ಭಾರತಕ್ಕೆ ಯಾವಾಗ ಮರಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್ ಮಲ್ಯ
ಹೊಸದಿಲ್ಲಿ, ಸೆ.8: ಶುಕ್ರವಾರ ಲಂಡನ್ ನ ಓವಲ್ ಕ್ರಿಕೆಟ್ ಸ್ಟೇಡಿಯಂ ಸಮೀಪ ಉದ್ಯಮಿ ವಿಜಯ್ ಮಲ್ಯ ಕಾಣಿಸಿಕೊಂಡಿದ್ದು, ಮಾಧ್ಯಮಗಳ ಜೊತೆ ಮಾತನಾಡಿದರು. ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿದ್ದರು.
ಈ ಸಂದರ್ಭ ಪತ್ರಕರ್ತರು ಭಾರತಕ್ಕೆ ಯಾವಾಗ ಹಿಂದಿರುಗುತ್ತೀರಿ ಎಂದು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮಲ್ಯ, “ಅದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಪತ್ರಕರ್ತರ ಪ್ರಶ್ನೆಯಿಂದ ವಿಚಲಿತರಾದ ಅವರು ತಾನು ಕ್ರಿಕೆಟ್ ಸ್ಟೇಡಿಯಂ ಹೊರಗಡೆ ಯಾವುದೇ ಸಂದರ್ಶನ ನೀಡುವುದಿಲ್ಲ ಎಂದೂ ಹೇಳಿದ್ದಾರೆ. ವಿಜಯ್ ಮಲ್ಯರನ್ನು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯವು ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ.
Next Story