1 ಕೋಟಿ ರೂ. ನಕಲಿ ನೋಟು ವಶ
ಜೈಪುರ, ಸೆ. 8: ಹರ್ಮದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜಸ್ಥಾನ ಪೊಲೀಸರು ಶುಕ್ರವಾರ 1 ಕೋ. ರೂ. ನಕಲಿ ನೋಟುಗಳನ್ನು ಹೊಂದಿದ್ದ ಆರೋಪದಲ್ಲಿ ಮೂವರನ್ನು ಬಂಧಿಸಿದ್ದಾರೆ. ಎಲ್ಲ ನಕಲಿ ನೋಟುಗಳು 2,000 ಮುಖ ಬೆಲೆ ಹೊಂದಿವೆ.
ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ಬಳಿಕ ಅತಿ ದೊಡ್ಡ ನಕಲಿ ನೋಟು ಜಾಲವೊಂದು ಬೆಳಕಿಗೆ ಬರುವ ಸಾಧ್ಯತೆ ಇದೆ. ಬಂಧಿತರನ್ನು ವಿಜಯಪಾಲ್ ಬಾಜಿಯಾ, ಸುಲ್ತಾನ್ ಸಿಂಗ್ ಹಾಗೂ ಯೋಗೇಶ್ ಲಾಂಬಾ ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ಸಿಕಾರ್ ಜಿಲ್ಲೆಯ ರಿಂಗಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದ ನಿವಾಸಿಗಳು. ಅಜ್ಮೀರ್-ದಿಲ್ಲಿ ಹೆದ್ದಾರಿಯ ದೌಲತ್ಪುರ ಟೋಲ್ ಪ್ಲಾಜಾದಿಂದ ಇವರನ್ನು ಬಂಧಿಸಲಾಯಿತು.
Next Story