ಈ ದಿನ

03rd Nov, 2018
1921: ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನಿಂದ ‘ಕಂದು ಅಂಗಿ ದಳ’ ಸೈನ್ಯ ರಚನೆ. 1948: ಅಮೆರಿಕನ್ ಸಂಜಾತ ಬ್ರಿಟಿಷ್ ಲೇಖಕ, ಕವಿ, ವಿಮರ್ಶಕ ಟಿ.ಎಸ್.ಏಲಿಯಟ್‌ಗೆ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ಸಂದಿತು. 1956: ಸೋವಿಯತ್ ಒಕ್ಕೂಟದ ಆಡಳಿತದ ವಿರುದ್ಧ ಪ್ರಧಾನಿ ಇಮ್ರೆ ನ್ಯಾಗಿ ನೇತೃತ್ವದಲ್ಲಿ ಹಂಗೇರಿಯನ್ನರು...
27th Oct, 2018
1776: ಖ್ಯಾತ ಲೇಖಕ, ಕವಿ ಜೋನಾಥನ್ ಸ್ವಿಫ್ಟ್ ಅವರ ಪ್ರಮುಖ ಕೃತಿ ‘ಗಲಿವರ್ಸ್‌ ಟ್ರಾವೆಲ್ಸ್’ ಲಂಡನ್‌ನ ಬೆಂಜಮಿನ್ ಮೊಟೆ ಪ್ರಕಾಶನದಿಂದ ಈ ದಿನ ಪ್ರಕಟವಾಯಿತು. 1922: ಬೆನಿಟೊ ಮುಸಲೋನಿ ಇಟಲಿಯನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. 1943: ಅಮೆರಿಕದ ವಿಮಾನವು ಜರ್ಮನ್ ಸಬ್‌ಮರೀನ್ ಯು-220...
20th Oct, 2018
1943: ಮಹಾನ್ ಸ್ವಾತಂತ್ರ ಹೋರಾಟಗಾರ, ಕ್ರಾಂತಿಕಾರಿ ನೇತಾಜಿ ಸುಭಾಶ್ಚಂದ್ರ ಬೋಸ್‌ರು ಈ ದಿನ ಸ್ವತಂತ್ರ ಭಾರತದ ತಾತ್ಕಾಲಿಕ ಸರಕಾರ ರಚನೆಯ ಘೋಷಣೆಯನ್ನು ಹೊರಡಿಸಿದರು. ಭಾರತದಲ್ಲಿ ಪ್ರಬಲವಾಗಿ ಬೇರುಬಿಟ್ಟಿದ್ದ ಇಂಗ್ಲಿಷರನ್ನು ಹೊಡೆದೋಡಿಸಲು ಸಶಸ್ತ್ರ ಹೋರಾಟವೇ ನಡೆಯಬೇಕೆಂದು ಅವರು ಬಲವಾಗಿ ನಂಬಿದ್ದರು. ಈ ನಿಟ್ಟಿನಲ್ಲಿ...
06th Oct, 2018
1806: ಸಂಶೋಧಕ ರಾಲ್ಫ್ ವೆಡ್‌ಗೂಡ್ ಕಾರ್ಬನ್ ಪೇಪರ್ ಸಂಶೋಧನೆಗೆ ಹಕ್ಕುಸ್ವಾಮ್ಯ ಪಡೆದರು. 1950: ಮಹಾ ಮಾನವತಾವಾದಿ ಮದರ್ ತೆರೇಸಾ ಈ ದಿನ ಭಾರತದಲ್ಲಿ ‘ಮಿಶನರೀಸ್ ಆಫ್ ಚಾರಿಟಿ’ ಸ್ಥಾಪಿಸಲು ವ್ಯಾಟಿಕನ್‌ನಿಂದ ಅನುಮತಿ ಪಡೆದರು. ಕೋಲ್ಕತಾದಲ್ಲಿ ಕೇವಲ 13 ಜನ ಸದಸ್ಯರೊಂದಿಗೆ ಆರಂಭವಾದ ಈ...
