Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಟಲಿಯ ವೆನಿಸ್ ಕೇರಳದಲ್ಲೇ ಇದೆ....

ಇಟಲಿಯ ವೆನಿಸ್ ಕೇರಳದಲ್ಲೇ ಇದೆ. ನೀವಿನ್ನೂ ಹೋಗಿಲ್ಲವೆ?

ವಾರ್ತಾಭಾರತಿವಾರ್ತಾಭಾರತಿ6 May 2016 11:47 AM IST
share
ಇಟಲಿಯ ವೆನಿಸ್ ಕೇರಳದಲ್ಲೇ ಇದೆ. ನೀವಿನ್ನೂ ಹೋಗಿಲ್ಲವೆ?

ಅಲೆಪಿಯಲ್ಲಿ ಭೇಟಿ ನೀಡಲು ಸಿಗುವ ಸ್ಥಳಗಳ ಪಟ್ಟಿಯೇ ಇದೆ. ಪ್ರವಾಸಿಗರು ಆಶಿಸಿದ್ದಕ್ಕಿಂತಲೂ ಹೆಚ್ಚು ಉತ್ತಮ ಸ್ಥಳಗಳು ಇಲ್ಲಿವೆ. ಪ್ರಕೃತಿ ಇಷ್ಟಪಡುವವರಿಗೆ ಅಲೆಪಿ ಕಡಲ ತೀರ, ವೆಂಬಣಡ್ ಸರೋವರ ಸೇರಿದಂತೆ ಪುರಾತನ ಪಟ್ಟಣದ ಚರ್ಚ್ ಮತ್ತು ಮನ್ನರಸಾಲ ದೇವಾಲಯವು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ.ಒಟ್ಟಾರೆ ಅಲೆಪಿ ಪ್ರವಾಸಿಗರ ಸ್ವರ್ಗ. ಪ್ರಸಿದ್ಧ ಸ್ಥಳ ಬೇಡವೆಂದಾದಲ್ಲಿ ಕುಟ್ಟನಾಡ್ ಹೊಲಗಳಲ್ಲಿ ಸುತ್ತಾಡಬಹುದು. ಅಲ್ಲದೆ ವಿಶ್ವಪ್ರಸಿದ್ಧ ಹಿನ್ನೀರು ಇಲ್ಲಿದೆ. ಇದೇ ಕಾರಣದಿಂದ ಅಲೆಪಿಯನ್ನು ಲಾರ್ಡ್ ಕರ್ಜನ್ ಪೂರ್ವದ ವೆನಿಸ್ ಎಂದಿದ್ದರು.

ಅಲೆಪಿ ಕಡಲತೀರ

ಕೋವಳಂ ಮತ್ತು ವರ್ಕಲದಂತಹ ಪ್ರಸಿದ್ಧ ಕಡಲತೀರಗಳನ್ನು ಸುತ್ತುವರಿದಿರುವ ಅಲೆಪಿ ಕಡಲತೀರ ಶಾಂತ ಪ್ರದೇಶ. ಪಟ್ಟಣದಿಂದ 30 ನಿಮಿಷದೊಳಗೆ ಇಲ್ಲಿಗೆ ಬರಬಹುದು. ಸೂರ್ಯಾಸ್ತ ನೋಡಲು ಉತ್ತಮ ಸ್ಥಳ. ಇಲ್ಲೊಂದು ಲೈಟ್ ಹೌಸ್ ಕೂಡ ಇದೆ. ಕಡಲತೀರದಲ್ಲಿ 137 ವರ್ಷ ಹಳೇ ಸೇತುವೆಯೂ ಇದೆ. ಕೇರಳದ ಪ್ರಸಿದ್ಧ ಸಮುದ್ರ ಬಂದರಾಗಿದ್ದ ದಿನಗಳ ಕುರುಹುಗಳಿವು. ಈಗ ಸಮುದ್ರ ಸೇತುವೆ ಪಾಳು ಬಿದ್ದಿದೆ.

ವೆಂಬನಡ್ ಸರೋವರ

ಭಾರತದ ಧೀರ್ಘ ಮತ್ತು ಅತೀ ಸುಂದರ ಸರೋವರಗಳಲ್ಲಿ ಒಂದು ಇದು. ಈ ಸರೋವರ ಕೊಟ್ಟಾಯಂ, ಎರ್ನಾಕುಲಂ ಮತ್ತು ಅಲೆಪಿ ಜಿಲ್ಲೆಗಳನ್ನು ಸಂಪರ್ಕಿಸುವಷ್ಟು ದೊಡ್ಡದಾಗಿದೆ. ಫೋಟೋಗ್ರಾಫರುಗಳ ಸ್ವರ್ಗವಿದು. ಹೌಸ್ ಬೋಟುಗಳು ಈ ಸರೋವರದಲ್ಲಿ ತೇಲುತ್ತದೆ. ಕುಮಾರಕಂ ಪಕ್ಷಿಧಾಮವೂ ಸರೋವರದ ತಟದಲ್ಲಿರುವ ಕಾರಣ ಪಕ್ಷಿಪ್ರೇಮಿಗಳಿಗೂ ಇಷ್ಟದ ತಾಣ. ಹಿನ್ನೀರು ಮತ್ತು ಪಕ್ಷಿ ಧಾಮ ಎರಡನ್ನೂ ನೋಡಲು ಹೌಸ್ ಬೋಟ್ ತೆಗೆದುಕೊಳ್ಳಬಹುದು. ಬೈನಾಕುಲರ್ ಇದ್ದರೆ ಇನ್ನೂ ಹೆಚ್ಚಿನ ಪಕ್ಷಿಗಳನ್ನು ನೋಡಬಹುದು.

