ಗೋಮೂತ್ರ, ಸಗಣಿಯಿಂದ ಶ್ಯಾಂಪೂ, ಕ್ಯಾನ್ಸರ್ ಔಷಧಿಗಳ ಅಭಿವೃದ್ಧಿಗೆ ಮುಂದಾದ ಮೋದಿ ಸರಕಾರ | Vartha Bharati- ವಾರ್ತಾ ಭಾರತಿ

ಗೋಮೂತ್ರ, ಸಗಣಿಯಿಂದ ಶ್ಯಾಂಪೂ, ಕ್ಯಾನ್ಸರ್ ಔಷಧಿಗಳ ಅಭಿವೃದ್ಧಿಗೆ ಮುಂದಾದ ಮೋದಿ ಸರಕಾರ

ಹೊಸದಿಲ್ಲಿ, ಫೆ.15: ಟೂತ್ ಪೇಸ್ಟ್, ಶ್ಯಾಂಪೂ, ಸೊಳ್ಳೆ ನಿವಾರಕಗಳಂತಹ ಪರ್ಸನಲ್ ಕೇರ್ ಉತ್ಪನ್ನಗಳು ಮತ್ತು ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳಿಗೆ ಔಷಧಿಗಳನ್ನು ಅಭಿವೃದ್ಧಿಗೊಳಿಸಲು ದೇಶಿ ಆಕಳುಗಳ ಮೂತ್ರ ಮತ್ತು ಸಗಣಿಯ ಕುರಿತು ಸಂಶೋಧನೆ ನಡೆಸಲು ವಿಜ್ಞಾನಿಗಳಿಗಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರವು ಎದುರು ನೋಡುತ್ತಿದೆ ಎಂದು Theprint.in ಪ್ರಕಟಿಸಿರುವ ಮೋಹನಾ ಬಸು ಅವರ ವಿಶೇಷ ವರದಿ ತಿಳಿಸಿದೆ.

‘ದೇಶಿ ಆಕಳುಗಳ ಉತ್ಪನ್ನಗಳ ಕುರಿತು ಹೆಚ್ಚಿನ ಸಂಶೋಧನೆಯ ಮೂಲಕ ವೈಜ್ಞಾನಿಕ ಬಳಕೆ (ಎಸ್‌ಯುಟಿಆರ್‌ಎ-ಪಿಐಸಿ ಇಂಡಿಯಾ)’ ಎಂದು ಹೆಸರಿಸಲಾಗಿರುವ ಕಾರ್ಯಕ್ರಮದಡಿ ಈ ಸಂಶೋಧನೆ ನಡೆಯಲಿದೆ. ಇದು ಸರಕಾರದ ನೂತನ ಅಂತರ್‌ ಸಚಿವಾಲಯ ಆರ್ಥಿಕ ಸಹಭಾಗಿತ್ವದ ಯೋಜನೆಯಾಗಿದ್ದು, ವಿವಿಧ ಸರಕಾರಿ ಏಜೆನ್ಸಿಗಳ ಬೆಂಬಲ ಹೊಂದಿದೆ.

ಆಯುಷ್ ಸಚಿವಾಲಯ, ನೂತನ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ನೂತನ ಯೋಜನೆಯೊಂದಿಗೆ ಕೈಜೋಡಿಸಿವೆ.

