರಬರುತ್ತೇವೆ.
ಎಲ್ಲರೂ ಸಿನೆಮಾ ನೋಡಿ, ಪ್ರೋತ್ಸಾಹಿಸಿ.. ನಮ್ಮಲ್ಲು ಮಣಿರತ್ನಂ, ಬಾಲಚಂದರ್ ಗಳಿರಲಿ.. ಅಕಿರ ಕುರಸೋವ, ಸ್ಪಿಲ್ ಬರ್ಗ್ ಗಳನ್ನು ಕೂಡ ನಾವೇ ಗುರುತಿ ಸೋಣ.. ಯಾರೂ ಆಕಾಶದಿಂದ ಇಳಿದುಬಂದವರಲ್ಲವಲ್ಲಾ..?