ಸೇಂಟ್ ಮೇರಿಸ್ ಸೈರೊ

ಕ್ರಿಸ್ತ ಪೂರ್ವ 427ರಲ್ಲಿ ಸ್ಥಾಪಿಸಲಾದ ಹಳೇ ಚರ್ಚುಗಳಲ್ಲಿ ಒಂದು ಇದು. ಪೆರಿಯಾರ್ ನದಿಯ ಬದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ದೋಣಿ ಅಥವಾ ಹೌಸ್ ಬೋಟ್ ಮೂಲಕ ಇಲ್ಲಿಗೆ ತಲುಪಬಹುದು. ಬಹಳಷ್ಟು ಹಿನ್ನೂರು ದೋಣಿಯಾನದಲ್ಲಿ ಇದನ್ನೂ ಸೇರಿಸಲಾಗುತ್ತದೆ. ಇದು ಪರ್ಶಿಯನ್, ಪೋರ್ಚುಗೀಸ್ ಮತ್ತು ಭಾರತೀಯ ವಾಸ್ತುಶಿಲ್ಪದ ಮಿಶ್ರಣ. ಪುರಾತನ ಪೈಂಟಿಂಗ್ ಮತ್ತು ವಾಸ್ತುಶಿಲ್ಪವೂ ಇಲ್ಲಿದೆ. ಒಳಗಿರುವ ಬಂಡೆಗಳ ಕೆತ್ತನೆ ಓದಲು ಮರೆಯಬೇಡಿ.

ಪಾತಿರಾಮನಲ್ ದ್ವೀಪ

ಪಾತಿರಾಮನಲ್ ದ್ವೀಪ ಪಕ್ಷಿ ಪ್ರೇಮಿಗಳಿಗೆ ಉತ್ತಮ ತಾಣ. ಹಿನ್ನೀರಿನ ನಡುವೆ ವಿಶ್ವದ ಮೂಲೆ ಮೂಲೆಗಳಿಂದ ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಅಲೆಪಿ ಹಿನ್ನೀರಲ್ಲಿ ಹೌಸ್ ಬೋಟ್ ಪಡೆದುಕೊಂಡಿದ್ದರೆ ಇಲ್ಲಿಗೆ ಭೇಟಿ ನೀಡಲೇಬೇಕು.

ಕುಟ್ಟನಾಡ್

ಕುಟ್ಟನಾಡ್ ಅನ್ನು ಕೇರಳದ ಅಕ್ಕಿಯ ಕಣಜ ಎಂದೂ ಕರೆಯುತ್ತಾರೆ. ಅಲೆಪಿಯ ವಿಭಿನ್ನ ಆಕರ್ಷಣೆ ಇದು. ಇಲ್ಲಿನ ಹಸಿರು ಹೊಲಗಳು ಮತ್ತು ರೈತರ ಪುರಾತನ ಕೆಲಸದ ವಿಧಿ ವಿಧಾನಗಳನ್ನು ನೋಡಬಹುದು.

ಅಲೆಪಿಯ ಹಿನ್ನೀರು

ದಕ್ಷಿಣ ಭಾರತದ ಸ್ವರ್ಗ ಎಂದು ಹೇಳುವ ಒಂದು ಜಾಗ ಈ ಹಿನ್ನೀರು. ಅರೆಬಿಯನ್ ಸಮುದ್ರಕ್ಕೆ ಸಮಾಂತರವಾಗಿರುವ ಈ ಹಿನ್ನೀರು ಫೋಟೋಗ್ರಾಫರುಗಳ ಆಕರ್ಷಣೆಯ ಸ್ಥಳ. ಹೌಸ್ ಬೋಟ್ ಅಥವಾ ಸ್ಪೀಡ್ ಬೋಟ್ ಮೂಲಕ ಇದನ್ನು ವೀಕ್ಷಿಸಬಹುದು. ಶಾಲಾ ಮಕ್ಕಳು ತಮ್ಮ ದೋಣಿಗಳಲ್ಲಿ ಮನೆಗೆ ಹೋಗುವುದು, ಗ್ರಾಮಸ್ಥರು ತಮ್ಮದೇ ದೋಣಿಯನ್ನು ಸಾರಿಗೆಯಾಗಿ ಮಾಡಿಕೊಂಡಿರುವುದನ್ನು ನೋಡಬಹುದು. ಇದೇ ಕಾರಣದಿಂದ ಇದನ್ನು ಭಾರತದ ವೆನಿಸ್ ಎನ್ನುವುದು.

ಮನ್ನರಸಲ ದೇವಾಲಯ

ಇದನ್ನು ಶ್ರೀ ನಾಗರಾಜ ದೇವಾಲಯ ಎಂದೂ ಕರೆಯುತ್ತಾರೆ. ನಾಗ ದೇವರ ಈ ದೇಗುಲದಲ್ಲಿ 30,000ಕ್ಕೂ ಅಧಿಕ ಹಾವುಗಳ ಚಿತ್ರಗಳಿವೆ. ಪರಷುರಾಮ ಪೂಜಿಸಿದ ಮೇಲೆ ನಾಗರಾಜ ಪ್ರತ್ಯಕ್ಷವಾದ ಸ್ಥಳ ಎಂದು ಇದನ್ನು ಹೇಳಲಾಗುತ್ತದೆ.

ಕೃಪೆ: www.happytrips.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X