ಯೆನೆಪೊಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ
ಮಂಗಳೂರು, ಸೆ. 11: ಬಲ್ಮಠದ ಯೆನೆಪೊಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಸಂಘವನ್ನು ಮಂಗಳೂರು ವಿಶ್ವದ್ಯಾನಿಲಯದ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ.ಎಲ್. ಧರ್ಮ ಉದ್ಘಾಟಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಜೊಬಿ ಇ.ಸಿ., ಉಪಾಧ್ಯಕ್ಷ ಮುನೀಜ ಮತ್ತು ಜೊತೆ ಕಾರ್ಯದರ್ಶಿಯಾದ ಇಜ್ರಾನ್ ಉಪಸ್ಥಿತರಿದ್ದರು. ವಾಣಿಜ್ಯ ಭಾಗದ ಉಪನ್ಯಾಸಕಿ ರುಬೀನ ಶಿಫಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಫರ್ಹಾನ್ ಅಲಿ ಸ್ವಾಗತಿಸಿದರು. ಕಾರ್ಯದರ್ಶಿ ಅರ್ಶಿಯ ಮೊಮಿನ್ ವಂದಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಉನೈಝಾ ಕಾರ್ಯಕ್ರಮ ನಿರೂಪಿಸಿದರು.
Next Story