29th Sep, 2018
1898: ನ್ಯೂಯಾರ್ಕ್ ಪಟ್ಟಣ ಈ ದಿನ ಸ್ಥಾಪನೆಯಾ ಯಿತು. 1939: ಪೋಲೆಂಡ್‌ನ ವಿಭಜನೆಗೆ ರಶ್ಯಾ ಮತ್ತು ಜರ್ಮನಿ ಒಪ್ಪಿಗೆ ಸೂಚಿಸಿದವು. 1950: ಅಂತರ್‌ರಾಷ್ಟ್ರೀಯ ಗಗನಯಾತ್ರಿಗಳ ಒಕ್ಕೂಟದ ಪ್ರಥಮ ಸಭೆ ಈ ದಿನ ಪ್ಯಾರಿಸ್‌ನಲ್ಲಿ ಆರಂಭವಾಯಿತು. 1972: ದಕ್ಷಿಣ ಆಫ್ರಿಕಾದಲ್ಲಿ ಪ್ರಯಾಣಿಕ ರೈಲೊಂದು ಹಳಿ ತಪ್ಪಿದ ಪರಿಣಾಮ...
22nd Sep, 2018
1803: ಅಸ್ಸಾಯೆ ಕದನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಮರಾಠಾ ಸೈನ್ಯವನ್ನು ಸೋಲಿಸಿತು. 1821: ಗ್ರೀಕ್ ಸ್ವಾತಂತ್ರ ಹೋರಾಟ ಸಮಯದಲ್ಲಿ ಗ್ರೀಕ್ ಸೈನ್ಯವು ಸುಮಾರು 30,000 ಜನ ಟರ್ಕರನ್ನು ಹತ್ಯೆಗೈಯಿತು. 1863: 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದ ನಾಯಕರಲ್ಲೊಬ್ಬರಾದ ರಾವ್ ತುಲಾರಾಮ್ ಈ ದಿನ...
19th Sep, 2018
1519: ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗಲನ್ ನಾಯಕತ್ವದ ತಂಡ ಈ ದಿನ ತನ್ನ ಪ್ರಥಮ ಯಶಸ್ವಿ ವಿಶ್ವಪರ್ಯಟನೆಯನ್ನು ಪೂರ್ಣಗೊಳಿಸಿತು. ಆದರೆ ಮೆಗಲನ್ ಮಾರ್ಗ ಮಧ್ಯದಲ್ಲಿಯೇ ಹತ್ಯೆಯಾದನು. 1857: ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಬ್ರಿಟಿಷ್ ಸೇನಾಪಡೆಗಳು ಈ ದಿನ ದಿಲ್ಲಿಯನ್ನು ವಶಪಡಿಸಿಕೊಂಡವು. ಬ್ರಿಟಿಷ್ ಆಳ್ವಿಕೆಯ...
17th Sep, 2018
1810: ಚಿಲಿ ದೇಶವು ಸ್ಪೇನ್‌ನಿಂದ ಬಿಡುಗಡೆ ಪಡೆದು ಸ್ವತಂತ್ರ ದೇಶವಾಯಿತು. 1906: ಹಾಂಕಾಂಗ್‌ನಲ್ಲಿ ಸಂಭವಿಸಿದ ಪ್ರಬಲ ಸುನಾಮಿ ದುರಂತಕ್ಕೆ ಅಂದಾಜು 10,000 ಜನರು ಮೃತಪಟ್ಟರು. 1916: ಇಂಗ್ಲೆಂಡ್‌ನ ರಾಜ ಜೇಮ್ಸ್‌ನ ಪ್ರತಿನಿಧಿಯಾಗಿ ಬ್ರಿಟಿಷ್ ರಾಯಭಾರಿ ಥಾಮಸ್ ರೋ ಮೊಗಲ್ ದೊರೆ ಜಹಾಂಗೀರ್‌ರನ್ನು ಭೇಟಿಯಾಗಲು ಸೂರತ್‌ಗೆ...
15th Sep, 2018
1906: ನಾರ್ವೆ ದೆೇಶದ ಶೋಧಕ ರೋವಾಲ್ಡ್ ಆ್ಯಮುಂಡ್ಸನ್ ಕಾಂತೀಯ ದಕ್ಷಿಣ ಧ್ರುವವನ್ನು ಕಂಡುಹಿಡಿದನು. 1926: ಅಮೆರಿಕದ ಫ್ಲೊರಿಡಾ ಮತ್ತು ಅಲಬಾಮಾ ಪ್ರದೇಶಗಳಲ್ಲಿ ಚಂಡಮಾರುತದ ಪರಿಣಾಮ 372 ಜನ ಪ್ರಾಣ ಕಳೆದುಕೊಂಡರು. 1931: ಸ್ವಾತಂತ್ರ ಹೋರಾಟದ ಸಮಯದಲ್ಲಿ ಪಶ್ಚಿಮ ಬಂಗಾಳದ ಹಿಲ್ಜಿ ಜೈಲಿನಲ್ಲಿ ದಂಗೆಯೆದ್ದಿದ್ದ ಸಂತೋಷ್‌ಕುಮಾರ್...
