ಕೊಡಗು ವಿಶೇಷ

29th Aug, 2018
ಮಡಿಕೇರಿ, ಆ.29: ಮಹಾ ಮಳೆ, ಜಲಪ್ರಳಯದಿಂದ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಮ್ಮ ಜಿಲ್ಲೆಯ ಜನತೆಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ದೆಹಲಿಯಲ್ಲಿ ಕೂತು ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಿಂತ ಒಂದು ದಿನ ಜಿಲ್ಲೆಗೆ...
29th Aug, 2018
ಮಡಿಕೇರಿ, ಆ.28 : ಕಾವೇರಿ ನದಿಯ ತವರೂರು ಕೊಡಗು ಇಂದು ಜಲಸ್ಫೋಟದಿಂದ ನಲುಗಿ ಹೋಗಿದೆ. ನದಿ ನೀರಿನಿಂದ ಗ್ರಾಮಸ್ಥರ ಬದುಕು ಅಷ್ಟೊಂದು ನರಕವಾಗದಿದ್ದರೂ ಕಾವೇರಿಗೆ ಅಲಂಕಾರದಂತ್ತಿದ್ದ ಬೆಟ್ಟಗುಡ್ಡಗಳಿಂದ ಇಂದು ಮರೆಯಲಾಗದ ಹಾನಿಯಾಗಿದೆ, ನೋವಾಗಿದೆ, ಸಾವಾಗಿದೆ. ನಮ್ಮೂರು, ನಮ್ಮವರು ಎಂದು ಎಲ್ಲರೊಂದಿಗೆ ನಮ್ಮವರೆಲ್ಲರೂ ಭಾಗಿಯಾಗಿ...
29th Aug, 2018
# ಕೊಚ್ಚಿ ಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.29: ಮಹಾ ಜಲಪ್ರಳಯ ಹಾಗೂ ಭೂಕುಸಿತಕ್ಕೆ ತುತ್ತಾದ ಕೊಡಗು ಜಿಲ್ಲೆಯಲ್ಲಿ ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿರುವ ನೂರಾರು ಸಂತ್ರಸ್ತರಿಗೆ ಇಲ್ಲಿನ ಮದ್ರಸಗಳು ಆಶ್ರಯ ಕೇಂದ್ರಗಳಾಗಿವೆ. ಅದು ಯಾವುದೇ ಭೇದಭಾವ ಇಲ್ಲದೆ ಸರ್ವ...
28th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.28: ಭಾರೀ ಭೂಕುಸಿತ, ಪ್ರವಾಹದಿಂದ ಉಂಟಾದ ದುರಂತದಿಂದ ಕೊಡಗು ಜಿಲ್ಲೆಯ ವಿವಿಧ ಭಾಗಗಳ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅಸ್ಸಾಮಿನ ಹಲವು ಮಂದಿ ಅತಂತ್ರ ಸ್ಥಿತಿಯಲ್ಲಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ 'ಹ್ಯುಮಾನಿಟಿ...
28th Aug, 2018
ಮಡಿಕೇರಿ, ಆ.28: ಬೆಟ್ಟಗಳು ಕುಸಿದು ಭಾರೀ ಹಾನಿಗೀಡಾಗಿದ್ದ ಜೋಡುಪಾಲಕ್ಕೆ ರಕ್ಷಣಾ ಕೆಲಸಕ್ಕೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ಹೋಗಲು ಸನ್ನದ್ಧವಾದಾಗ “ಅಲ್ಲಿಗೆ ಹೋಗಬೇಡಿ. ಹೋದರೆ ನಿಮ್ಮ ಮೃತದೇಹವೂ ಸಿಗಲ್ಲ” ಎಂದು ಅಲ್ಲಿದ್ದ ತುಂಬಾ ಮಂದಿ ಹೇಳಿದರು. ಆದರೆ ನಾವು ಅಲ್ಲಿಗೆ ಹೋಗಿ ಸಂಕಷ್ಟಕ್ಕೆ...
