ದುಬೈ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಗೊತ್ತೇ?
ಇದು ಅಂತಿಂಥ ನಿಲ್ದಾಣವಲ್ಲ
ದುಬೈ ಜಗತ್ತಿನಲ್ಲಿಯೇ ಅತೀ ವೇಗವಾಗಿ ಬೆಳೆಯುವ ಸಂಚಾರಿ ಕೇಂದ್ರ. ಇಲ್ಲಿ ಅತೀ ಸುಂದರ ವಿಮಾನನಿಲ್ದಾಣಗಳಿವೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದುಬೈನಿಂದ ಹೊರಗೆ 3 ಮೈಲಿಗಳಲ್ಲಿದೆ. ಹೀಗಾಗಿ ದೀರ್ಘ ಪ್ರಯಾಣದಲ್ಲಿ ಸಿಕ್ಕಿಬಿದ್ದವರಿಗೆ ಇದು ಸುಲಭವಾಗಿ ತಲುಪುವ ನಗರ. ಬಹಳಷ್ಟು ಅಂತಾರಾಷ್ಟ್ರೀಯ ವಿಮಾನಗಳು ಈ ದಾರಿಯಿಂದಲೇ ಪ್ರಯಾಣಿಸುತ್ತವೆ. ಹೀಗಾಗಿ ಆ 4-8 ಗಂಟೆಗಳ ವಿರಾಮವನ್ನು ಹೇಗೆ ಕಳೆಯುವುದು ಎನ್ನುವ ಚಿಂತೆಯೂ ನಿಮ್ಮನ್ನು ಕಾಡಬಹುದು.
ಯುರೋಪಿಗೆ ಪ್ರಯಾಣ ಬೆಳೆಸುವವರು ಸಾಮಾನ್ಯವಾಗಿ ಈ ಸಮಸ್ಯೆ ಎದುರಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಆಯ್ಕೆಯ ಆರಾಮ ಸಮಯದಲ್ಲಿ ಈ ಕೆಳಗಿನ ವಿಷಯಗಳಲ್ಲಿ ತೊಡಗಿಸಿಕೊಳ್ಳಬಹುದು.
4 ಗಂಟೆಗಳ ವಿಮಾನ ಆರಾಮ ಇರುವವರಿಗೆ: ಕೊಡುಗೆಯ ಆಯ್ಕೆಗಳು
ದುಬೈ ಸುಂಕ ರಹಿತ ಮಳಿಗೆಗಳಲ್ಲಿ ಸಂಬಂಧಿಕರಿಗೆ ಉಡುಗೊರೆ ಖರೀದಿಸಬಹುದು. ಸುಂಕ ರಹಿತ ಸುಗಂಧ ದ್ರವ್ಯಗಳು, ವಾಚ್ ಗಳು, ಬಟ್ಟೆಗಳು, ಚಾಕಲೇಟುಗಳು ಖರೀದಿಗೆ ಉತ್ತಮ ತಾಣವಿದು.
ಮನೋರಂಜನೆಯೂ ಪಡೆಯಬಹುದು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ, ಮಕ್ಕಳ ಆಟದ ಜಾಗಗಳಿವೆ. 12 ಮತ್ತು 14ನೇ ಗೇಟುಗಳಲ್ಲಿವೆ. ಇಂಟರ್ನೆಟ್ ಕಿಯೋಸ್ಕ್ ಗಳು ಗೇಟ್ 9 ಮತ್ತು 23 ಬಳಿ ಇವೆ. ನಾಲ್ಕು ಪ್ರಾರ್ಥನಾ ಕೋಣೆಗಳು ಅರೈವಲ್ ಮತ್ತು ಮೈನ್ ಕಾನ್ಕೋರ್ಸಲ್ಲಿವೆ. ಹಲವಾರು ಲಾಂಜ್ ಗಳೂ ಇವೆ. ಅಂತಾರಾಷ್ಟ್ರೀಯ ಫಸ್ಟ್ ಕ್ಲಾಸ್ ಲಾಂಜ್ ಗೇಟ್ 114 ಮತ್ತು 112ರಲ್ಲಿದೆ. ಬ್ಯುಸಿನೆಸ್ ಕ್ಲಾಸ್ ಲಾಂಜ್ ಗೇಟ್ 108ರಲ್ಲಿದೆ. ಏರ್ ಫ್ರಾನ್ಸ್, ಗಲ್ಫ್ ಏರ್, ಎಮಿರೇಟ್ಸ್, ಬ್ರಿಟಿಷ್ ಏರ್ವೇಸ್, ಕೆಎಲ್ಎಂ ಮತ್ತು ಸ್ಟಾರ್ ಅಲೈನ್ಸ್ ಗೆ ಲಾಂಜ್ ಗಳು ಗೇಟ್ 21 ಮತ್ತು 26ರಲ್ಲಿದೆ. ಇದಕ್ಕೆ ಹೆಚ್ಚುವರಿಯಾಗಿ ಶಾಂತ ಲಾಂಜ್ ಗಳು ಶೇಕ್ ರಶೀದ್ ಟರ್ಮಿನಲ್ ಗೇಟ್ 9 ಮತ್ತು 23ರಲ್ಲಿವೆ. ಇವು ಉಚಿತ ಲಾಂಜ್ ಗಳು.