08th Sep, 2018
1739: ಬ್ರಿಟಿಷ್ ಆಡಳಿತದಲ್ಲಿದ್ದ ಅಮೆರಿಕದ ದಕ್ಷಿಣ ಕರೋಲಿನಾದ ಸ್ಟೋನೊ ಎಂಬಲ್ಲಿ ಜೆಮ್ಮಿ ಎಂಬವರ ನೇತೃತ್ವದಲ್ಲಿ ದಂಗೆಯೆದ್ದ ಗುಲಾಮರು 25 ಬಿಳಿಯರನ್ನು ಹತ್ಯೆಗೈದರು. 1915: ಈ ದಿನ ಕ್ರಾಂತಿಕಾರಿ ಬಾಗಾ ಜತಿನ್ ಮತ್ತು ಆತನ ಸಹಚರರು ಒಡಿಶಾದ ಬುರಿ ಬಲಂಗ್ ನದಿಯ ದಂಡೆಯ ಮೇಲೆ...
01st Sep, 2018
1573: ಮುಘಲ್ ದೊರೆ ಅಕ್ಬರ್ ಅಹ್ಮದಾಬಾದ್‌ನಲ್ಲಿ ನಡೆದ ಕದನವೊಂದರಲ್ಲಿ ಗೆದ್ದು ಗುಜರಾತ್‌ನ್ನು ವಶಪಡಿಸಿಕೊಂಡನು. 1666: ಲಂಡನ್‌ನಲ್ಲಿ ಮಹಾ ಬೆಂಕಿ ದುರಂತ ಈ ದಿನ ಸಂಭವಿಸಿತು. ಪಡ್ಡಿಂಗ್ ಬೀದಿಯಲ್ಲಿ ಹೊತ್ತಿಕೊಂಡ ಬೆಂಕಿಗೆ ಲಂಡನ್ ನಗರದ ಶೇ.80ರಷ್ಟು ಭಾಗ ನಾಶವಾಯಿತು. 1935: ಫ್ಲೋರಿಡಾದಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ...
25th Aug, 2018
1303: ಖಿಲ್ಜಿ ವಂಶದ ಪ್ರಖ್ಯಾತ ಸುಲ್ತಾನ ಅಲ್ಲಾವುದ್ದೀನ್ ಖಲ್ಜಿ ಐತಿಹಾಸಿಕ ಕದನದಲ್ಲಿ ಚಿತ್ತೋರ್‌ಗಡ್ ಸಂಸ್ಥಾನದ ಮೇಲೆ ವಿಜಯ ಸಾಧಿಸಿದನು. 1843: ಟೈಪ್‌ರೈಟರ್ ಕಂಡುಹಿಡಿದ ಅಮೆರಿಕದ ಚಾರ್ಲ್ಸ್ ಥರ್ಬರ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು. 1858: ಟೆಲಿಗ್ರಾಫ್‌ನಿಂದ ವಿಶ್ವದಲ್ಲಿ ಮೊದಲ ಬಾರಿಗೆ ಸುದ್ದಿಯನ್ನು ಕಳುಹಿಸಲಾಯಿತು. 1895: ಅಮೆರಿಕದ ವಿಶ್ವಪ್ರಸಿದ್ಧ...
11th Aug, 2018
1865: ಈ ದಿನ ವೈದ್ಯಕೀಯ ಲೋಕಕ್ಕೆ ಒಂದು ಮಹತ್ವದ ಕೊಡುಗೆಯನ್ನು ಖ್ಯಾತ ಸರ್ಜನ್ ಜೋಸೆಫ್ ಲಿಸ್ಟರ್ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ ಉಂಟಾಗುವ ನಂಜು, ಸೋಂಕಿನಿಂದ ಹಲವಾರು ಜನ ಆಗ ಚಿಕಿತ್ಸೆಯಿಲ್ಲದೆ ಬಳಿ ಸಾಯುತ್ತಿದ್ದರು. ಜೋಸೆಫ್ ಲಿಸ್ಟರ್ ಈ ಕುರಿತು ಸುಮಾರು 13-14...