ಸರಕಾರವು ಶುಕ್ರವಾರ ವಿಜ್ಞಾನಿಗಳು, ವಿದ್ವಾಂಸರು ಮತ್ತು ತಳಮಟ್ಟದ ಸಂಸ್ಥೆಗಳಿಂದ ಯೋಜನಾ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಯೋಜನೆಗಾಗಿ ಈಗಾಗಲೇ 98 ಕೋ.ರೂ. ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಆಯುರ್ವೇದ ವೈದ್ಯರು ಗೋ ಉತ್ಪನ್ನಗಳನ್ನು ಬಳಸುತ್ತಿದ್ದಾರಾದರೂ ಈ ಕುರಿತು ಸಾಕಷ್ಟು ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗಳು ನಡೆದಿಲ್ಲ ಎಂದು ಯೋಜನೆಯ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಸೊಳ್ಳೆ ನಿವಾರಕಗಳು, ನೆಲ ಸ್ವಚ್ಛಗೊಳಿಸುವ ದ್ರಾವಣಗಳು ಹಾಗೂ ದಂತ ಮಂಜನ, ಕೇಶತೈಲ, ಶಾಂಪೂಗಳು ಮತ್ತು ಕಂಡಿಷನರ್‌ ಗಳಂತಹ ವೈಯಕ್ತಿಕ ಆರೈಕೆಯ ಬಳಕೆ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಲು ಸರಕಾರವು ಬಯಸಿದೆ.

 ಗೋಮೂತ್ರವನ್ನು ಬಳಸಿ ಪರಿಣಾಮಕಾರಿ ತಲೆಗೂದಲ ಹೊಟ್ಟು ನಿವಾರಕಗಳನ್ನು ತಯಾರಿಸಬಹುದು ಎನ್ನುವುದನ್ನು ಪ್ರಾಥಮಿಕ ಅಧ್ಯಯನಗಳು ತೋರಿಸಿವೆ. ಬೆರಣಿಯ ಹೊಗೆಯಿಂದ ಸೊಳ್ಳೆಗಳನ್ನು ದೂರವಿಡಬಹುದು ಎಂದೂ ಹೇಳಲಾಗಿದೆ. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ನೆಲವನ್ನು ಸಗಣಿಯಿಂದ ಸಾರಿಸುವ ಸಂಪ್ರದಾಯವು ನೊಣಗಳು ಮತ್ತು ಇತರ ಕ್ರಿಮಿಕೀಟಗಳ ಹಾವಳಿಯನ್ನು ನಿಯಂತ್ರಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳು ಲಭ್ಯವಿವೆ. ಆದರೆ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆದಿಲ್ಲ ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಸರಕಾರವು ಕೆಲವು ವಿಶಿಷ್ಟ ಗುಣಗಳು ಮತ್ತು ಲಕ್ಷಣಗಳನ್ನು ಹೊಂದಿವೆ ಎಂದು ನಂಬಲಾಗಿರುವ ದೇಶಿ ಆಕಳುಗಳ ವೈಶಿಷ್ಟದ ಕುರಿತೂ ಸಂಶೋಧನೆಗೆ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಅಂದ ಹಾಗೆ ಸರಕಾರದ ಈ ಕ್ರಮ ಇದೇ ಮೊದಲ ಸಲವಲ್ಲ. 2017ರಲ್ಲಿ ಮೂತ್ರ ಸೇರಿದಂತೆ ಆಕಳುಗಳ ಉತ್ಪನ್ನಗಳ ಬಗ್ಗೆ ವೈಜ್ಞಾನಿಕವಾಗಿ ದೃಢೀಕೃತ ಸಂಶೋಧನೆಯನ್ನು ನಡೆಸಲು 19 ಸದಸ್ಯರ ಸಮಿತಿಯೊಂದನ್ನು ಸರಕಾರವು ರಚಿಸಿತ್ತು. ಆಕಳ ಸಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣವಾಗಿರುವ ‘ಪಂಚಗವ್ಯ’ದ ಲಾಭಗಳನ್ನು ವೈಜ್ಞಾನಿಕವಾಗಿ ದೃಢೀಕರಿಸಲು ನೆರವಾಗುವ ಯೋಜನೆಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಈ ಸಮಿತಿಗೆ ಒಪ್ಪಿಸಲಾಗಿತ್ತು. ಯೋಜನೆಗಾಗಿ ಕನಿಷ್ಠ 50 ಪ್ರಸ್ತಾವಗಳು ಬಂದಿದ್ದವು. ಆದರೆ ಯೋಜನೆ ಮಾತ್ರ ಮೂಲೆಗುಂಪಾಗಿತ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top