ಊಟದ ಆಯ್ಕೆ:
ಕೆಲವು ವಿಮಾನಗಳು ಆಹಾರದ ಕೂಪನ್ ಕೊಡುವ ಕಾರಣ ಹಲವು ಆಯ್ಕೆಗಳಿವೆ. ಎಮಿರೇಟ್ಸ್ ಉಚಿತ ಆಹಾರದ ಕೂಪನ್ ಗಳನ್ನು ಕೊಡುತ್ತಿದ್ದು, ವಿವಿಧ ಟರ್ಮಿನಲುಗಳ ಹಲವು ರೆಸ್ಟೊರೆಂಟುಗಳಲ್ಲಿ ಬಳಸಬಹುದು. ನೀವು ಕನೆಕ್ಟಿಂಗ್ ಫ್ಲೈಟ್ ಎಲ್ಲಿಂದ ಪಡೆಯುವುದು ಎಂದು ಗಮನಿಸಿ ಕೂಪನಿಗೆ ತಕ್ಕ ರೆಸ್ಟೊರೆಂಟ್ ಆರಿಸಬಹುದು. ದುಬಾರಿ ಆಹಾರವನ್ನು ಉಚಿತವಾಗಿ ಸವಿಯಬಹುದು.
ಆರಾಮವಾಗಿ ಸಿನಿಮಾ ನೋಡುವುದು ಅಥವಾ ವ್ಯಾಯಾಮ:
ಕೆಲವು ಟರ್ಮಿನಲುಗಳಲ್ಲಿ ವಿಶ್ರಾಂತಿ ಪಡೆಯಬಹುದು. ನಿಮ್ಮ ಲ್ಯಾಪ್ ಟಾಪ್ ಗಳಲ್ಲಿ ಸಿನಿಮಾ ನೋಡಬಹುದು. ಇದು ಅತ್ಯುತ್ತಮ ಮತ್ತು ಅಗ್ಗದ ಸಮಯ ಕಳೆಯುವ ವಿಧಾನ. ಆದರೆ ಈ ವಿಶ್ರಾಂತಿ ಸ್ಥಳಗಳು ನಿಮ್ಮ ಮುಂದಿನ ವಿಮಾನ ಹಿಡಿಯುವ ಸಮೀಪವಿರಲಿ.