28th Jul, 2018
1783: ಲಾಖಾ ದ್ವೀಪದಲ್ಲಿ ಈ ದಿನ ಸಂಭವಿಸಿದ ಸ್ಕಾಪ್ಟರ್ ಹೆಸರಿನ ಭೀಕರ ಜ್ವಾಲಾಮುಖಿ ಸ್ಫೋಟದಲ್ಲಿ 9,000 ಜನ ದುರ್ಮರಣಕ್ಕೀಡಾದರು. ಆ ಪ್ರದೇಶದಲ್ಲಿದ್ದ ಸುಮಾರು 130 ಸಕ್ರಿಯ ಜ್ವಾಲಾ ಮುಖಿಗಳು ಒಮ್ಮೆಲೆ ಸ್ಫೋಟಿಸಿದ ಪರಿಣಾಮ ಬೃಹತ್ ಪ್ರಮಾಣದ ಲಾವಾರಸ ಚಿಮ್ಮಿತು. ಇದರಲ್ಲಿದ್ದ ಸಲ್ಫರ್...
21st Jul, 2018
1298: ಇಂಗ್ಲಿಷ್ ಸೈನ್ಯವು ಸ್ಕಾಟ್‌ಲ್ಯಾಂಡ್‌ನ್ನು ಫಾಲ್‌ಕ್ರಿಕ್ ಯುದ್ಧದಲ್ಲಿ ಪರಾಭವಗೊಳಿಸಿತು. 1678: ಮರಾಠಾ ರಾಜ ಶಿವಾಜಿಯು ಈ ದಿನ ವೆಲ್ಲೂರು ಕೋಟೆಯನ್ನು ವಶಪಡಿಸಿಕೊಂಡನು. 1729: ಬ್ರೆಝಿಲ್‌ನ ಮಿನಾಸ್ ಗೆರಾಸ್ ಎಂಬಲ್ಲಿ ವಜ್ರದ ಗಣಿ ಪತ್ತೆಯಾಯಿತು. 1952: ಪೋಲೆಂಡ್ ಕಮ್ಯುನಿಸ್ಟ್ ಆಡಳಿತವನ್ನು ಅಂಗೀ ಕರಿಸಿತು. 1960: ಕ್ಯೂಬಾ ದೇಶವು ತನ್ನ...
14th Jul, 2018
1898: ಕ್ಯಾಮಿಲೊ ಗೋಲ್ಗಿ ಎಂಬ ಇಟಾಲಿಯನ್ ವೈದ್ಯ ‘ಗೋಲ್ಗಿ’ ಭಾಗವನ್ನು ಕಂಡುಹಿಡಿದರು. ಇದು ಮನುಷ್ಯ ಶರೀರದ ಜೀವಕೋಶಗಳ ನಡುವೆ ಕೊಡು-ಕೊಳ್ಳುವಿಕೆಗೆ ಸಹಾಯ ಮಾಡುವ ಒಂದು ತೆಳುವಾದ ಜಾಲವಾಗಿದೆ. ಕ್ಯಾಮಿಲೊ ಅವರಿಗೆ 1906ರಲ್ಲಿ ವೈದ್ಯಶಾಸ್ತ್ರಕ್ಕೆ ನೊಬೆಲ್ ಪುರಸ್ಕಾರ ಸಂದಿತು. 1904: ಅಮೆರಿಕದ ಪ್ರಥಮ ಬೌದ್ಧಮಂದಿರ...
07th Jul, 2018
1497: ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮಾ ಲಿಸ್ಬನ್‌ನಿಂದ ತನ್ನ ಪ್ರಪ್ರಥಮ ಪ್ರಯಾಣವನ್ನು ಆರಂಭಿಸಿದ. ಬಳಿಕ ಇದೇ ಯಾನದಲ್ಲಿ ಆತ ಕೇರಳದ ಕಲ್ಲಿಕೋಟೆ ತಲುಪಿದ. ವಾಸ್ಕೋಡಗಾಮನು ಜಲಮಾರ್ಗವಾಗಿ ಭಾರತವನ್ನು ತಲುಪಿದ ಪ್ರಥಮ ಯುರೋಪಿಯನ್ ಎಂಬ ದಾಖಲೆಗೆ ಪಾತ್ರನಾಗಿದ್ದಾನೆ. 1918: ಭಾರತೀಯ ಶಾಸಕಾಂಗ ಸಭೆಗಳಲ್ಲಿ ಸುಧಾರಣೆ ತರುವ...
