ಆಣೆ ನಾಣ್ಯಗಳು ರೂಪಾಯಿಗೆ ಬದಲಾಗಿ 60 ವರ್ಷ
ಹಿಂದಿನ ಕಾಲದ ಚರಿತ್ರೆಯನ್ನು ದಾಖಲಿಸಿ ಇಂದಿನ ಪೀಳಿಗೆಗೆ ತಲುಪಿಸುವುದು ಅತ್ಯಗತ್ಯವಾಗಿದೆ. ಇಂದು ಇತಿಹಾಸದ ಕುರುಹುಗಳು ನಾಶವಾಗುತ್ತಿವೆ. ಇದನ್ನು ಸಂರಕ್ಷಿಸುವ, ಶೋಧ ನಡೆಸುವ ಪ್ರಕ್ರಿಯೆ ನಡೆಯುತ್ತಿಲ್ಲ. ಪ್ರಾಚ್ಯ ವಸ್ತು ಇಲಾಖೆ ಇಂತಹ ಜವಾಬ್ದಾರಿಯುತ ಕೆಲಸ ನಿರ್ವಹಿಸಬೇಕಿದೆ. ಹೊಸದುರ್ಗ ಹಳೆ ತಾಲೂಕು ಕಚೇರಿಯಲ್ಲಿ ಉಳಿದಿರುವ ಸರಕಾರದ ಆದೇಶಗಳು ಇನ್ನೂ ಹಲವು ಕಡೆ ಲಭಿಸಲು ಸಾಧ್ಯವಿದೆ. ಇತಿಹಾಸದ ದಿನಗಳನ್ನು ಮೆಲುಕು ಹಾಕುವುದರೊಂದಿಗೆ ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದೆ.
ಹಣದ ವ್ಯವಹಾರ ಆಣೆಯಿಂದ ರೂ.ಗೆ ಬದಲಾಗಿ 60 ವರ್ಷಗಳು ಸಂದಿವೆ. ಆರು ದಶಕಗಳ ಹಿಂದೆ ಭಾರತದಲ್ಲಿ ಒಂದಾಣೆ, ಕಾಲಾಣೆ ನಾಣ್ಯಗಳಿದ್ದವು ಎಂಬುದನ್ನು ನೆನಪಿಸುವ ಇಲ್ಲಿನ ಹೊಸದುರ್ಗ ಹಳೆ ತಾಲೂಕು ಕಚೇರಿಯಲ್ಲಿನ ಲಕದಲ್ಲಿ ಇಂದಿಗೂ ಗೋಚರಿಸುತ್ತಿದೆ. ತಗಡು ಶೀಟ್ನಲ್ಲಿ ಸೂಚನಾ ಫಲಕ ನೇತುಹಾಕಲಾಗಿದ್ದು, ಹಲವು ದಶಕ ಕಳೆದರೂ ಲಕ ಯಾವುದೇ ಹಾನಿಯಾಗದೆ ನೆನಪಿನ ಸಾಕ್ಷಿಯಾಗಿ ನೆಲೆ ನಿಂತಿದೆ.
1957ರ ಎಪ್ರಿಲ್ ಒಂದರಂದು ಅಂದಿನ ಕೇಂದ್ರ ಸರಕಾರ ಆಣೆಯನ್ನು ರೂ.ಗೆ ಬದಲಾಯಿಸಿತ್ತು. ಸರಕಾರದ ತೀರ್ಮಾನವನ್ನು ನೆನಪಿಸುವ ಸೂಚನಾ ಫಲಕ ಹಳೆ ತಾಲೂಕಿನ ಕಚೇರಿಯಲ್ಲಿ ಇಂದಿಗೂ ಉಳಿದುಕೊಂಡಿದೆ.