ಇತರ ಆರಾಮದ ಆಯ್ಕೆಗಳು:
ಉಡುಗೊರೆಯಾಗಿ ಸಿಗುವ ಸ್ನಾನದ ವ್ಯವಸ್ಥೆಯೂ ಇದೆ. ಇವುಗಳು ಟರ್ಮಿನಲ್ 1ರಲ್ಲಿ ಸಿ18 ಮತ್ತು ಸಿ22 ಗೇಟಲ್ಲಿವೆ. ಟರ್ಮಿನಲ್ 3ಯಲ್ಲಿ ಬಿ 13, ಬಿ19 ಮತ್ತು ಎ1 ಮತ್ತು ಎ24 ಗೇಟಲ್ಲಿವೆ. ದುಬೈ ವಿಮಾನ ನಿಲ್ದಾಣದ ಜೆನ್ ಉದ್ಯಾನವನವನ್ನೂ ನೋಡಬಹುದು. ಇದು ಒಳಾಂಗಣ ಉದ್ಯಾನವನವಾಗಿದ್ದು, ಶಾಂತ ಸ್ಥಳ. ಗೇಟ್ ಬಿ7 ಮತ್ತು ಬಿ 27ರಲ್ಲಿ ಇದು ಸಿಗುತ್ತದೆ. ನಿದ್ದೆ ಮಾಡಬೇಕೆಂದರೆ ಸ್ನೂಜ್ ಕ್ಯೂಬ್ ಗಳೂ ಇಲ್ಲಿವೆ. ಬೆಡ್ ನಲ್ಲೂ ಮಲಗಬಹುದು. ಇವುಗಳು ಟರ್ಮಿನಲ್ 1ರ ಸಿ22 ಬಳಿ ಇವೆ. ಗಂಟೆಗಳ ಬಾಡಿಗೆಗೆ 10 ಸ್ನೂಜ್ ಕ್ಯೂಬ್ ಗಳಿವೆ.
8 ಗಂಟೆಗೂ ಹೆಚ್ಚು ಕಾಲ ಆರಾಮ ಅವಧಿ ಇದ್ದವರಿಗೆ:
ಸುಸ್ತಾದ ಪ್ರಯಾಣಿಕನಿಗೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಟೇಲಲ್ಲಿ ವಿರಮಿಸಬಹುದು. ಗಂಟೆಗೆ 40 ಡಾಲರ್ ತೆರಬೇಕಾದೀತು. ಇಡೀ ರಾತ್ರಿಗೆ 200 ಡಾಲರ್ ತೆರಬೇಕು. ಇಲ್ಲಿ ಆರೋಗ್ಯ ಕ್ಲಬ್, ಬ್ಯುಸಿನೆಸ್ ಸೆಂಟರ್, 24 ಗಂಟೆ ಲಾಂಡ್ರಿ ಮತ್ತು ರೂಂ ಸೇವೆಯೂ ಇದೆ. ಶುಲ್ಕ ಕೊಟ್ಟು ಸ್ವಿಮ್ಮಿಂಗ್ ಫೂಲ್, ಜಿಮ್, ಜಕುಜಿ, ಸೋನಾ ಮತ್ತು ಸ್ನಾನದ ಸೌಲಭ್ಯಗಳನ್ನು ಪಡೆಯಬಹುದು. ಈ ಸೇವೆಗಳಿಗೆ ರೂಂ ಬುಕ್ ಮಾಡುವ ಅಗತ್ಯವಿಲ್ಲ.
ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಸುವ ಆಸೆ ಇದ್ದರೆ ಸಾಕಷ್ಟು ಸಾರಿಗೆ ವ್ಯವಸ್ಥೆ ಇದೆ. ಅಧಿಕೃತ ಟ್ಯಾಕ್ಸಿಗಳು ಪ್ರತೀ ಟರ್ಮಿನಲ್ ಬಳಿಯೂ ಸಿಗುತ್ತವೆ. 24/7 ಟಾಕ್ಸಿಗಳು ಲಭ್ಯವಿವೆ. ಎಇಡಿ20 ಟ್ಯಾಕ್ಸಿ ನಗರದ ದೂರದ ಪ್ರದೇಶಗಳಾದ ದುಬೈ ಮರೀನಾಗೆ ಬೇಕಾದರೂ ಕರೆದುಕೊಂಡು ಹೋಗುತ್ತವೆ. ಟರ್ಮಿನಲ್ 1 ಮತ್ತು 3ರ ನಡುವೆ ರೈಲುಗಳು ಪ್ರತೀ 10 ನಿಮಿಷಗಳಿಗೊಮ್ಮೆ ಪ್ರಯಾಣಿಸುತ್ತವೆ. ಬಸ್ಸುಗಳು ಟರ್ಮಿನಲ್ 1,2 ಮತ್ತು 3ರಲ್ಲಿ ಸಿಗುತ್ತವೆ.
http://www.businessinsider.in/