23rd Jun, 2018
1763: ಬಂಗಾಳದ ಮುರ್ಶಿದಾಬಾದ್‌ನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಈ ದಿನ ವಶಪಡಿಸಿಕೊಂಡಿತು. ಅಲ್ಲದೆ ಮೀರ್ ಜಾಫರ್‌ನನ್ನು ನವಾಬನೆಂದು ಘೋಷಿಸಲಾಯಿತು. 1812: ಫ್ರಾನ್ಸ್‌ನ ನೆಪೋಲಿಯನ್ ಬೋನಾ ಪಾರ್ಟೆ ನೇಮಾನ್ ನದಿಯನ್ನು ದಾಟಿ ರಶ್ಯಾದ ಮೇಲೆ ದಾಳಿ ಮಾಡಿದನು. 1901: ಖ್ಯಾತ ಚಿತ್ರಕಲಾವಿದ ಪ್ಯಾಬ್ಲೊ ಪಿಕಾಸೋರ...
03rd Jun, 2018
1892: ತೈಲ ಟ್ಯಾಂಕ್‌ವೊಂದು ಸ್ಫೋಟಗೊಂಡು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ 130 ಜನ ಮೃತಪಟ್ಟ ವರದಿಯಾಗಿದೆ. 1928: ಚೀನಾ ಗಣರಾಜ್ಯದ ಅಧ್ಯಕ್ಷ ಝಾಂಗ್ ಝುವೊಲಿನ್ ಜಪಾನಿ ಸೈನಿರಿಂದ ಹತ್ಯೆಗೈಯಲ್ಪಟ್ಟರು. 1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ವಶಪಡಿಸಿಕೊಂಡ ಜರ್ಮನ್ ಪ್ರದೇಶವನ್ನು ಹಂಚಿಕೊಳ್ಳಲು ಅಮೆರಿಕ, ಸೋವಿಯತ್ ರಶ್ಯಾ, ಬ್ರಿಟನ್ ಹಾಗೂ...
02nd Jun, 2018
1818: ಮೂರನೇ ಆಂಗ್ಲೋ-ಮರಾಠಾ ಯುದ್ಧ ಇಂದು ಕೊನೆಗೊಳ್ಳುವ ಮೂಲಕ ಬ್ರಿಟಿಷ್ ಹಾಗೂ ಮರಾಠಾ ಸಂಸ್ಥಾನಗಳ ಮಧ್ಯೆ ನಡೆಯುತ್ತಿದ್ದ ಯುದ್ಧಗಳು ಅಂತ್ಯ ಕಂಡವು. 1921: ಅಮೆರಿಕದ ಕೊಲರಾಡೋದಲ್ಲಿ ತ್ವರಿತ ಮೇಘ ಸ್ಫೋಟ ಸಂಭವಿಸಿ 120 ಜನ ಸಾವಿಗೀಡಾದ ವರದಿಯಾಗಿದೆ. 1962: ಫ್ರಾನ್ಸ್‌ನ ಬೋಯಿಂಗ್ 707 ವಿಮಾನವು...
19th May, 2018
1498: ಯುರೋಪಿಯನ್ನರು ಭಾರತಕ್ಕೆ ಬರಲು ಸಮುದ್ರ ಮಾರ್ಗ ಕಂಡುಹಿಡಿದ ದಿನ ಇಂದು. ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮಾ ಈ ದಿನ ಭಾರತದ ಕಲ್ಲಿಕೋಟೆಗೆ ಬಂದಿಳಿದನು. ಆ ಮೂಲಕ ಭಾರತಕ್ಕೆ ತಲುಪಬೇಕೆನ್ನುವ ಹಲವು ದಶಕಗಳ ಯುರೋಪಿಯನ್ನರ ಕನಸಿಗೆ ವಾಸ್ಕೋಡಗಾಮಾ ದಾರಿ ಮಾಡಿಕೊಟ್ಟನು. ಈ ಮಾರ್ಗದಿಂದಲೇ...