28th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.28: “ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭಗೊಂಡ ಆರಂಭದಲ್ಲಿ ಎಲ್ಲ ವರ್ಷದಂತೆ ಈ ವರ್ಷ ಕೂಡಾ 10 ಮಂದಿಯ ತಂಡವೊಂದು ಮಡಿಕೇರಿ ನಗರದ ವಿವಿಧ ಭಾಗಗಳಲ್ಲಿ ಕುಸಿಯುವ ಭೀತಿ ಎದುರಿಸುತ್ತಿದ್ದ ಬರೆಗಳಿಗೆ ಟರ್ಪಾಲ್ ಹಾಕುವ ಸಹಿತ...
28th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.28: “ಇತ್ತೀಚೆಗೆ ಸುರಿದ ಭಾರೀ ಮಳೆಯ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ನೂರಾರು ಕುಟುಂಬಗಳು ಮನೆ ಕಳೆದುಕೊಂಡು ನಿರ್ಗತಿಕವಾಗಿವೆ. ಅವರಿಗೆಲ್ಲರಿಗೂ ಸ್ಪಂದಿಸುವುದು ಮಾನವರಾದ ನಮ್ಮೆಲ್ಲರ ಬಾಧ್ಯತೆಯೂ...
28th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ “ಸ್ಥಳೀಯ ಶಾಸಕ, ಸಂಸದ, ಜನಪ್ರತಿನಿಧಿಗಳ ಸುಳಿವೇ ಇಲ್ಲ” ಮಡಿಕೇರಿ, ಆ.28: ಈ ಹಿಂದೆಂದೂ ಕಂಡುಕೇಳದ ಭೀಕರ ಪ್ರಕೃತಿ ವಿಕೋಪಕ್ಕೆ ಕೊಡಗು ಜಿಲ್ಲೆ ತತ್ತರಿಸಿದೆ. ಸಾವಿರಾರು ಮನೆಗಳು, ಕುಟುಂಬಗಳು ನೆಲೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಈ ಎಲ್ಲವನ್ನೂ ಕಣ್ಣಾರೆ ಕಂಡರೂ...
28th Aug, 2018
ಮಡಿಕೇರಿ, ಆ.28: ಕೊಡಗು ಜಿಲ್ಲೆಯನ್ನೇ ತಲ್ಲಣಗೊಳಿಸಿದ ಪ್ರಕೃತಿ ವಿಕೋಪದಿಂದಾಗಿ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕು ಕೈ ಚಾಚುವ ದುರ್ಗತಿ ಬಂದೊದಗಿದೆ. ಜಿಲ್ಲೆಯ ಸುಮಾರು 32 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಸ್ಥರ ಬದುಕು ಕುರುಡಾಗಿದೆ. ಮಹಾಮಳೆಯ ದಾಳಿಗೆ ಸಿಲುಕಿದ...
28th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ►40 ದಿನದ ಮಗು, ಗರ್ಭಿಣಿ, ಮಕ್ಕಳು, ವೃದ್ಧರಿದ್ದ ತಂಡ ►ಸಹಾಯದ ಹಸ್ತ ನೀಡಿದ ನಾಲ್ವರು ಯುವಕರು “ಹೆಲಿಕಾಪ್ಟರ್ ಶಬ್ಧವೆಂದು ಸಂತಸಗೊಂಡಿದ್ದೆವು, ಆದರೆ ಗುಡ್ಡ ಕುಸಿದ ಸದ್ದು ಅದಾಗಿತ್ತು” ಮಡಿಕೇರಿ, ಆ.28: “ನಮ್ಮ ಮನೆಗೂ ಮಡಿಕೇರಿ-ಮಂಗಳೂರು ಮುಖ್ಯ ರಸ್ತೆಗೂ ಕೇವಲ ಹತ್ತು...
