ಈ ವರ್ಷ ದುಬೈ ವಿಮಾನ ನಿಲ್ದಾಣಕ್ಕೆ 100ನೇ ಕೋಟಿಯ ಪ್ರಯಾಣಿಕ
ದುಬೈ, ಆ. 27: ಯುಎಇಯ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ 100ನೇ ಕೋಟಿಯ ಪ್ರಯಾಣಿಕನನ್ನು ಸ್ವಾಗತಿಸಲು ಸಜ್ಜಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ.
ಅದರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
2017ರಲ್ಲಿ ಸುಮಾರು 9 ಕೋಟಿ ಪ್ರಯಾಣಿಕರು 1960ರ ದಶಕದಲ್ಲಿ ಸ್ಥಾಪನೆಯಾದ ವಿಮಾನ ನಿಲ್ದಾಣದ ಮೂಲಕ ಹಾದುಹೋಗಿದ್ದಾರೆ.
ಅಂಕಿಅಂಶಗಳ ಪ್ರಕಾರ, 2017ರಲ್ಲಿ ಅಮೆರಿಕದ ಜಾರ್ಜಿಯದಲ್ಲಿರುವ ಹಾರ್ಟ್ಸ್ಫೀಲ್ಡ್ ಜಾಕ್ಸನ್ ಅಟ್ಲಾಂಟ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಆ ವಿಮಾನ ನಿಲ್ದಾಣದ ಮೂಲಕ 10.4 ಕೋಟಿ ಪ್ರಯಾಣಿಕರು ಹಾದು ಹೋಗಿದ್ದಾರೆ.
Next Story