13th May, 2018
► 1811: ಪರಾಗ್ವೆ ಸ್ಪೇನ್‌ನಿಂದ ಮುಕ್ತಗೊಂಡು ಸ್ವತಂತ್ರ ದೇಶವಾಯಿತು. ► 1931: ಸ್ವಾತಂತ್ರಕ್ಕಾಗಿ ಒತ್ತಾಯಿಸಿ ವಿದೇಶಿ ವಸ್ತುಗಳ ಬಹಿಷ್ಕಾರ ಚಳವಳಿ ನಡೆಸಿದ್ದ ಗಾಂಧೀಜಿ ಬ್ರಿಟಿಷರೊಂದಿಗೆ ಮಾತುಕತೆಗೆ ಲಂಡನ್‌ಗೆ ತೆರಳಲು ಒಪ್ಪಿಕೊಂಡರು. 1948: ಇಸ್ರೇಲ್ ಸ್ವತಂತ್ರ ದೇಶದ ಘೋಷಣೆ ಇಂದು ಹೊರಬಿತ್ತು. ಫೆಲೆಸ್ತೀನ್‌ನಲ್ಲಿ ಬ್ರಿಟಿಷ್...
12th May, 2018
1643: ಚಿಲಿಯ ಸ್ಯಾಂಟಿಯಾಗೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಆ ದೇಶದ ಮೂರರಲ್ಲಿ ಒಂದು ಭಾಗದಷ್ಟು ಜನ ಸಾವನ್ನಪ್ಪಿದ ವರದಿಯಾಗಿದೆ. 1846: ಎರಡು ತಿಂಗಳ ಕಾಲ ನಡೆದ ಸಣ್ಣಪುಟ್ಟ ಸಂಘರ್ಷದ ನಂತರ ಅಮೆರಿಕ ಮೆಕ್ಸಿಕೊದ ವಿರುದ್ಧ ಯುದ್ಧ ಘೋಷಿಸಿತು. 1861: ‘ದಿ ಗ್ರೇಟ್ ಕೊಮೆಟ್ 1861’...
28th Apr, 2018
1769: ಉಗಿಯಂತ್ರ (ಸ್ಟೀಮ್ ಇಂಜಿನ್) ಕಂಡು ಹಿಡಿದ ಸ್ಕಾಟ್ಲೆಂಡ್ ಇಂಜಿನಿಯರ್, ರಸಾಯನ ಶಾಸ್ತ್ರಜ್ಞ ಜೇಮ್ಸ್ ವ್ಯಾಟ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು. 1853: ಸಿ/1853 ಗಿ1 ಹೆಸರಿನ ಧೂಮಕೇತು ಭೂಮಿಗರ ಕೇವಲ 0.0839 ಆಂಪೀರಿಕಲ್ ಯುನಿಟ್‌ನಷ್ಟು ಸಮೀಪಕ್ಕೆ ಬಂದ ಪ್ರಕರಣ ದಾಖಲಾಯಿತು. 1916: ರಾಜಧಾನಿ ಡಬ್ಲಿನ್‌ನಲ್ಲಿ ವಶಪಡಿಸಿಕೊಂಡಿದ್ದ...
21st Apr, 2018
1906: 10ನೇ ಒಲಿಂಪಿಕ್ಸ್ ಕ್ರೀಡೆಗಳು ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ ಆರಂಭಗೊಂಡವು. 1915: ಯುದ್ಧದಲ್ಲಿ ಮೊದಲ ಬಾರಿಗೆ ವಿಷಾನಿಲದ ಪ್ರಯೋಗ ನಡೆಯಿತು. ಪ್ರಥಮ ಮಹಾಯುದ್ಧದಲ್ಲಿ ಜರ್ಮನಿಯು ಕ್ಲೋರಿನ್ ಅನ್ನು ವಿಷಾನಿಲ ವಾಗಿ ತನ್ನ ವಿರೋಧಿ ರಾಷ್ಟ್ರದ ಮೇಲೆ ಉಪಯೋಗಿಸಿತು. 1926: ಪರ್ಷಿಯಾ, ಟರ್ಕಿ ಮತ್ತು ಅಫ್ಘಾನಿಸ್ತಾನ್...