28th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.28: ಚುನಾವಣಾ ಸಮಯದಲ್ಲಿ ಬೆಟ್ಟಗುಡ್ಡ ಹತ್ತಿ ನಮ್ಮ ಬಳಿಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ಈಗ ನಮ್ಮ ನೆನಪಿಲ್ಲ. ಪ್ರಕೃತಿ ವಿಕೋಪಕ್ಕೆ ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ನಮ್ಮನ್ನು ಯಾವುದೇ ಜನಪ್ರತಿನಿಧಿಗಳಾಗಲಿ, ಉನ್ನತ ಅಧಿಕಾರಿಗಳಾಗಲಿ ಭೇಟಿ...
27th Aug, 2018
ಮಡಿಕೇರಿ, ಆ.27: ಅತಿಯಾದ ಮಳೆ, ಬೆಟ್ಟ ಕುಸಿತ ಹಾಗೂ ಜಲ ಪ್ರವಾಹದ ಸಂದರ್ಭ ಮಕ್ಕಂದೂರು ಸಮೀಪದ ತಂತಿಪಾಲ ಗ್ರಾಮದ 11 ಮಂದಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬೆಟ್ಟ ಹತ್ತಿ ಇಳಿದು ಬರುತ್ತಿದ್ದರು. ಎಂದಿನಂತೆ ಓಡಾಡುತ್ತಿದ್ದ ದಾರಿಯಲ್ಲಿ ಮರಗಳು ಅಡ್ಡಬಿದ್ದು, ದಾರಿ ಕಾಣದೆ...
27th Aug, 2018
ಮಡಿಕೇರಿ, ಆ.27: ಕಳೆದ ವಾರ ಮಹಾಮಳೆ ಸೃಷ್ಟಿಸಿದ ಕೆಸರಿನಾರ್ಭಟಕ್ಕೆ ಮಡಿಕೇರಿಯಂಚಿನ ಕಾಲೂರು ಗ್ರಾಮ ಅಕ್ಷರಶಃ ಸ್ಮಶಾನದಂತಾಗಿದ್ದು, ಮನೆ ಮಠಗಳು, ಕಾಫಿ ತೋಟಗಳು ಕಣ್ಮರೆಯಾಗಿವೆ. ದಟ್ಟ ಅರಣ್ಯದೊಂದಿಗೆ ಏಲಕ್ಕಿ, ಕಾಫಿ ಕೃಷಿಯನ್ನು ನಡೆಸುತ್ತಲೆ, ಭತ್ತದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ತೊರೆಯದೆ ನೂರಾರು ವರ್ಷಗಳಿಂದ ಕಾಲೂರು...
27th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ►ಆಟೋ ಸಹಿತ ಟ್ಯಾಕ್ಸಿ ಚಾಲಕರು ಕಂಗಾಲು ►ಕೂಲಿಕಾರ್ಮಿಕರ ಬದುಕು ಅತಂತ್ರ ಮಂಗಳೂರು, ಆ.27: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕೊಡಗು ಜಿಲ್ಲೆಗೆ ಪ್ರವಾಸಿಗರು ಬಾರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದರಿಂದ ಪ್ರವಾಸಿಗರನ್ನೇ ಅವಲಂಬಿಸಿರುವ ಕೊಡಗಿನ ಪ್ರಮುಖ ಉದ್ಯಮವಾದ...
27th Aug, 2018
ಮಡಿಕೇರಿ, ಆ.27: ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿಗಳು ಸೋಮವಾರ ಪುನರಾಂಭಗೊಂಡಿದೆ. ವಿದ್ಯಾರ್ಥಿಗಳ ಸುರಕ್ಷಾ ದೃಷ್ಟಿಯಿಂದ ನಗರದ ಶಾಲಾ ಕಾಲೇಜುಗಳಿಗೆ ಆ.25ರವರೆಗೆ ರಜೆ ನೀಡಲಾಗಿತ್ತು. ಮಳೆ ಕಡಿಮೆಯಾಗಿರುವುದರಿಂದ ಮಕ್ಕಳ...
