ನನ್ನ ಒಸಡು ಕಪ್ಪಾದ್ದರಿಂದ ನಗಬಾರದು ಎಂದು ಅಜ್ಜಿ ಹೇಳಿದ್ದಾರೆ !
ನನ್ನ ಕತೆ
ಹಲ್ಲು ತೋರಿಸಿ ನಗಬಾರದು ಎಂದು ನನ್ನ ಅಜ್ಜಿ ನನಗೆ ಹೇಳಿದ್ದರು. ನನ್ನ ಒಸಡು ಕಪ್ಪಗಿದೆ. ನನ್ನ ಬಾಕಿ ಜೀವನದುದ್ದಕ್ಕೂ ನನ್ನ ಒಸಡನ್ನು ಯಾರು ಕೂಡಾ ನೋಡದೇ ಇರಲು ನಾನು ನನ್ನ ಒಂದು ಕೈಯಿಂದ ಬಾಯಿಯನ್ನು ಅಡಗಿಸಬೇಕಾಗುತ್ತದೆ. ನಾನು ತುಂಬಾ ಕುರೂಪಿಯೆಂದು ನನಗೆ ಗೊತ್ತು. ಏಕೆಂದರೆ ಕಪ್ಪು ಹುಡುಗಿಯರು ಯಾವತ್ತೂ ಸೌಂದರ್ಯವತಿಯರಾಗಲು ಸಾಧ್ಯವಿಲ್ಲ. ಎಲ್ಲರೂ ನನಗೆ ಯಾವತ್ತೂ ಇದನ್ನೇ ಹೇಳುತ್ತಿರುತ್ತಾರೆ.
ನಾನು ಅತ್ಯಂತ ಸುಂದರಿ ಹುಡುಗಿಯೆಂದು ಒಂದು ದಿನ ನನ್ನ ತಾಯಿ ನನಗೆ ಹೇಳಿದರು. ನೀವು ಸುಳ್ಳು ಹೇಳುತ್ತಿದ್ದೀರೆಂದು ನಾನು ಆಕೆಗೆ ಹೇಳಿದೆ. ‘‘ನಾನು ಸುಂದರಿಯಾಗಿದ್ದೇ ಆದಲ್ಲಿ ನೀವೇಕೆ ನನಗೆ ಯಾವತ್ತೂ ಸೌಂದರ್ಯವರ್ಧಕಗಳನ್ನು ಖರೀದಿಸಿ ಕೊಟ್ಟು ನಾನು ಗೌರವರ್ಣ ಹಾಗೂ ಸುಂದರವಾಗಿ ಕಾಣುವಂತಾಗಲು ಅವುಗಳನ್ನು ಎಚ್ಚರಿಕೆಯಿಂದ ಹಚ್ಚಲು ಹೇಳುತ್ತೀರಿ?’’ ಎಂದು ಆಕೆ ಕಚೇರಿಗೆ ಹೋಗಲು ಸಿದ್ಧರಾಗುತ್ತಿದ್ದಂತೆಯೇ ನಾನು ಕೇಳಿಯೇ ಬಿಟ್ಟೆ!
ಸುಮಯ್ಯ
Next Story