ಕೊನೆಗೂ ಪತ್ತೆಯಾದ ವಿಜಯ್ ಮಲ್ಯ!
ಬರ್ಮಿಂಗ್ ಹ್ಯಾಂ, ಜೂ,4: ಭಾರತದ ಬ್ಯಾಂಕ್ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಾ ಕೊನೆಗೂ ಪತ್ತೆಯಾಗಿದ್ದಾರೆ. ಅಂದಹಾಗೆ ಮಲ್ಯ ಕಾಣಲು ಸಿಕ್ಕಿದ್ದು ಭಾರತದಲ್ಲಲ್ಲ. ಬದಲಾಗಿ, ಬರ್ಮಿಂಗ್ ಹ್ಯಾಂನ ಎಡ್ಜ್ ಬ್ಯಾಸ್ಟನ್ ಕ್ರಿಕೆಟ್ ಮೈದಾನದ ಸ್ಟೇಡಿಯಂನಲ್ಲಿ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದು, ಪಂದ್ಯಾವಳಿ ವೀಕ್ಷಿಸಲು ಮಲ್ಯ ಹಾಜರಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾರತದ ಬ್ಯಾಂಕ್ ಗಳಿಗೆ ಸುಮಾರು 6,963 ಕೋಟಿ (ಬಡ್ಡಿ ಸಹಿತ 9,000) ಸಾಲ ಬಾಕಿಯಿರಿಸಿರುವ ಮಲ್ಯ ಬ್ರಿಟನ್ ಗೆ ಪರಾರಿಯಾಗಿದ್ದರು.
Next Story