ಮತ್ತೆ ಹೆಲಿಕಾಪ್ಟರ್ ಅಪಘಾತ: ಫಡ್ನವೀಸ್ ಪಾರು
ರಾಯ್ಗಡ, ಜು.7: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಸಂಭಾವ್ಯ ಹೆಲಿಕಾಪ್ಟರ್ ಅಪಘಾತದಿಂದ ಪಾರಾಗಿದ್ದಾರೆ. ಹೆಲಿಕಾಪ್ಟರ್ ಹತ್ತುವ ಯತ್ನದಲ್ಲಿದ್ದಾಗ ಅದು ಏಕಾಏಕಿ ಮೇಲೇರಿದ್ದು ಅದೃಷ್ಟವಶಾತ್ ಮುಖ್ಯಮಂತ್ರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಜೆಎಸ್ಡಬ್ಲೂ ಸ್ಟೀಲ್ ಕಂಪನಿಯ ಹೆಲಿಪ್ಯಾಡ್ಗೆ ಮಧ್ಯಾಹ್ನ 1:50ರ ವೇಳೆ ಆಗಮಿಸಿದ್ದ ಮುಖ್ಯಮಂತ್ರಿ, ಅಲ್ಲಿದ್ದ ಹೆಲಿಕಾಪ್ಟರ್ ಏರಲು ಮುಂದಾದರು. ಅವರು ಬಾಗಿಲ ಬಳಿ ಬರುವಷ್ಟರಲ್ಲೇ ಹೆಲಿಕಾಪ್ಟರ್ ಏಕಾಏಕಿ ಮೇಲೇರಿದ್ದು ನೆಲದಿಂದ ಸುಮಾರು 3 ಅಡಿ ಎತ್ತರದಲ್ಲಿ ಗಾಳಿಯಲ್ಲಿ ಸುತ್ತು ಹೊಡೆಯಿತು. ಆಗ ಅದರ ತಿರುಗುವ ರೆಕ್ಕೆಗಳು ಮುಖ್ಯಮಂತ್ರಿಯ ತಲೆಯ ಸನಿಹ ಬಂದವು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಗೆ ಯಾವುದೇ ಅಪಾಯವಾಗದಂತೆ ಅವರನ್ನು ಹಿಂದಕ್ಕೆ ಎಳೆದರು ಎಂದು ರಾಯ್ಗಡದ ಪ್ರಭಾರ ಜಿಲ್ಲಾಧಿಕಾರಿ ಪಿ.ಡಿ.ಮಲಿಕ್ನರ್ ತಿಳಿಸಿದ್ದಾರೆ.
ಹೆಲಿಕಾಪ್ಟರ್ನ ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ ಮುಖ್ಯಮಂತ್ರಿ ಅದೇ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದರು ಎಂದು ಅವರು ತಿಳಿಸಿದ್ದಾರೆ.