26th Aug, 2018
ಕೊಡಗು: ಆರೋಗ್ಯ ಇಲಾಖೆಗೆ ಸವಾಲಾದ ಸಾಂಕ್ರಾಮಿಕ ರೋಗಗಳು
26th Aug, 2018
ಕೊಡಗು ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಪ್ರದೇಶವೀಗ ಪ್ರವಾಸಿ ತಾಣ!
26th Aug, 2018
“ಕೊಡಗು ಉಳಿಯಬೇಕಾದರೆ ಪರ್ವತಗಳನ್ನು ಸಂರಕ್ಷಿಸಬೇಕು”
26th Aug, 2018
ನಿರಾಶ್ರಿತ ಶಿಬಿರದಲ್ಲೇ ನಡೆಯಿತು ಯುವತಿಯ ಅದ್ದೂರಿ ಮದುವೆ: ಶುಭ ಹಾರೈಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ
26th Aug, 2018
ನಿರಾಶ್ರಿತ ಶಿಬಿರದ ನೆಲಕ್ಕೆ ಹಾಸಲು ನಮಾಝ್ ಕಾರ್ಪೆಟ್ ಗಳನ್ನು ನೀಡಿದ ಮಸೀದಿ
26th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.25: ಕೊಡಗು ಜಿಲ್ಲೆ ಈಗ ನಿರಾಶ್ರಿತರ ಶಿಬಿರಗಳ ನಾಡಾಗಿದೆ. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ವಿವಿಧೆಡೆ ಉಂಟಾದ ಭೂಕುಸಿತ, ನೆರೆಗೆ ಮನೆ, ಜಮೀನನ್ನು ಕಳೆದುಕೊಂಡಿರುವ ನೂರಾರು ಕುಟುಂಬಗಳು ಜಿಲ್ಲೆಯಲ್ಲಿ ತೆರೆದಿರುವ ಐವತ್ತಕ್ಕೂ...
26th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.26: ಕಳೆದ ವಾರ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯ ವಿವಿಧೆಡೆ ಉಂಟಾದ ಭೂಕುಸಿತದ ಪ್ರದೇಶಗಳೀಗ ಪ್ರವಾಸಿಗರ ತಾಣವಾಗಿ ಮಾರ್ಪಟ್ಟಿದೆ. ಪರ್ವತಗಳು ಕುಸಿದು ಹಲವು ಮನೆಗಳು, ನೂರಾರು ಎಕರೆ ತೋಟಗಳು ಭೂಗರ್ಭ ಸೇರಿರುವ ಭೀಕರ...
26th Aug, 2018
►ಹಿರಿಯರು, ಸಂಘಸಂಸ್ಥೆಗಳ ಮುಖಂಡರಿಂದ ಎಚ್ಚರಿಕೆ #ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.26: ಕೊಡಗು ಪರ್ವತ ಶ್ರೇಣಿಗಳಿಂದ ಕೂಡಿರುವ ಜಿಲ್ಲೆ. ಕೊಡಗು ಜಿಲ್ಲೆ ಉಳಿಯಬೇಕಾದರೆ ಇಲ್ಲಿನ ಬೆಟ್ಟಗುಡ್ಡಗಳು ಉಳಿಯಬೇಕು. ಬೆಟ್ಟ-ಗುಡ್ಡಗಳಿಲ್ಲದ ಕೊಡಗನ್ನು ಊಹಿಸಲು ಸಾಧ್ಯವೇ ಇಲ್ಲ. ಜಿಲ್ಲೆಯ ಇಂದಿನ ಸ್ಥಿತಿಗೆ ಪ್ರಾಕೃತಿಕ ವಿಕೋಪಕ್ಕಿಂತಲೂ...