14th Apr, 2018
1755: ಸ್ಯಾಮ್ಯುಯೆಲ್ ಜಾನ್ಸನ್‌ರ ಎ ಡಿಕ್ಷನರಿ ಆಫ್ ಇಂಗ್ಲಿಷ್ ಲಾಂಗ್ವೇಜ್ ಕೃತಿ ಲಂಡನ್‌ನಲ್ಲಿ ಪ್ರಕಟವಾಯಿತು. 1788: ಬ್ರಿಟನ್, ನೆದರ್ಲೆಂಡ್ ಹಾಗೂ ಪರ್ಶಿಯಾಗಳ ಮಧ್ಯೆ ಶಾಂತಿ ಒಪ್ಪಂದ ಏರ್ಪಟ್ಟಿತು. 1896: ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದಿದ್ದ ಪ್ರಥಮ ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳು ಇಂದು ತೆರೆಕಂಡವು. 1912: 2,200 ಪ್ರಯಾಣಿಕರನ್ನು...
07th Apr, 2018
1759: ಫ್ರಾನ್ಸಿಸ್ ಫೋರ್ಡ್ ನೇತೃತ್ವದ ಬ್ರಿಟಿಷ್ ಸೈನ್ಯವು ಫ್ರೆಂಚ್ ಸೈನ್ಯವನ್ನು ಸೋಲಿಸುವ ಮೂಲಕ ಭಾರತದ ಮಚಲೀಪಟ್ಟಣವನ್ನು ವಶಪಡಿಸಿಕೊಂಡಿತು. 1898: ಅತ್ಬಾರಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ಆಂಗ್ಲೋ-ಈಜಿಪ್ಟ್ ಜಂಟಿ ಸೈನ್ಯವು 6,000 ಸುಡಾನ್ ಸೈನಿಕರನ್ನು ಹತ್ಯೆಗೈಯಿತು. 1929: ಭಗತ್‌ಸಿಂಗ್ ಹಾಗೂ ಆತನ ಸಂಗಾತಿ...
31st Mar, 2018
1931: ನಿಕರಾಗುವಾ ದೇಶದ ರಾಜಧಾನಿ ಮನಾಗುವಾ ಎಂಬಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 2,000 ಜನ ಬಲಿಯಾದ ವರದಿಯಾಗಿದೆ. 1936: ಒರಿಯಾ ಭಾಷೆ ಮಾತನಾಡುವ ಜನರ ಪ್ರದೇಶ ಒರಿಸ್ಸಾ ಹೆಸರಿನಲ್ಲಿ ಈ ದಿನ ಸ್ಥಾಪನೆಯಾಯಿತು. ಬ್ರಿಟಿಷ್ ಆಡಳಿತದಲ್ಲಿ ಆರಂಭಗೊಂಡ ಈ ರಾಜ್ಯಕ್ಕೆ 2011ರ ನ.4ರಂದು...
17th Mar, 2018
1937: ಅಮೆರಿಕ ಟೆಕ್ಸಾಸ್‌ನ ನ್ಯೂ ಲಂಡನ್‌ನ ಶಾಲೆಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿ 400ಕ್ಕಿಂತ ಅಧಿಕ ಜನ ಬಲಿಯಾದ ವರದಿಯಾಗಿತ್ತು. 1940: ಜರ್ಮನಿ ಹಾಗೂ ಇಟಲಿಯ ಸರ್ವಾಧಿಕಾರಿಗಳಾದ ಕ್ರಮವಾಗಿ ಅಡಾಲ್ಫ್ ಹಿಟ್ಲರ್ ಹಾಗೂ ಮುಸೋಲೋನಿ ಬ್ರೆನರ್ ಪಾಸ್ ಎಂಬಲ್ಲಿ ಭೇಟಿಯಾಗಿ ಎರಡನೇ ವಿಶ್ವ ಮಹಾಯುದ್ಧದಲ್ಲಿ...
03rd Mar, 2018
* 1789: ಅಮೆರಿಕದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತು. ಅಮೆರಿಕ ಕಾಂಗ್ರೆಸ್‌ನ 9 ಸೆನೆಟರ್‌ಗಳು ಹಾಗೂ 13 ಪ್ರತಿನಿಧಿಗಳು ಸಭೆ ಸೇರಿ ಈ ಕುರಿತು ಘೋಷಣೆ ಹೊರಡಿಸಿದರು. * 1899: ಕ್ವೀನ್ಸ್‌ಲ್ಯಾಂಡ್‌ನ ದಕ್ಷಿಣ ಕುಕ್‌ಟೌನ್‌ನಲ್ಲಿ ಮಹಿನಾ ಹೆಸರಿನ ಪ್ರಬಲ ಚಂಡಮಾರುತಕ್ಕೆ 300 ಜನ ಬಲಿಯಾದರು....
Back to Top