15 ಮಕ್ಕಳಿಗೆ ಲೈಂಗಿಕ ಕಿರುಕುಳ: ಬೌದ್ಧ ಬಿಕ್ಕುವಿನ ಬಂಧನ
ಬೋಧಗಯಾ, ಆ. 30: ಬೋಧ ಗಯಾದ ಪ್ರಜ್ಞಾ ಜ್ಯೋತಿ ಬೌದ್ಧರ ಶಾಲೆ ಹಾಗೂ ಧ್ಯಾನ ಕೇಂದ್ರದಲ್ಲಿ ಕಲಿಯುತ್ತಿರುವ 15 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಲ್ಲಿದ ಬೌದ್ಧ ಬಿಕ್ಕುವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೌದ್ಧ ಬಿಕ್ಕು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಕ್ಕಳು ತಮ್ಮ ಹೆತ್ತವರಿಗೆ ದೂರು ನೀಡಿದ್ದರು. ಶಾಲೆಯಲ್ಲಿರುವಾಗ ಬೌದ್ಧ ಬಿಕ್ಕು ಥಳಿಸುತ್ತಿದ್ದರು, ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಕೂಡ ಮಕ್ಕಳು ಹೆತ್ತವರಿಗೆ ಮಾಹಿತಿ ನೀಡಿದ್ದರು. ಈ ವಿಷಯದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಹಾಗೂ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಡಿಎಸ್ಪಿ ರಾಜ್ಕುಮಾರ್ ಶಾಹ್ ಹೇಳಿದ್ದಾರೆ.
ಬಿಹಾರದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸರಕಾರವನ್ನು ಕಟುವಾಗಿ ಟೀಕಿಸುತ್ತಿರುವ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದೆ.
Next Story