26th Aug, 2018
ಮಡಿಕೇರಿ, ಆ. 26: ಭಾರೀ ಮಳೆ ಹಾಗೂ ಜಲ ಪ್ರಳಯದಲ್ಲಿ ತತ್ತರಿಸಿರುವ ಮಡಿಕೇರಿಯಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡಿರುವ ಯುವತಿಯೊಬ್ಬಳ ಮದುವೆ ಜಿಲ್ಲಾಡಳಿತ, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರಾಶ್ರಿತ ಶಿಬಿರದಲ್ಲಿ ರವಿವಾರ ಅದ್ದೂರಿಯಾಗಿ ನೆರವೇರಿತು. ಮಡಿಕೇರಿ ತಾಲೂಕಿನ ಮಕ್ಕಂದೂರು ನಿವಾಸಿ ಮಂಜುಳಾ ಮತ್ತು...
25th Aug, 2018
ಮಡಿಕೇರಿ, ಆ.25: ಕೊಡಗು ಜಿಲ್ಲೆಯ ವಿವಿಧೆಡೆ ಉಂಟಾದ ಭಾರೀ ಭೂಕುಸಿತದಿಂದ ಹಲವು ಸಾವು-ನೋವುಗಳು ಸಂಭವಿಸಿವೆ. ಮನೆಮಠಗಳನ್ನು ಕಳೆದುಕೊಂಡು ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಅವರು ಜಿಲ್ಲೆಯ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ತೆರೆದಿರುವ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ನಿರಾಶ್ರಿತರಿಗೆ ಹಲವು ಸಂಘ ಸಂಸ್ಥೆಗಳು...
25th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.24: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜೋಡುಪಾಲ, ಎರಡನೇ ಮೊಣ್ಣಂಗೇರಿ, ಮದೆ, ಕಟ್ಟೆಮಾಡು, ಕಾಯಮೊಗರು ಸಹಿತ ಸುತ್ತಮುತ್ತಲಿನ ಗ್ರಾಮಗಳ ನೂರಾರು ನಿರಾಶ್ರಿತರು...
25th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ. 24: “ಪ್ರವಾಹದಿಂದ ನಮ್ಮನ್ನು ರಕ್ಷಿಸಲು ಹೆಲಿಕಾಪ್ಟರ್ ಬರುತ್ತದೆ ಎಂದು ಕಾದೆವು. ಆದರೆ ಹೆಲಿಕಾಪ್ಟರ್ ಬಂದೇ ಇಲ್ಲ. ಬಳಿಕ ಕೆಲವರು ನದಿಗೆ ಹಗ್ಗ ಕಟ್ಟಿ ನನ್ನನ್ನು ಹೆಗಲಲ್ಲಿ ಹೊತ್ತುಕೊಂಡು ಬಂದು ರಕ್ಷಿಸಿದರು”… ಮಡಿಕೇರಿ ತಾಲೂಕಿನ ಜೋಡುಪಾಲದಲ್ಲಿ...
25th Aug, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ.24: “ಭಾರೀ ಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆಗೆ ನಮ್ಮ ಪರಿಸರದಲ್ಲಿದ್ದ ಬೃಹತ್ ಮರಗಳು ಧರೆಗುರುತ್ತಿದ್ದವು. ನೋಡನೋಡುತ್ತಿದ್ದಂತೆ ಬೆಟ್ಟ ಗುಡ್ಡಗಳ ಮೇಲಿನಿಂದ ಪ್ರವಾಹದಂತೆ ನೀರು ಹರಿದು ಬರುತ್ತಿತ್ತು. ನೀರಿನ ರಭಸಕ್ಕೆ ಗುಡ್ಡ ಕುಸಿತ ಉಂಟಾಗಿ ಬೃಹತ್...
25th Aug, 2018
ಮಡಿಕೇರಿ, ಆ.25: ಇತ್ತೀಚೆಗೆ ಸುರಿವ ಮಹಾಮಳೆಗೆ ಪ್ರವಾಹ, ಭೂಕುಸಿತದಿಂದ ನಲುಗಿ ಹೋಗಿರುವ ತಾಲೂಕಿನ ಜೋಡುಪಾಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸುಳ್ಯ-ಮಡಿಕೇರಿ ರಸ್ತೆ ಬದಿಯಿರುವ ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿದೆ. ಆಹಾರ ಇಲ್ಲದೆ...
Back to Top