ಆ ಸಮಯದಲ್ಲಿ, ಸಾಮಾಜಿಕ ತಾಣಗಳಿರಲಿಲ್ಲ ಒಂದೆರಡು ಮಾಧ್ಯಮಗಳು ಮಾತ್ರ ಇದ್ದವು. ಶೇಕಡಾ ಹತ್ತರಷ್ಟು ಮಂದಿಗೆ ಮಾತ್ರ ಈ ಮಾಧ್ಯಮಗಳ ಲಾಭ ಸಿಗುತ್ತಿತ್ತು. ಇನ್ನು ಸಾಮಾನ್ಯರಿಗೆ ಸರಕಾರಿ ಆದೇಶಗಳನ್ನು ತಿಳಿಯಲು ಸರಕಾರಿ ಕಚೇರಿ ಫಲಕಗಳು ಮಾತ್ರ ಆಶ್ರಯವಾಗಿತ್ತು. ಇದರಿಂದ ಸರಕಾರಿ ಕಚೇರಿಗಳಲ್ಲಿ ಸರಕಾರಿ ಆದೇಶಗಳನ್ನು ಲಗತ್ತಿಸಲಾಗುತ್ತಿತ್ತು. ಭಾರತದ ಅಂದಿನ ಆರ್ಥಿಕ ಪರಿಸ್ಥಿತಿಯನ್ನು ಈ ಸೂಚನಾ ಫಲಕ ನೆನಪಿಸುತ್ತಿದೆ. ಅಂದು ಒಂದಾಣೆ, ಕಾಲಾಣೆಗೆ ಅಷ್ಟೇ ಬೆಲೆ ಇತ್ತು. ಅಂದಿನ ಆರ್ಥಿಕ ಸ್ಥಿತಿಯಲ್ಲಿ ಕಡಿಮೆ ವೆಚ್ಚದಲ್ಲಿ ಶ್ರೀಮಂತ ಜೀವನ ಸಾಗಿಸ ಬಹುದಾಗಿತ್ತು. ಆಣೆ ರೂ.ಯಾಗಿ ಬದಲಾಗಿದೆ. 100 ರೂ.ನಿಂದ 500 ರೂ. ಬಳಿಕ ಒಂದು ಸಾವಿರ ಇದೀಗ ಎರಡು ಸಾವಿರ ರೂ. ನೋಟುಗಳು ನಮ್ಮನ್ನು ಸ್ವಾಗತಿಸುತ್ತಿವೆ. ಅಂದಿನ ಹಣ ಹಾಗೂ ಇಂದಿನ ಸ್ಥಿತಿಯನ್ನು ಕಂಡಾಗ ಜನತೆಯನ್ನು ಹುಬ್ಬೇರಿಸುವಂತೆ ಮಾಡುತ್ತಿದೆ.
ಆಣೆ ಬಳಿಕ ಹಲವು ರೀತಿಯ ನಾಣ್ಯಗಳು ಬಂದಿದ್ದವು. ಅವುಕೂಡಾ ಅಪ್ರತ್ಯಕ್ಷಗೊಳ್ಳುತ್ತಿವೆ. ವರ್ಷದಿಂದ ವರ್ಷಕ್ಕೆ ಹೊಸ ನಾಣ್ಯ, ಹೊಸ ನೋಟುಗಳು ಚಲಾವಣೆಗೆ ಬರುತ್ತಿವೆ. ಇದರ ಜೊತೆಗೆ ನಗದುರಹಿತ ವ್ಯವಹಾರಕ್ಕೆ ಹೆಜ್ಜೆ ಇರಿಸಲಾಗುತ್ತಿದ್ದು, ಪರಿಣಾಮ ಮುಂದಿನ ಒಂದೆರಡು ದಶಕದ ಅವಯಲ್ಲಿ ನೋಟು, ನಾಣ್ಯಗಳು ಕೇವಲ ನೆನಪಾಗಿ ಇತಿಹಾಸ ಪುಟ ಸೇರಲಿದೆಯೇ ಎಂಬ ಸಂಶಯ ನಮ್ಮ ಮುಂದೆ ಕಾಡುತ್ತಿದೆ.
ಫಲಕದಲ್ಲಿ ಆಣೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಒಂದು ಪೈಸೆ, ಅರ್ಧ ಆಣೆ, 2 ಆಣೆ, 4 ಆಣೆ, ಅರ್ಧ ರೂ., ಒಂದು ರೂ., 2 ನಯಾ ಪೈಸೆ, 3 ನಯಾ ಪೈಸೆ, 6 ನಯಾ ಪೈಸೆ, 12 ನಯಾ ಪೈಸೆ, 25 ನಯಾ ಪೈಸೆ, 50 ನಯಾ ಪೈಸೆ, 100 ನಯಾ ಪೈಸೆ ಮೌಲ್ಯದ ನಾಣ್ಯಗಳ ಚಿತ್ರಣ ಈ ಫಲಕದಲ್ಲಿದೆ.
ಹಳೆ ನಾಣ್ಯಗಳ ವಿನಿಮಯಕ್ಕೆ ಮೂರು ವರ್ಷದ ಕಾಲಾವಯನ್ನು ನೀಡಿರುವುದು ಕೂಡಾ ಈ ಫಲಕದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮೂರು ವರ್ಷಗಳ ಅವಯಲ್ಲಿ ಹೊಸ ಹಾಗೂ ಹಳೆ ನಾಣ್ಯಗಳು ಚಲಾವಣೆಯಲ್ಲಿರಲಿದೆ ಎಂಬ ಸರಕಾರದ ಪ್ರಕಟನೆ ಈ ಸೂಚನಾ ಫಲಕದಲ್ಲಿದೆ.