ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಕಾಮಿಡಿಯನ್ ಶ್ಯಾಮ್ ರಂಗೀಲಾ
ಪ್ರಧಾನಿ ಮೋದಿಯವರ ಧ್ವನಿ ಅನುಕರಿಸುವ ಮೂಲಕ ಖ್ಯಾತಿ
PC : X/@ShyamRangeela
ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಕರಿಸುವ ಮೂಲಕ ಖ್ಯಾತಿ ಗಳಿಸಿದ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ.
‘The Great Indian Laughter Challenge’ ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ತನ್ನ ಮಿಮಿಕ್ರಿಗಾಗಿ ಖ್ಯಾತಿಯನ್ನು ಗಳಿಸಿದ ರಾಜಸ್ಥಾನದ 29 ವರ್ಷ ವಯಸ್ಸಿನ ಶ್ಯಾಮ್ ರಂಗೀಲಾ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಧಾನಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯಲು ಈ ನಿರ್ಧಾರ ಎಂದಿರುವ ರಂಗೀಲಾ, ತನ್ನ ಸ್ಪರ್ಧೆ ಕೇವಲ ಸಾಂಕೇತಿಕವಲ್ಲ ಎಂದು ಪ್ರತಿಪಾದಿಸಿದ್ದಾರೆ. ರಂಗೀಲಾ ಅವರು 2017 ರಲ್ಲಿ ಪ್ರಧಾನಿ ಮೋದಿಯವರ ಧ್ವನಿಯನ್ನು ಅನುಕರಿಸುವ ಮೂಲಕ ಮೆಚ್ಚುಗೆ ಪಡೆದರು. ಅಂದಿನಿಂದ ರಂಗೀಲಾ ಮೋದಿಯವರ ಸಂದರ್ಶನಗಳು, ಭಾಷಣಗಳನ್ನು ಅನುಕರಿಸುವ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಪೆಟ್ರೋಲ್ ಬೆಲೆಯಂತಹ ವಿಷಯಗಳನ್ನು ತಿಳಿಸುವ ವೀಡಿಯೊಗಳು ಜನಪ್ರಿಯವಾಗಿವೆ.